ರೇಷ್ಮೆ ಧಾರಣೆಯಲ್ಲಿ ಸ್ಥಿರತೆ: ರೀಲಿಂಗ್‌ಗೆ ಹೆಚ್ಚಿದ ಬೇಡಿಕೆ; ಉದ್ಯಮ ಮತ್ತೆ ಗರಿಗೆದರುವ ಆಶಾಭಾವನೆ!

ಇದೀಗ ಸುಧಾರಿತ ಕಾಟೇಜ್‌ ಬೇಸಿನ್‌ಗಳು, ಸ್ವಯಂ ಚಾಲಿತ ರೀಲಿಂಗ್‌ ಮೆಷಿನ್‌ಗಳು ಬಂದಿರುವುದರಿಂದ ರೇಷ್ಮೆ ನೂಲಿನ ಗುಣಮಟ್ಟ ಹೆಚ್ಚಾಗುವ ಜತೆಗೆ ಕಡಿಮೆ ಕಾರ್ಮಿಕರನ್ನು ಬಳಸಿ ನೂಲು ತೆಗೆಯಬಹುದಾಗಿದೆ. ಸ್ವಯಂ ಉದ್ಯೋಗದ ದೃಷ್ಟಿಯಿಂದ ಹಾಗೂ ಆದಾಯವು ಇರುವುದರಿಂದ ರೀಲಿಂಗ್‌ ಘಟಕಗಳ ಸ್ಥಾಪನೆಗೆ ಬೇಡಿಕೆ ಹೆಚ್ಚಿದೆ.

ರೇಷ್ಮೆ ಧಾರಣೆಯಲ್ಲಿ ಸ್ಥಿರತೆ: ರೀಲಿಂಗ್‌ಗೆ ಹೆಚ್ಚಿದ ಬೇಡಿಕೆ; ಉದ್ಯಮ ಮತ್ತೆ ಗರಿಗೆದರುವ ಆಶಾಭಾವನೆ!
Linkup
ಕೋಟಂಬಳ್ಳಿ ಗುರುಸ್ವಾಮಿ ಕೊಳ್ಳೇಗಾಲಚಾಮರಾಜನಗರ: ಬೆಲೆಯಲ್ಲಿ ಸ್ಥಿರತೆ ಕಾಣುತ್ತಿರುವುದರಿಂದ ರೇಷ್ಮೆ ಗೂಡಿನ ನಂತರದ ಸೇರಿದಂತೆ ರೇಷ್ಮೆಯ ಪೂರಕ ಉದ್ಯಮದ ಘಟಕಗಳ ಸ್ಥಾಪನೆಗೆ ಬೇಡಿಕೆ ಹೆಚ್ಚಾಗಿರುವುದರಲ್ಲದೇ ರೇಷ್ಮೆ ಉದ್ಯಮ ಕ್ಷೇತ್ರ ಮತ್ತೆ ಗರಿಗೆದರುವ ಆಶಾಭಾವನೆ ಮೂಡಿಸಿದೆ. ಜಿಲ್ಲೆಯಲ್ಲಿ ಪ್ರಸ್ತುತ 723 ಜನ ರೇಷ್ಮೆ ರೀಲರ್‌ಗಳಿದ್ದಾರೆ. ಇದೀಗ ರೀಲಿಂಗ್‌ ಉದ್ಯಮ ಸಾಕಷ್ಟು ಸುಧಾರಣೆ ಕಂಡಿದೆ. ಆಧುನಿಕ ತಂತ್ರಜ್ಞಾನ ಎಲ್ಲವನ್ನೂ ಸುಲಭಗೊಳಿಸಿದೆ. ಇದರೊಂದಿಗೆ ರೇಷ್ಮೆ ಧಾರಣೆಯು ಇರುವುದರಿಂದ ರೀಲಿಂಗ್‌ ಪುನಾರಂಭದತ್ತ ಉದ್ಯಮಿಗಳು ಚಿತ್ತ ಹರಿಸಿದ್ದಾರೆ. ಚರಕದಿಂದ ನೂಲು ತೆಗೆಯುತ್ತಿದ್ದ ಕಾರಣ ಈ ಹಿಂದೆ ಹೆಚ್ಚಿನ ಕಾರ್ಮಿಕರು ಬೇಕಾಗಿತ್ತು. ಕಾರ್ಮಿಕರ ಕೊರತೆಯಿಂದ ಹಾಗೂ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಇದು ಕಷ್ಟವಾಗಿತ್ತು. ಇದೀಗ ಸುಧಾರಿತ ಕಾಟೇಜ್‌ ಬೇಸಿನ್‌ಗಳು, ಸ್ವಯಂ ಚಾಲಿತ ರೀಲಿಂಗ್‌ ಮೆಷಿನ್‌ಗಳು ಬಂದಿರುವುದರಿಂದ ರೇಷ್ಮೆ ನೂಲಿನ ಗುಣಮಟ್ಟ ಹೆಚ್ಚಾಗುವ ಜತೆಗೆ ಕಡಿಮೆ ಕಾರ್ಮಿಕರನ್ನು ಬಳಸಿ ನೂಲು ತೆಗೆಯಬಹುದಾಗಿದೆ. ಸ್ವಯಂ ಉದ್ಯೋಗದ ದೃಷ್ಟಿಯಿಂದ ಹಾಗೂ ಆದಾಯವು ಇರುವುದರಿಂದ ರೀಲಿಂಗ್‌ ಘಟಕಗಳ ಸ್ಥಾಪನೆಗೆ ಬೇಡಿಕೆ ಹೆಚ್ಚಿದೆ. ಇಲಾಖೆಯಿಂದ ಸಹಾಯಧನಗೂಡಿನ ನಂತರದ ಚಟುವಟಿಕೆಯಾದ ಅಭಿವೃದ್ಧಿ ಪಡಿಸಿದ ಕಾಟೇಜ್‌ ಬೇಸಿನ್‌ ಹಾಗೂ ಸ್ವಯಂ ಚಾಲಿತ ಬೇಸಿನ್‌ಗಳ ನಿರ್ಮಾಣಕ್ಕೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಶೇ.90ರಷ್ಟು, ಸಾಮಾನ್ಯ ವರ್ಗದವರಿಗೆ ಶೇ.75ರಷ್ಟು ಸಹಾಯ ಧನವನ್ನು ಇಲಾಖೆ ನೀಡುತ್ತಿದೆ. ರೀಲಿಂಗ್‌ ಷೆಡ್‌ ನಿರ್ಮಾಣ, ಬಾಯ್ಲರ್‌ಗಳ ಖರೀದಿ ಸೇರಿದಂತೆ ಇತರೆ ಸಲಕರಣೆಗಳನ್ನು ಕೊಳ್ಳಲು ಸಹ ಇಲಾಖೆ ನೆರವು ನೀಡುತ್ತಿದೆ. ಈ ಘಟಕಗಳ ಸ್ಥಾಪನೆಯಿಂದ ನೂಲು ಬಿಚ್ಚುವುದು ಸುಲಭ ಹಾಗೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಬರುವುದರಿಂದ ಹೆಚ್ಚಿನ ಜನರು ಅದರಲ್ಲಿಯೂ ನಿರುದ್ಯೋಗಿ ಯುವಕರು ಹೆಚ್ಚಿನ ಆಸಕ್ತಿ ವಹಿಸುತ್ತಿರುವುದು ಆಶಾ ಭಾವನೆ ಮೂಡಿಸಿದೆ. ಮರು ಚಾಲನೆಗೆ ಕ್ರಮ ಈ ಹಿಂದೆ ಕೊಳ್ಳೇಗಾಲ ಪಟ್ಟಣದ ರೇಷ್ಮೆ ವಿನಿಮಯ ಕೇಂದ್ರದಲ್ಲಿ ಕೇಂದ್ರ ರೇಷ್ಮೆ ಮಂಡಳಿಯವರು ನೂಲಿನ ಗುಣಮಟ್ಟ ಪರೀಕ್ಷಾ ಘಟಕವನ್ನು ಅಳವಡಿಸಿದ್ದರು. ರೀಲರ್‌ಗಳು ಇಲ್ಲಿ ರೇಷ್ಮೆ ಮಾರಾಟ ಮಾಡಲು ಅವಕಾಶ ಇತ್ತು. ಸರಕಾರ ನೇರ ಖರೀದಿಗೆ ಅವಕಾಶ ಮಾಡಿಕೊಟ್ಟಿದ್ದರಿಂದ ಟ್ರೇಡರ್ಸ್ ಗಳು ಇಲ್ಲಿಗೆ ಬಂದು ರೇಷ್ಮೆ ಕೊಳ್ಳುತ್ತಿಲ್ಲ. ಕೆಎಸ್‌ಎಂಬಿಯವರು ಮಾತ್ರ ಇಲ್ಲಿ ರೇಷ್ಮೆ ಖರೀದಿ ಮಾಡುತ್ತಾರೆ. ಖರೀದಿಸಿದ ರೇಷ್ಮೆ ದಾಸ್ತಾನಿಗೆ ಉಗ್ರಾಣ ವ್ಯವಸ್ಥೆ ಕೂಡ ಇಲ್ಲಿದೆ. ಟ್ರೇಡರ್ಸ್ ಗಳನ್ನು ಇಲ್ಲೆ ಬಂದು ರೇಷ್ಮೆ ಖರೀದಿಸುವಂತೆ ಮನವೊಲಿಸುವ ಕಾರ್ಯವನ್ನು ಅಧಿಕಾರಿಗಳು ಮಾಡುತ್ತಿದ್ದು ಇದು ಫಲಪ್ರದವಾದರೆ ರೇಷ್ಮೆ ವಿನಿಮಯ ಕೇಂದ್ರಕ್ಕೆ ಮರುಜೀವ ಬರಲಿದೆ. ಹಿಂದೆ ರೇಷ್ಮೆ ವ್ಯಾಪಾರ ವಿನಿಮಯ ಕೇಂದ್ರದಲ್ಲಿ ನಡೆಯುತ್ತಿತ್ತು. ಈಗ ಕೆಸಿಎಂಬಿಯವರು ಮಾತ್ರ ಖರೀದಿ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ಟ್ರೇಡರ್ಸ್ ಮನವೊಲಿಸಿ ಇಲ್ಲೆ ಖರೀದಿಸುವಂತೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಎನ್‌.ಕನಕರಾಜು, ಸಹಾಯಕ ನಿರ್ದೇಶಕರು, ಗೂಡಿನ ನಂತರದ ಚಟುವಟಿಕೆಗಳ ವಿಭಾಗ, ರೇಷ್ಮೆ ವಿನಿಮಯ ಕೇಂದ್ರ, ಕೊಳ್ಳೇಗಾಲ ರೇಷ್ಮೆ ಬೆಳೆ ಪ್ರಸ್ತುತ ಲಾಭದಾಯಕ ಕಸುಬಾಗಿರುವುದರಿಂದ ರೈತರು ಇತ್ತ ಆಕರ್ಷಿತರಾಗುತ್ತಿದ್ದಾರೆ. ರೇಷ್ಮೆ ಬೆಲೆ ಗುಣಮಟ್ಟ ಹೆಚ್ಚು ಮಾಡುವ ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳ ಬಳಕೆಯಾಗುವುದರಿಂದ ಸ್ಪರ್ಧಾತ್ಮಕ ಬೆಲೆ ಸಿಗುತ್ತಿದೆ. ಚಾಮರಾಜು, ಮಾಜಿ ಉಪಾಧ್ಯಕ್ಷರು, ಜಿಲ್ಲಾಪಂಚಾಯಿತಿ, ಚಾ.ನಗರ