ವಾಹನ ತಪಾಸಣೆ ನೆಪದಲ್ಲಿ ಸವಾರರಿಗೆ ಕಿರುಕುಳ ನೀಡಿದರೆ ಕಠಿಣ ಕ್ರಮ: ಸಂಚಾರಿ ಆಯುಕ್ತರ ಎಚ್ಚರಿಕೆ

ನಗರದಲ್ಲಿ ಸಂಚಾರ ಪೊಲೀಸರು ದಾಖಲೆಗಳ ಪರಿಶೀಲನೆ ನೆಪದಲ್ಲಿ ವಾಹನ ಸವಾರರನ್ನು ತಡೆದು ಅನಗತ್ಯ ಕಿರುಕುಳ ನೀಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಸಂಬಂಧ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರು, ಸಂಚಾರ ನಿಯಮ ಉಲ್ಲಂಘನೆ ಕಂಡು ಬಂದರೆ ಮಾತ್ರ ವಾಹನಗಳನ್ನು ತಡೆಯಬೇಕು. ಅನಗತ್ಯವಾಗಿ ವಾಹನಗಳನ್ನು ನಿಲ್ಲಿಸಬಾರದು ಎಂದು ಸೂಚನೆ ನೀಡಿದ್ದರು. ಇದು ಸರಿಯಾಗಿ ಪಾಲನೆಯಾಗದ ಹಿನ್ನೆಲೆ ಆದೇಶ ಪಾಲನೆ ಮಾಡುವಂತೆ ಜು. 16ರಂದು ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಎಸ್ಪಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.