ವಿಂಡೋಸ್‌ 11 ಬಿಡುಗಡೆ ಹಿನ್ನೆಲೆ, 2025ಕ್ಕೆ ವಿಂಡೋಸ್‌ 10ಕ್ಕೆ ಮೈಕ್ರೊಸಾಫ್ಟ್‌ ಬೆಂಬಲ ಬಂದ್‌

ಶೀಘ್ರದಲ್ಲಿಯೇ 'ನೆಕ್ಸ್ಟ್‌ ಜನರೇಶನ್‌'ನ ವಿಂಡೋಸ್‌ 11 ಸಾಫ್ಟ್‌ವೇರ್‌ ಆಪರೇಟಿಂಗ್‌ ಸಿಸ್ಟಮ್‌ ಅನ್ನು ಮೈಕ್ರೊಸಾಫ್ಟ್‌ ಬಿಡುಗಡೆಗೊಳಿಸಲಿದ್ದು, 2025ರ ಅಕ್ಟೋಬರ್‌ 14ರಿಂದ ವಿಂಡೋಸ್‌ 10ಕ್ಕೆ ತನ್ನ ಬೆಂಬಲವನ್ನು ಸ್ಥಗಿತಗೊಳಿಸಲಿದೆ.

ವಿಂಡೋಸ್‌ 11 ಬಿಡುಗಡೆ ಹಿನ್ನೆಲೆ, 2025ಕ್ಕೆ ವಿಂಡೋಸ್‌ 10ಕ್ಕೆ ಮೈಕ್ರೊಸಾಫ್ಟ್‌ ಬೆಂಬಲ ಬಂದ್‌
Linkup
ಹೊಸದಿಲ್ಲಿ: ಶೀಘ್ರದಲ್ಲಿಯೇ 'ನೆಕ್ಸ್ಟ್‌ ಜನರೇಶನ್‌'ನ ಸಾಫ್ಟ್‌ವೇರ್‌ ಆಪರೇಟಿಂಗ್‌ ಸಿಸ್ಟಮ್‌ ಅನ್ನು ಬಿಡುಗಡೆಗೊಳಿಸಲಿದೆ. ಹಾಗೂ 2025ರ ಅಕ್ಟೋಬರ್‌ 14ರಿಂದ ವಿಂಡೋಸ್‌ 10ನ್ನು ನಿವೃತ್ತಿಗೊಳಿಸಲಿದ್ದು, ಅದಕ್ಕೆ ತನ್ನ ಬೆಂಬಲವನ್ನು ಸ್ಥಗಿತಗೊಳಿಸಲಿದೆ. ಮೈಕ್ರೊಸಾಫ್ಟ್‌ ಈ ಬಗ್ಗೆ ಪರಿಷ್ಕೃತ ಮಾಹಿತಿಯನ್ನು ಪ್ರಕಟಿಸಿದ್ದು, ವಿವರಗಳನ್ನು ನೀಡಿದೆ. ವಿಂಡೋಸ್‌ 10ಕ್ಕೆ ಮೈಕ್ರೊಸಾಫ್ಟ್‌ ಬೆಂಬಲ ಸ್ಥಗಿತ ಎಂದರೆ, ಯಾವುದೇ ಸಾಫ್ಟ್‌ವೇರ್‌ ಅಪ್‌ಡೇಟ್‌, ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಇತ್ಯಾದಿಗಳನ್ನು ನಿಗದಿತ ಗಡುವಿನ ನಂತರ ಒದಗಿಸುವುದಿಲ್ಲ. ವಿಂಡೋಸ್‌ 11 ಜೂನ್‌ 24ರಂದು ಬಿಡುಗಡೆಯಾಗಲಿದ್ದು, ಮೈಕ್ರೊಸಾಫ್ಟ್‌ ಸಿಇಒ ಸತ್ಯ ನಾಡೆಳ್ಳಾ, ಮುಖ್ಯ ಉತ್ಪನ್ನ ಅಧಿಕಾರಿ ಪಾನ್ಸೊ ಪನಯ್‌ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಭಾರತೀಯ ಕಾಲಮಾನ ಪ್ರಕಾರ ಜೂನ್‌ 24ರಂದು ರಾತ್ರಿ 8.30ಕ್ಕೆ ಕಾರ್ಯಕ್ರಮದ ನೇರಪ್ರಸಾರ ಇರಲಿದೆ. ಜೂನ್‌ 24ರ ಕಾರ್ಯಕ್ರಮದ ಬಳಿಕ ಮೈಕ್ರೊಸಾಫ್ಟ್‌ ತನ್ನ ಆಂತರಿಕ ವಲಯದಲ್ಲಿ ಮೊದಲು ವಿಂಡೋಸ್‌ 11 ವಿತರಿಸಲಿದೆ. ಅಕ್ಟೋಬರ್‌ ನಂತರ ಎಲ್ಲ ಬಳಕೆದಾರಿಗೆ ದೊರೆಯುವ ನಿರೀಕ್ಷೆ ಇದೆ. ಈಗಾಗಲೇ ಬಳಸುತ್ತಿರುವವರಿಗೆ ವಿಂಡೋಸ್‌ 11 ಉಚಿತವಾಗಿ ಪರಿಷ್ಕೃತವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.