ರಾಜಕೀಯ ಪಕ್ಷಗಳ ವಿರುದ್ಧ ಚುನಾವಣಾಯೋಗ ಕಿಡಿ; ರೋಡ್‌ಶೋ ಪ್ರಚಾರಕ್ಕಿಲ್ಲ ಅನುಮತಿ

ದೇಶಾದ್ಯಂತ ಕೋವಿಡ್‌-19 ಹೆಮ್ಮಾರಿಯಂತೆ ಹಬ್ಬುತ್ತಿರುವ ಬೆನ್ನಲ್ಲೇ ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರಕ್ಕೆ ಚುನಾವಣಾ ಆಯೋಗ ಬ್ರೇಕ್‌ ಹಾಕಿದೆ. ರೂಡ್‌ಶೋ, ಸೈಕಲ್‌, ಬೈಕ್‌, ವಾಹನ ಮೆರವಣಿಗೆಗಳಿಗೆ ನೀಡಲಾಗಿದ್ದ ಅನುಮತಿಗಳನ್ನು ಹಿಂಪಡೆಯಲಾಗಿದೆ.

ರಾಜಕೀಯ ಪಕ್ಷಗಳ ವಿರುದ್ಧ ಚುನಾವಣಾಯೋಗ ಕಿಡಿ; ರೋಡ್‌ಶೋ ಪ್ರಚಾರಕ್ಕಿಲ್ಲ ಅನುಮತಿ
Linkup
ಹೊಸದಿಲ್ಲಿ: ದೇಶಾದ್ಯಂತ ಕೋವಿಡ್‌-19 ಹೆಮ್ಮಾರಿಯಂತೆ ಹಬ್ಬುತ್ತಿರುವ ಬೆನ್ನಲ್ಲೇ ಚುನಾವಣಾ ಪ್ರಚಾರಕ್ಕೆ ಬ್ರೇಕ್‌ ಹಾಕಿದೆ. ರೂಡ್‌ಶೋ, ಸೈಕಲ್‌, ಬೈಕ್‌, ವಾಹನ ಮೆರವಣಿಗೆಗಳಿಗೆ ನೀಡಲಾಗಿದ್ದ ಅನುಮತಿಗಳನ್ನು ಹಿಂಪಡೆದಿದೆ. ಸಾರ್ವಜನಿಕ ಸಭೆಳಲ್ಲಿ ಅನೇಕ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ನಿಗದಿತ ಸುರಕ್ಷತಾ ಮಾನದಂಡಗಳನ್ನು ಅನುಸರಿಸುತ್ತಿಲ್ಲ ಎಂದು ಚುನಾವಣಾ ಆಯೋಗ ಅಸಮಾಧಾನ ವ್ಯಕ್ತಪಡಿಸಿದೆ. ಚುನಾವಣಾ ಆಯೋಗದ ಆದೇಶದಂತೆ, ಪಶ್ಚಿಮ ಬಂಗಾಳದಲ್ಲಿ ಪಾದಯಾತ್ರೆ, ರೋಡ್‌ಶೋ, ಬೈಕ್‌, ಸೈಕಲ್‌ ಅಥವಾ ಯಾವುದೇ ವಾಹನ ಮೆರವಣಿಗೆಗೆ ಅನುಮತಿ ಇರುವುದಿಲ್ಲ. ಈ ಹಿಂದೆ ಈಗಾಗಲೇ ಅನುಮತಿ ಪಡೆದಿದ್ದರೂ, ಆ ಅನುಮತಿಗಳನ್ನು ಹಿಂಪಡೆಯಲಾಗಿದೆ ಎಂದು ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ. ಸಾರ್ವಜನಿಕ ಸಭೆಯಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವಷ್ಟು ಅಂತರ ಇರಬೇಕು. ಕೋವಿಡ್‌ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಹಾಗೂ ಸಭೆಯಲ್ಲಿ 500 ಜನರಿಗಿಂತ ಹೆಚ್ಚು ಸೇರಲು ಅನುಮತಿ ಇರುವುದಿಲ್ಲ. ಚುನಾವಣಾ ಆಯೋಗದ ಆದೇಶ ಗುರುವಾರ ಸಂಜೆ 7 ಗಂಟೆಯಿಂದಲೇ ಜಾರಿಯಾಗಿದೆ ಎಂದು ತಿಳಿಸಿದೆ. ಚುನಾವಣಾ ಆಯೋಗದ ಆದೇಶದ ಬೆನ್ನಲ್ಲೇ ಸಿಎಂ ಅವರು ತಮ್ಮ ಎಲ್ಲ ಭೌತಿಕ ಸಭೆಗಳನ್ನು ರದ್ದುಗೊಳಿಸಿದ್ದಾರೆ. ವರ್ಚುವಲ್‌ ಆಗಿ (ಆನ್‌ಲೈನ್) ಜನರನ್ನು ತಲುಪಲಿದ್ದೇನೆ ಎಂದು ತಿಳಿಸಿದ್ದಾರೆ. ದೇಶದಲ್ಲಿ ಕೋವಿಡ್‌-19 ಪ್ರಕರಣಗಳು ಮಿತಿಮೀರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ಕ್ರಮ ಕೈಗೊಂಡಿದೆ.