ಬೆಂಗಳೂರು: ಸೂಟು-ಬೂಟು ಧರಿಸಿ ಅಪಾರ್ಟ್‌ಮೆಂಟ್‌ಗೆ ನುಗ್ಗಿ ಲ್ಯಾಪ್‌ ಟಾಪ್‌ ಕಳವು..!

ಸೂಟು-ಬೂಟು ಹಾಕಿ ಅಪಾರ್ಟ್‌ಮೆಂಟ್‌ಗೆ ಒಳಗೆ ನುಗ್ಗಿದ ಕಳ್ಳ ಅಪಾರ್ಟ್‌ಮೆಂಟ್‌ನ ನಾಲ್ಕು ಮಹಡಿಯಲ್ಲೂ ಸುತ್ತಾಡಿದ್ದಾನೆ. ಈ ವೇಳೆ ಮನೆಯ ಬಾಗಿಲು ತೆರೆದಿರುವುದು ಗಮನಿಸಿ ಡೈನಿಂಗ್‌ ಟೇಬಲ್‌​ ಮೇಲೆ ಇಟ್ಟಿದ್ದ ಲ್ಯಾಪ್‌ಟಾಪ್‌ ಅನ್ನು ತೆಗೆದುಕೊಂಡು ಕ್ಷಣ ಮಾತ್ರದಲ್ಲಿ ಪರಾರಿಯಾಗಿದ್ದಾನೆ.

ಬೆಂಗಳೂರು: ಸೂಟು-ಬೂಟು ಧರಿಸಿ ಅಪಾರ್ಟ್‌ಮೆಂಟ್‌ಗೆ ನುಗ್ಗಿ ಲ್ಯಾಪ್‌ ಟಾಪ್‌ ಕಳವು..!
Linkup
: ಸೂಟು-ಬೂಟು ತೊಟ್ಟ ಕಳ್ಳನೊಬ್ಬ ಹಾಡಹಗಲೇ ಒಳಗೆ ನುಗ್ಗಿ ಫ್ಲ್ಯಾಟ್‌ವೊಂದರಲ್ಲಿ ಲ್ಯಾಪ್‌ಟಾಪ್‌ ಕಳವು ಮಾಡಿರುವುದು ಬೆಂಗಳೂರಿನ ಗೋವಿಂದಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಲ್ಯಾಪ್‌ಟಾಪ್‌ ಕಳವಾಗಿರುವ ಬಗ್ಗೆ ವೀರನಪಾಳ್ಯ ಸೋನಾ ಟವರ್‌ ಅಪಾರ್ಟ್‌ಮೆಂಟ್‌ ನಿವಾಸಿ ಸ್ನೇಹಾ ಎಂಬುವರು ಗೋವಿಂದಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಗರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಸ್ನೇಹಾ ಅಪಾರ್ಟ್‌ಮೆಂಟ್‌ನ ಮೊದಲನೇ ಮಹಡಿಯಲ್ಲಿ ತಾಯಿಯೊಂದಿಗೆ ವಾಸಿಸುತ್ತಿದ್ದಾರೆ. ಜುಲೈ 7ರಂದು ಮಧ್ಯಾಹ್ನ 3.30ರಲ್ಲಿ ಬಾಗಿಲು ತೆರೆದಿಟ್ಟು ಬಾಲ್ಕನಿಗೆ ತೆರಳಿದ್ದರು. ಸ್ನೇಹಾ ತಾಯಿ ಬೆಡ್‌ ರೂಂನಲ್ಲಿ ಮಲಗಿದ್ದರು. ಈ ಸಮಯದಲ್ಲಿ ಸೂಟು-ಬೂಟು ಹಾಕಿ ಅಪಾರ್ಟ್‌ಮೆಂಟ್‌ಗೆ ಒಳಗೆ ನುಗ್ಗಿದ ಕಳ್ಳ ಅಪಾರ್ಟ್‌ಮೆಂಟ್‌ನ ನಾಲ್ಕು ಮಹಡಿಯಲ್ಲೂ ಸುತ್ತಾಡಿದ್ದಾನೆ. ಈ ವೇಳೆ ಸ್ನೇಹ ಅವರ ಮನೆಯ ಬಾಗಿಲು ತೆರೆದಿರುವುದು ಗಮನಿಸಿ ಡೈನಿಂಗ್‌ ಟೇಬಲ್‌ ಮೇಲೆ ಇಟ್ಟಿದ್ದ ಲ್ಯಾಪ್‌ಟಾಪ್‌ ಅನ್ನು ತೆಗೆದುಕೊಂಡು ಕ್ಷಣ ಮಾತ್ರದಲ್ಲಿ ಪರಾರಿಯಾಗಿದ್ದಾನೆ. ಇದಾದ ಕೆಲ ಸಮಯದ ಬಳಿಕ ಸ್ನೇಹ ಲ್ಯಾಪ್‌ಟಾಪ್‌ ಅನ್ನು ಮನೆಯಲ್ಲೆಲ್ಲಾ ಹುಡುಕಿದರೂ ಸಿಕ್ಕಿರಲಿಲ್ಲ. ಅನುಮಾನ ಬಂದು ಮನೆಯ ಹೊರಗೆ ಅಳವಡಿಸಿದ್ದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಕಳ್ಳನ ಕೃತ್ಯ ಬಯಲಾಗಿದೆ.