ತೆರಿಗೆ ಕಡಿತದ ನಂತರವೂ ತಾಳೆ ಎಣ್ಣೆ ದರ ಶೇ.6ರಷ್ಟು ಹೆಚ್ಚಳ

ತಾಳೆ ಎಣ್ಣೆ ಆಮದು ಸುಂಕ ಇಳಿಕೆಯ ನಂತರವೂ ಭಾರತದಲ್ಲಿ ದರ ಶೇ.6ರಷ್ಟು ಏರಿಕೆಯಾಗಿದೆ. ಆಮದು ದರ ಕಡಿತದ ಬಳಿಕವೂ ದರದ ಮೇಲೆ ಪ್ರಭಾವ ಬೀರಲು ಸಾಧ್ಯವಾಗದಿರುವದರಿಂದ ಮತ್ತಷ್ಟು ಸುಂಕ ಕಡಿತಕ್ಕೆ ಸರಕಾರ ಮುಂದಾಗದಿರುವ ಸಾಧ್ಯತೆ ಇದೆ.

ತೆರಿಗೆ ಕಡಿತದ ನಂತರವೂ ತಾಳೆ ಎಣ್ಣೆ ದರ ಶೇ.6ರಷ್ಟು ಹೆಚ್ಚಳ
Linkup
ಹೊಸದಿಲ್ಲಿ: ಆಮದು ಸುಂಕ ಇಳಿಕೆಯ ನಂತರವೂ ಭಾರತದಲ್ಲಿ ದರ ಶೇ.6ರಷ್ಟು ಏರಿಕೆಯಾಗಿದೆ. ಆಮದು ದರ ಕಡಿತದ ಬಳಿಕವೂ ದರದ ಮೇಲೆ ಪ್ರಭಾವ ಬೀರಲು ಸಾಧ್ಯವಾಗದಿರುವದರಿಂದ ಮತ್ತಷ್ಟು ಸುಂಕ ಕಡಿತಕ್ಕೆ ಸರಕಾರ ಮುಂದಾಗದಿರುವ ಸಾಧ್ಯತೆ ಇದೆ. ಆಮದು ಸುಂಕ ಕಡಿತದ ನಂತರ ವಾಯಿದಾ ಮಾರುಕಟ್ಟೆಯಲ್ಲೂ ಮಲೇಷ್ಯಾ ಮೂಲದ ತಾಳೆ ಎಣ್ಣೆ ದರದಲ್ಲಿ ಶೇ.9 ಏರಿಕೆಯಾಗಿದೆ. ಸರಕಾರ ಕಳೆದ ಜೂನ್‌ 29ರಂದು ಆಮದು ಸುಂಕವನ್ನು ಶೇ.5ರಷ್ಟು ಕಡಿತಗೊಳಿಸಿತ್ತು. ''ಭಾರತವು ಆಮದು ಸುಂಕವನ್ನು ಕಡಿತಗೊಳಿಸಿದ ತಕ್ಷಣ ಅಂತಾರಾಷ್ಟ್ರೀಯ ಪೂರೈಕೆದಾರರು ದರಗಳನ್ನು ಏರಿಸಿದರು'' ಎಂದು ತಾಳೆ ಎಣ್ಣೆ ವ್ಯಾಪಾರ ವಲಯದ ತಜ್ಞರು ತಿಳಿಸಿದ್ದಾರೆ. ಪ್ರತಿ ಸಲ ಭಾರತ ಭಾರತ ಸುಂಕವನ್ನು ಕಡಿತಗೊಳಿಸಿದಾಗಲೂ ಪೂರೈಕೆದಾರರು ಅದರ ಲಾಭ ಪಡೆಯುತ್ತಿದ್ದರು. ಗ್ರಾಹಕರಗೂ ಸ್ವಲ್ಪ ಪ್ರಯೋಜನವಾಗುತ್ತಿತ್ತು. ಆದರೆ ಈ ಸಲ ಗ್ರಾಹಕರಿಗೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಸೆಪ್ಟೆಂಬರ್‌ ಬಳಿಕ ಹಳೆಯ ತೆರಿಗೆಯನ್ನೇ ಸರಕಾರ ಮತ್ತೆ ಅನ್ವಯಿಸುವ ಸಾಧ್ಯತೆ ಇದೆ. "ಹಣಕಾಸು ಸಚಿವಾಲಯವು ಜೂನ್‌ 29ರ ಆದೇಶದಲ್ಲಿ ಕಸ್ಟಮ್ಸ್ ಕಚ್ಚಾ ತಾಳೆ ಎಣ್ಣೆ ಮೇಲಿನ ಸುಂಕವನ್ನು 15% ರಿಂದ 10% ಕ್ಕೆ ಇಳಿಸಿದೆ. ಈ ಆದೇಶ 2021 ರ ಜೂನ್ 30ರಿಂದ ಸೆಪ್ಟೆಂಬರ್ 30 ರವರೆಗೆ ಜಾರಿಯಲ್ಲಿರುತ್ತದೆ"ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸುಂಕ ಕಡಿತದ ನಂತರ, ಕಚ್ಚಾ ತಾಳೆ ಎಣ್ಣೆ ಮೇಲಿನ ತೆರಿಗೆ ದರ ಶೇ.30.25 ರಷ್ಟಿದೆ. ಇದರಲ್ಲಿ ಹೆಚ್ಚುವರಿ ಕೃಷಿ ತೆರಿಗೆ ಶೇ. 17.5 ಮತ್ತು ಸಮಾಜ ಕಲ್ಯಾಣ ತೆರಿಗೆ ಶೇ.10ರಷ್ಟಿದೆ. ಈ ಕಡಿತವು ಖಾದ್ಯ ತೈಲಗಳ ಚಿಲ್ಲರೆ ಬೆಲೆಗಳನ್ನು ತಗ್ಗಿಸುತ್ತದೆ. ಶುಲ್ಕಗಳಲ್ಲಿನ ಈ ಕಡಿತವು ಸೆಪ್ಟೆಂಬರ್ 30ರವರೆಗೆ ಅನ್ವಯಿಸುತ್ತದೆ.