ವಸಿಷ್ಠ ಸೊಸೈಟಿ ವಂಚನೆ ಪ್ರಕರಣ; ಠೇವಣಿದಾರರಿಗೆ ಸೈಟ್‌, ಪ್ಲ್ಯಾಟ್‌ ಆಫರ್‌!

ಶ್ರೀ ವಸಿಷ್ಠ ಕ್ರೆಡಿಟ್‌ ಸೌಹಾರ್ದ ಸಹಕಾರಿ ನಿಯಮಿತದ ಠೇವಣಿದಾರರಿಗೆ ಹಣದ ಬದಲಿಗೆ ಸೈಟ್‌, ಫ್ಲ್ಯಾಟ್‌ ನೀಡುವ ಬಗ್ಗೆ ಸೊಸೈಟಿ ಅಧ್ಯಕ್ಷ ವೆಂಕಟನಾರಾಯಣ ಭರವಸೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ವಸಿಷ್ಠ ಸೊಸೈಟಿ ವಂಚನೆ ಪ್ರಕರಣ; ಠೇವಣಿದಾರರಿಗೆ ಸೈಟ್‌, ಪ್ಲ್ಯಾಟ್‌ ಆಫರ್‌!
Linkup
ಬಸವನಗುಡಿ (ಬೆಂಗಳೂರು): ಶ್ರೀ ವಸಿಷ್ಠ ಕ್ರೆಡಿಟ್‌ ಸೌಹಾರ್ದ ಸಹಕಾರಿ ನಿಯಮಿತದ ಕಚೇರಿಯಲ್ಲಿ ಮಂಗಳವಾರ ಕೆಲ ಸದಸ್ಯರೊಂದಿಗೆ ಸೊಸೈಟಿ ಅಧ್ಯಕ್ಷ ವೆಂಕಟನಾರಾಯಣ ಸಭೆ ನಡೆಸಿದರು. ಈ ವೇಳೆ ಹಣದ ಬದಲಿಗೆ ಠೇವಣಿದಾರರಿಗೆ ಸೈಟ್‌, ಫ್ಲ್ಯಾಟ್‌ ನೀಡುವ ಬಗ್ಗೆ ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ. ವರ್ಷದ ಅಂತ್ಯದೊಳಗೆ ಠೇವಣಿದಾರರ ಹಣ ಹಿಂದಿರುಗಿಸುವುದಾಗಿ ಸೊಸೈಟಿ ಅಧ್ಯಕ್ಷ ವೆಂಕಟನಾರಾಯಣ ತಿಳಿಸಿದರು. ಈ ವೇಳೆ ಕೆಲ ಸದಸ್ಯರು, ‘ಪ್ರತಿ ಬಾರಿಯು ಸಮಯ ಕೊಡಿ ಎನ್ನುತ್ತೀರಿ, ಹೇಗೆ ಹಣವನ್ನು ಹಿಂದಿರುಗಿಸುತ್ತೀರಿ?' ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವೆಂಕಟನಾರಾಯಣ ಅವರು, 'ಸರಕಾರಿ ಬ್ಯಾಂಕುಗಳಿಂದ ಸಾಲ ಸಿಗುತ್ತಿಲ್ಲ. 100 ಕೋಟಿ ಸಾಲ ಬೇಕಾಗಿದ್ದು, ಕೆಲ ಕಂಪನಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ತಕ್ಷಣಕ್ಕೆ ಹಣ ನೀಡಲು ಸಾಧ್ಯವಿಲ್ಲವಾದ್ದರಿಂದ ಹಣದ ಬದಲಿಗೆ ಸಾಲ ಪಡೆದವರ ಸೈಟ್‌/ಫ್ಲ್ಯಾಟ್‌ಗಳನ್ನು ಠೇವಣಿದಾರರಿಗೆ ನೀಡಲಾಗುವುದು. ಈ ಬಗ್ಗೆ ಕೆಲ ಬಿಲ್ಡರ್‌ಗಳ ಜೊತೆ ಮಾತು ಕತೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಸ್ವತ್ತುಗಳನ್ನು ತೋರಿಸಿ ಅವುಗಳನ್ನು ನೋಂದಾಯಿಸಿ ಕೊಡಲಾಗುವುದು,' ಎಂದು ಭರವಸೆ ನೀಡಿದ್ದಾರೆ ಎಂದು ಸಭೆಯಲ್ಲಿ ಪಾಲ್ಗೊಂಡ ಗ್ರಾಹಕರೊಬ್ಬರು ಮಾಹಿತಿ ನೀಡಿದ್ದಾರೆ. ಸೊಸೈಟಿ ಆಡಳಿತದ ವಿರುದ್ಧ ಠಾಣೆಯಲ್ಲಿ ಈವರೆಗೆ 100 ಕ್ಕೂ ಹೆಚ್ಚು ದೂರು ದಾಖಲಾಗಿದೆ.