ಕಸ್ತೂರಿನಗರ ಕಟ್ಟಡ ಕುಸಿತ ಪ್ರಕರಣ: 15 ಮಂದಿ ಜೀವ ಉಳಿಸಿದ ಭದ್ರತಾ ಸಿಬ್ಬಂದಿ

ಬೆಂಗಳೂರು ಕೆಆರ್‌ ಪುರಂನ ಕಸ್ತೂರಿ ನಗರದ ಕಟ್ಟಡದಲ್ಲಿ ಮೂರು ಕುಟುಂಬಗಳು ವಾಸವಿದ್ದವು. ಹಾಸಿಗೆ, ಬಟ್ಟೆ, ಬರೆ, ಪಾತ್ರೆ-ಪಗಡ ಎಲ್ಲವೂ ಅವಶೇಷಗಳ ಅಡಿಯಲ್ಲಿ ಸಿಲುಕಿವೆ. ಬಹುತೇಕ ಉಪಯೋಗಿಸಲಾಗದಷ್ಟು ಹಾಳಾಗಿವೆ.

ಕಸ್ತೂರಿನಗರ ಕಟ್ಟಡ ಕುಸಿತ ಪ್ರಕರಣ: 15 ಮಂದಿ ಜೀವ ಉಳಿಸಿದ ಭದ್ರತಾ ಸಿಬ್ಬಂದಿ
Linkup
ಕೆ.ಆರ್‌.ಪುರ: ಕಸ್ತೂರಿ ನಗರದಲ್ಲಿ ಬಹುಮಹಡಿ ಕಟ್ಟಡ ಕುಸಿತದ ವೇಳೆ ಭದ್ರತಾ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದಾಗಿ 15 ಮಂದಿಯ ಜೀವ ಉಳಿಯುವಂತಾಗಿದೆ. ಸನ್‌ಶೈನ್‌ ಅಪಾರ್ಟ್‌ಮೆಂಟ್‌ ಕಟ್ಟಡದ ಕಪ್ತಡ್‌ ಬೀರ್‌ ಊಟಕ್ಕೆ ಕುಳಿತಾಗ ಯಾವುದೋ ಶಬ್ದ ಕೇಳಿ ಬಂದಿದೆ. ಕಟ್ಟಡದ ಮೇಲೆ ಪೆಂಟ್‌ಹೌಸ್‌ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದುದರಿಂದ ಅಲ್ಲಿಂದಲೇ ಏನೋ ಬಿದ್ದಿದೆ ಎಂದು ಆರಂಭದಲ್ಲಿ ನಿರ್ಲಕ್ಷಿಸಿದ್ದರು. ಕೆಲ ಹೊತ್ತಿನ ಬಳಿಕ ಮತ್ತೆ ಶಬ್ದವಾಗಿದೆ. ಇದರಿಂದ ಬೇಸ್‌ಮೆಂಟ್‌ನಲ್ಲಿ ತೆರಳಿ ಗಮನಿಸಿದಾಗ ಪಿಲ್ಲರ್‌ ಕುಸಿಯುತ್ತಿದ್ದುದು ಕಂಡು ಬಂದಿದೆ. ತಕ್ಷಣ ಕೂಗಿಕೊಂಡು ಮನೆ ಮನೆಗೆ ತೆರಳಿದ್ದಾನೆ. ಮನೆಗಳಲ್ಲಿದ್ದ ಮೂವರು ಮಹಿಳೆಯರನ್ನು ಹೊರ ಕರೆತಂದಿದ್ದಾನೆ. ಪೆಂಟ್‌ಹೌಸ್‌ ಕಾಮಗಾರಿ ನಿರ್ವಹಿಸುತ್ತಿದ್ದ ಕಾರ್ಮಿಕರಿಗೂ ಕೂಗಿ ಹೇಳಿ ಕೆಳಕ್ಕೆ ಬರುವಂತೆ ತಿಳಿಸಿದ್ದಾನೆ. ಎಲ್ಲರೂ ಕೆಳಗೆ ಇಳಿದು ಬಂದ ಬಳಿಕ ಕಟ್ಟಡ ಸಂಪೂರ್ಣ ಕುಸಿದಿದೆ. ಮಾಲೀಕರ ವಿರುದ್ಧ ನಾನಾ ಪ್ರಕರಣ ದಾಖಲು '' ಕಸ್ತೂರಿನಗರದ ಕಟ್ಟಡ ಕುಸಿತದಿಂದ ಮಾಲೀಕರು, ಬಾಡಿಗೆದಾರರಿಗೆ ಮಾತ್ರವಲ್ಲದೆ, ಅಕ್ಕಪಕ್ಕದ ನಿವಾಸಿಗಳಿಗೂ ಹಾನಿಯಾಗಿದೆ. ಸಂಪೂರ್ಣ ಪರಿಹಾರ ಭರಿಸುವಂತೆ ಕಟ್ಟಡ ಮಾಲೀಕರ ವಿರುದ್ದ ದೂರು ಕಟ್ಟಡ ಕಾಯಿದೆ ಉಲ್ಲಂಘನೆ ಸೆಕ್ಷನ್‌ 238, 326, 329, 254, 256 ಅಡಿ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದ್ದರ ಸಂಬಂಧ ಐಪಿಸಿ 427, 268, ಅಪಾಯಕಾರಿ ಕಟ್ಟಡ ವಿನ್ಯಾಸ ಮಾಡಿದ್ದರ ಸಂಬಂಧ ಸಿಆರ್‌ಪಿಸಿ 290ರ ಅಡಿ ಕ್ರಮಕ್ಕೆ ಮುಂದಾಗಿದ್ದೇವೆ,'' ಎಂದು ಬಿಬಿಎಂಪಿ ಪೂರ್ವ ವಲಯ ಜಂಟಿ ಆಯುಕ್ತೆ ಪಲ್ಲವಿ ತಿಳಿಸಿದರು. ಬೀದಿಗೆ ಬಿದ್ದ ಬಾಡಿಗೆದಾರರು ಕಟ್ಟಡ ಕುಸಿತದಿಂದಾಗಿ ಬಾಡಿಗೆಗೆ ಇದ್ದ ನಿವಾಸಿಗಳು ಅಕ್ಷರಶಃ ಬೀದಿಗೆ ಬರುವಂತಾಗಿದೆ. ಕಟ್ಟಡದಲ್ಲಿ ಮೂರು ಕುಟುಂಬಗಳು ವಾಸವಿದ್ದವು. ಹಾಸಿಗೆ, ಬಟ್ಟೆ, ಬರೆ, ಪಾತ್ರೆ-ಪಗಡ ಎಲ್ಲವೂ ಅವಶೇಷಗಳ ಅಡಿಯಲ್ಲಿ ಸಿಲುಕಿವೆ. ಬಹುತೇಕ ಉಪಯೋಗಿಸಲಾಗದಷ್ಟು ಹಾಳಾಗಿವೆ. ತೆರವು ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ನಿವಾಸಿಗಳು ತಮ್ಮ ವಸ್ತುಗಳಿಗಾಗಿ ಹುಡುಕಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ''ಮನೆಯಲ್ಲಿ ಕೂಡಿಟ್ಟಿದ್ದ ಅಲ್ಪಸ್ವಲ್ಪ ಹಣ ಕೂಡ ಮಣ್ಣು ಪಾಲಾಗಿದೆ. ಚಿನ್ನಾಭರಣಗಳನ್ನು ಕಳೆದುಕೊಂಡಿದ್ದೇವೆ. ಸಿಕ್ಕಷ್ಟು ಸಿಗಲಿ ಎಂದು ಹುಡುಕಾಟ ಮುಂದುವರಿಸಿದ್ದೇವೆ. ನಮ್ಮ ಬದುಕು ಬೀದಿಗೆ ಬಿದ್ದಿದೆ. ಸಂಬಂಧಪಟ್ಟವರು ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಬಾಡಿಗೆದಾರ ಮಧು ಕಣ್ಣೀರು ಸುರಿಸಿದರು. ''ಇಷ್ಟು ದಿನ ದುಡಿದಿದ್ದೆಲ್ಲ ನೀರುಪಾಲಾಗಿದೆ. ಪಾಲಿಕೆ ಹಾಗೂ ಪೊಲೀಸರು ನಮಗೆ ಪರಿಹಾರ ಕೊಡಿಸಬೇಕು'' ಎಂದು ಬಾಡಿಗೆದಾರ ಅಂಕುಶ್‌ ಒತ್ತಾಯಿಸಿದರು. ಬಿಲ್ಡರ್‌ ನಾಪತ್ತೆ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಗದ ಮಾಲೀಕರಾದ ಆಯೇಷಾ ಬೇಗಂ, ಎ.ಎನ್‌ ಬಿಲ್ಡರ್ಸ್‌ ಮಾಲೀಕ ಮೊಹಮ್ಮದ್‌ ಆಸಿಫ್‌, ಮೊಹಮ್ಮದ್‌ ಇಯಾಸುದ್ದೀನ್‌ ವಿರುದ್ಧ ಪಾಲಿಕೆ ಅಧಿಕಾರಿಗಳು ರಾಮಮೂರ್ತಿನಗರ ಠಾಣೆಗೆ ದೂರು ನೀಡಿದ್ದಾರೆ. ''ಆಯೇಷಾ ಬೇಗಂ ವೃದ್ಧರಾಗಿರುವ ಕಾರಣ, ಆರೋಗ್ಯ ಸಮಸ್ಯೆ ಇರುವುದರಿಂದ ಬಂಧಿಸಿಲ್ಲ, ವಿಚಾರಣೆಗೆ ಒಳಪಡಿಸಲಾಗಿದೆ. ಬಿಲ್ಡರ್‌ಗಾಗಿ ಶೋಧ ನಡೆಸಲಾಗುತ್ತಿದೆ '' ಎಂದು ಪೊಲೀಸರು ತಿಳಿಸಿದ್ದಾರೆ. ತೆರವು ಕಾರ್ಯಾಚರಣೆ ಮುಂದುವರಿಕೆ ಗುರುವಾರ ರಾತ್ರಿ ಆರಂಭವಾದ ತೆರವು ಕಾರ್ಯಾಚರಣೆ ಶುಕ್ರವಾರವೂ ಮುಂದುವರಿದಿತ್ತು. ಬೆಳ್ಳಗ್ಗೆಯಿಂದ ಪದೇಪದೆ ಮಳೆ ಬರುತ್ತಿರುವುದು ಕಾರ್ಯಾಚರಣೆಗೆ ಅಡ್ಡಿಯಾಯಿತು. ಒಂದೇ ಇಟಾಚಿ ವಾಹನ ಬಳಕೆ ಮಾಡುತ್ತಿರುವುದರಿಂದ ಅವಶೇಷ ಹೆಚ್ಚು ಪ್ರಮಾಣದಲ್ಲಿ ತೆರವಾಗಿಲ್ಲ.