ಬೆಂಗಳೂರಿನಲ್ಲಿ ಕೊರೊನಾ ಸೋಂಕು ಪ್ರತಿರೋಧ ಪ್ರಮಾಣ ಎಷ್ಟಿದೆ..? ಬಿಬಿಎಂಪಿ ಸಮೀಕ್ಷೆ

ಬಿಬಿಎಂಪಿಯ ಆಶಾ, ಎಎನ್‌ಎಂ ಕಾರ್ಯಕರ್ತರು, ಪ್ರಯೋಗಾಲಯ ತಂತ್ರಜ್ಞರ ಕಾರ್ಯಪಡೆಗಳು ಮನೆ-ಮನೆಗೆ ಭೇಟಿ ನೀಡಿ, ಗುರುತಿಸಲ್ಪಟ್ಟ ವ್ಯಕ್ತಿಗಳ ರಕ್ತದ ಮಾದರಿ ಮತ್ತು ಗಂಟಲಿನ ದ್ರವದ ಮಾದರಿಯನ್ನು ಸಂಗ್ರಹಿಸುತ್ತಾರೆ.

ಬೆಂಗಳೂರಿನಲ್ಲಿ ಕೊರೊನಾ ಸೋಂಕು ಪ್ರತಿರೋಧ ಪ್ರಮಾಣ ಎಷ್ಟಿದೆ..? ಬಿಬಿಎಂಪಿ ಸಮೀಕ್ಷೆ
Linkup
: ನಗರದ ನಿವಾಸಿಗಳಲ್ಲಿ ಸೋಂಕು ಪ್ರಮಾಣ ಮತ್ತು ತೀವ್ರತೆಯನ್ನು ತಿಳಿಯುವ ಸಲುವಾಗಿ ಬಿಬಿಎಂಪಿಯಿಂದ 'ಸೆರೋ 'ಯನ್ನು ಬುಧವಾರ ಆರಂಭಿಸಲಾಗಿದೆ. 2,000 ಜನರನ್ನು ಸಮೀಕ್ಷೆಗೆ ಒಳಪಡಿಸಿ, ಎಷ್ಟು ಮಂದಿ ಕೋವಿಡ್‌ ವೈರಾಣುವಿಗೆ ಪ್ರತಿಕಾಯ ಬೆಳೆಸಿಕೊಂಡಿದ್ದಾರೆ ಎಂಬುದರ ಕುರಿತು ಅಧ್ಯಯನ ನಡೆಸಲಾಗುತ್ತಿದೆ. ವಯಸ್ಸಿನ ಆಧಾರದ ಮೇಲೆ ಮೂರು ಗುಂಪುಗಳಾಗಿ ವಿಂಗಡಿಸಿ, ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. 18 ವರ್ಷದೊಳಗಿನ (ಶೇ 30), 18 ವರ್ಷ ಮೇಲ್ಪಟ್ಟವರು (ಶೇ 50) ಮತ್ತು 45 ವರ್ಷ ಮೇಲ್ಪಟ್ಟ (ಶೇ 20) ವರನ್ನು ಸಮೀಕ್ಷೆಗೆ ಒಳಪಡಿಸಲಾಗುತ್ತಿದೆ. ಲಸಿಕೆ ಪಡೆದ 1,000 ಮಂದಿ ಹಾಗೂ 1,000 ಮಂದಿ ಲಸಿಕೆ ಪಡೆಯದೆ ಇರುವವರ ರಕ್ತದ ಸೀರಂಗಳನ್ನು ಸಂಗ್ರಹಿಸಿ, ಅವರಲ್ಲಿ ಎಷ್ಟು ಪ್ರಮಾಣದಲ್ಲಿ ಪ್ರತಿಕಾಯವಿದೆ ಎಂಬುದನ್ನು ಪರೀಕ್ಷಿಸಲಾಗುತ್ತಿದೆ. ಬಿಬಿಎಂಪಿಯ ಆಶಾ, ಎಎನ್‌ಎಂ ಕಾರ್ಯಕರ್ತರು, ಪ್ರಯೋಗಾಲಯ ತಂತ್ರಜ್ಞರ ಕಾರ್ಯಪಡೆಗಳು ಮನೆ-ಮನೆಗೆ ಭೇಟಿ ನೀಡಿ, ಗುರುತಿಸಲ್ಪಟ್ಟ ವ್ಯಕ್ತಿಗಳ ರಕ್ತದ ಮಾದರಿ ಮತ್ತು ಗಂಟಲಿನ ದ್ರವದ ಮಾದರಿಯನ್ನು ಸಂಗ್ರಹಿಸುತ್ತಾರೆ. ರಕ್ತದ ಮಾದರಿಯನ್ನು ಪ್ರಯೋಗಾಲಯದಲ್ಲಿ ಮತ್ತು ಗಂಟಲಿನ ದ್ರವದ ಮಾದರಿಯನ್ನು ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ವಲಯ ಮಟ್ಟದಲ್ಲಿನ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು, ಆರೋಗ್ಯಾಧಿಕಾರಿಗಳು ಹಾಗೂ ಆರೋಗ್ಯ ವೈದ್ಯಾಧಿಕಾರಿಗಳ ಸಮನ್ವಯದೊಂದಿಗೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ತಂಡವು ಸಮೀಕ್ಷಾ ಕಾರ್ಯ ಕೈಗೊಂಡಿದೆ. 'ಮುಂದಿನ ಒಂದು ವಾರದೊಳಗೆ 2 ಸಾವಿರ ಮಂದಿಯನ್ನು ಸೆರೋ ಸಮೀಕ್ಷೆಗೆ ಒಳಪಡಿಸಲಾಗುವುದು. ಸಮೀಕ್ಷೆ ವೇಳೆ ಸಂಗ್ರಹಿಸಲಾದ ರಕ್ತದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಅಧ್ಯಯನ ಮಾಡಲಾಗುವುದು. ಇದರಿಂದ ನಗರದ ಜನರ ದೇಹದಲ್ಲಿ ಎಷ್ಟು ಪ್ರಮಾಣದಲ್ಲಿ ರೋಗ ನಿರೋಧಕ ಶಕ್ತಿ ಇದೆ ಎಂಬುದು ಗೊತ್ತಾಗಲಿದೆ' ಎಂದು ಪಾಲಿಕೆಯ ವಿಶೇಷ ಆಯುಕ್ತ (ಆರೋಗ್ಯ) ಡಿ.ರಂದೀಪ್‌ ತಿಳಿಸಿದರು. 'ಕೊಳೆಗೇರಿ ಪ್ರದೇಶಗಳು, ಅಪಾರ್ಟ್‌ಮೆಂಟ್‌ ವಸತಿ ಸಮುಚ್ಚಯಗಳು ಹಾಗೂ ಮಧ್ಯಮ ವರ್ಗದ ಪ್ರದೇಶಗಳಲ್ಲಿನ ನಿವಾಸಿಗಳನ್ನು ಆಯ್ಕೆ ಮಾಡಿಕೊಂಡು ಸೆರೋ ಸಮೀಕ್ಷೆ ನಡೆಸಲಾಗುತ್ತಿದೆ. ಕೋವಿಡ್‌ ಲಸಿಕೆ ಪಡೆದವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಎಷ್ಟು ಉತ್ಪತ್ತಿಯಾಗಿದೆ, ಈವರೆಗೆ ಲಸಿಕೆ ಪಡೆಯದವರಲ್ಲಿ ರೋಗ ನಿರೋಧಕ ಶಕ್ತಿ ಎಷ್ಟಿದೆ ಎಂಬುದನ್ನು ತಿಳಿಯಲಾಗುವುದು. ಅಲ್ಲದೆ, ಇದರಲ್ಲಿ ಎಷ್ಟು ಮಂದಿಗೆ ಸೋಂಕು ಬಂದಿದೆ ಮತ್ತು ಸೋಂಕು ತಗುಲಿಲ್ಲ ಎಂಬ ಮಾಹಿತಿಯೂ ಲಭ್ಯವಾಗಲಿದೆ' ಎಂದರು. ವತಿಯಿಂದ ನಗರದಲ್ಲಿ 2,000 ಮಂದಿಯನ್ನು ಸೆರೋ ಸಮೀಕ್ಷೆಗೆ ಒಳಪಡಿಸಿರುವ ಕಾರ್ಯಕ್ಕೆ ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರು ಹಲಸೂರು ರೆಫೆರಲ್‌ ಆಸ್ಪತ್ರೆಯಲ್ಲಿ ಚಾಲನೆ ನೀಡಿದರು. ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ, ಮುಖ್ಯ ಆರೋಗ್ಯಾಧಿಕಾರಿ (ಕ್ಲಿನಿಕಲ್‌) ಡಾ. ನಿರ್ಮಲಾ ಬುಗ್ಗಿ ಮತ್ತಿತರರು ಉಪಸ್ಥಿತರಿದ್ದರು. ಡಿ.ಜೆ.ಹಳ್ಳಿಯಲ್ಲಿ ತಿಂಗಳಿಂದ ಸೋಂಕಿನ ಪ್ರಕರಣ ಇಲ್ಲ: 'ಮುಂಬರುವ ದಿನಗಳಲ್ಲಿ ಸೋಂಕು ತಡೆಗೆ ನಿಯಮಗಳನ್ನು ರೂಪಿಸಲು ಸೆರೋ ಸಮೀಕ್ಷೆಯು ನೆರವಾಗಲಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಪ್ರದೇಶಗಳ ಜನರಿಗೆ ಪೂರ್ಣ ಪ್ರಮಾಣದಲ್ಲಿ ಲಸಿಕೆ ನೀಡಲು ಹಾಗೂ ಕೋವಿಡ್‌ ಪರೀಕ್ಷೆಗೊಳಪಡಿಸಿ, ಸೋಂಕು ನಿಯಂತ್ರಿಸಲಾಗುವುದು. ಡಿ.ಜೆ.ಹಳ್ಳಿಯಲ್ಲಿ ಕಳೆದ ಒಂದು ತಿಂಗಳಿನಿಂದ ಒಂದೇ ಒಂದು ಸೋಂಕಿತ ಪ್ರಕರಣವೂ ಪತ್ತೆಯಾಗಿಲ್ಲ. ಈ ಪ್ರದೇಶದಲ್ಲಿ ಮೊದಲ ಅಲೆ ಕಾಣಿಸಿಕೊಂಡಾಗ ಹೆಚ್ಚು ಮಂದಿ ಸೋಂಕು ಬಾಧಿತರಾಗಿದ್ದರು. ಇದರಿಂದಾಗಿ ಇಲ್ಲಿನ ಜನರಲ್ಲಿ ಸೋಂಕು ಪ್ರತಿರೋಧಕ ಶಕ್ತಿ ಹೆಚ್ಚಿನ ಪ್ರಮಾಣದಲ್ಲಿಉತ್ಪತ್ತಿಯಾಗಿದೆ' ಎಂದು ಡಿ.ರಂದೀಪ್‌ ಹೇಳಿದರು.