ಅಕ್ಷಯ ತೃತೀಯ: ಕೊರೊನಾರ್ಭಟದ ಮಧ್ಯೆಯೂ ರಾಜ್ಯದಲ್ಲಿ 30 ಕೋಟಿ ರೂ. ಚಿನ್ನಾಭರಣ ವಹಿವಾಟು..

ಲಾಕ್‌ಡೌನ್‌ ಇರುವುದರಿಂದ ಮಾಮೂಲಿ ಪಾರ್ಸೆಲ್‌ ಸೇವೆಗೆ ಅವಕಾಶ ಇರಲಿಲ್ಲ. ಹೀಗಾಗಿ ಮೆಡಿಸಿನ್‌ ಕಿಟ್‌ ಹಾಗೂ ಸ್ವೀಟ್ಸ್‌ ಜೊತೆ ಒಂದು ಗ್ರಾಂ ಚಿನ್ನದ ನಾಣ್ಯವನ್ನು ಪಾರ್ಸೆಲ್‌ ಕಳುಹಿಸಲಾಯಿತು.

ಅಕ್ಷಯ ತೃತೀಯ: ಕೊರೊನಾರ್ಭಟದ ಮಧ್ಯೆಯೂ ರಾಜ್ಯದಲ್ಲಿ 30 ಕೋಟಿ ರೂ. ಚಿನ್ನಾಭರಣ ವಹಿವಾಟು..
Linkup
: ರಾಜ್ಯದಲ್ಲಿ ದಿನವಾದ ಶುಕ್ರವಾರ ಸುಮಾರು 30 ಕೋಟಿ ರೂ. ಬಂಗಾರದ ವಹಿವಾಟು ನಡೆದಿದೆ ಎಂದು ಕರ್ನಾಟಕ ರಾಜ್ಯ ವರ್ತಕರ ಸಂಘ ತಿಳಿಸಿದೆ. ಆಭರಣಕ್ಕಾಗಿ ಮಾಸಿಕ ಕಂತಿನಲ್ಲಿ ಹಣ ಕಟ್ಟಿದ್ದ ಗ್ರಾಹಕರಿಗೆ ಸಾಂಕೇತಿಕವಾಗಿ ಒಂದು ಗ್ರಾಂ ಚಿನ್ನದ ನಾಣ್ಯವನ್ನು ಆರೋಗ್ಯ ದೃಷ್ಟಿಯಿಂದ ಪ್ರಾಥಮಿಕ ಚಿಕಿತ್ಸೆಯ ಮೆಡಿಕಲ್‌ ಕಿಟ್‌ ನೊಂದಿಗೆ ಮನೆಗೇ ತಲುಪಿಸಲಾಯಿತು ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಾ. ಬಿ. ರಾಮಾಚಾರಿ ತಿಳಿಸಿದರು. ಬಹುತೇಕ ಮಳಿಗೆಗಳಲ್ಲಿ ಆನ್‌ಲೈನ್‌ ಬುಕ್ಕಿಂಗ್‌ಗೆ ಅವಕಾಶ ಮಾಡಿಕೊಡಲಾಗಿತ್ತು. ಸಾವಿರಾರು ಮಂದಿ ಆನ್‌ಲೈನ್‌ ನಲ್ಲಿ ಬುಕ್‌ ಮಾಡಿ ರಸೀದಿ ಪಡೆದಿದ್ದಾರೆ. ಲಾಕ್‌ಡೌನ್‌ ಮುಗಿದ ಬಳಿಕ ತಮಗೆ ಬೇಕಾದ ಆಭರಣ ಖರೀದಿಸುವರು. ಮಲಬಾರ್‌, ಭೀಮಾ, ತಾನಿಷ್ಕ್ ಸೇರಿದಂತೆ ಹಲವು ಮಳಿಗೆಗಳು ಆನ್‌ಲೈನ್‌ನಲ್ಲಿ ಗ್ರಾಹಕರಿಗೆ ಆಭರಣಗಳ ಮಾರಾಟ ಮಾಡಿದವು. ನೆರೆ ರಾಜ್ಯಗಳಲ್ಲಿ ಜ್ಯುವೆಲ್ಲರಿ ಮಾರಾಟಕ್ಕೆ ಅವಕಾಶವಿತ್ತು. ಹೀಗಾಗಿ ರಾಜ್ಯದ ಆಭರಣ ಮಾರಾಟಗಾರರು ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳಿಗೆ ಹೋಗಿ ಮಧ್ಯಾಹ್ನದವರೆಗೆ ಮಾರಾಟ ಮಾಡಿದ್ದಾರೆ ಎಂದು ರಾಮಾಚಾರಿ ತಿಳಿಸಿದರು. ಸ್ವೀಟ್ಸ್‌, ಮಾಸ್ಕ್‌ನೊಂದಿಗೆ ಪಾರ್ಸೆಲ್‌: ಲಾಕ್‌ಡೌನ್‌ ಇರುವುದರಿಂದ ಮಾಮೂಲಿ ಪಾರ್ಸೆಲ್‌ ಸೇವೆಗೆ ಅವಕಾಶ ಇರಲಿಲ್ಲ. ಹೀಗಾಗಿ ಮೆಡಿಸಿನ್‌ ಕಿಟ್‌ ಹಾಗೂ ಸ್ವೀಟ್ಸ್‌ ಜೊತೆ ಒಂದು ಗ್ರಾಂ ಚಿನ್ನದ ನಾಣ್ಯವನ್ನು ಪಾರ್ಸೆಲ್‌ ಕಳುಹಿಸಲಾಯಿತು. ಈ ಪಾರ್ಸೆಲ್‌ನಲ್ಲಿ ಆರು ಮಾಸ್ಕ್‌, ಸ್ಯಾನಿಟೈಸರ್‌, ಡೋಲೊ 650 ಮಾತ್ರೆಗಳನ್ನು ಗ್ರಾಹಕರಿಗೆ ಆಭರಣ ಮಳಿಗೆಗಳು ಕಳುಹಿಸಿಕೊಟ್ಟವು. ಏಪ್ರಿಲ್‌ 22ರಿಂದಲೇ ಆನ್‌ಲೈನ್‌ ಬುಕಿಂಗ್‌ ಆರಂಭಿಸಿದೆವು. ಸಾಕಷ್ಟು ಮಂದಿ ಬುಕ್‌ ಮಾಡಿದ್ದಾರೆ. ಲಾಕ್‌ಡೌನ್‌ ಮುಗಿದ ನಂತರ ಅವರು ಬಂದು ಆಭರಣಗಳನ್ನು ಖರೀದಿಸುವರು. ಬರಲಾಗದಿದ್ದವರಿಗೆ ಅವರ ಆಯ್ಕೆಯ ಆಭರಣಗಳನ್ನು ಅವರ ಮನೆಗೆ ತಲುಪಿಸಲಾಗುವುದು. ಆದರೆ ಅಕ್ಷಯ ತೃತೀಯದಂದೇ ಖರೀದಿಸಬೇಕೆನ್ನುವವರಿಂದಾಗಿ ಶೇ.25 ರಷ್ಟು ವ್ಯಾಪಾರ ವಹಿವಾಟು ನಡೆದಿದೆ ಎಂದು ಕರ್ನಾಟಕ ಆಭರಣ ಮಾರಾಟಗಾರರ ಸಂಘದ ಅಧ್ಯಕ್ಷ ಟಿ.ಎ. ಶರವಣ ತಿಳಿಸಿದರು.