ಏ.17ಕ್ಕೆ ನಭೋಮಂಡಲದಲ್ಲಿ ಕೌತುಕ: ಮಂಗಳನ ಮುಂದೆ ಹಾದು ಹೋಗಲಿದೆ ಚಂದ್ರ!

ಏ.17ರಂದು ಶನಿವಾರ ನಭೋಮಂಡಲ ಕೌತುಕವೊಂದಕ್ಕೆ ಸಾಕ್ಷಿಯಾಗಲಿದೆ. ಭಾರತೀಯ ಕಾಲಮಾನ ಪ್ರಕಾರ ಅಂದು ಸಂಜೆ 5.30ರಿಂದ 7.30ರ ನಡುವೆ ಅರ್ಧ ಚಂದ್ರನು ಕೆಂಪು ಗ್ರಹ ಮಂಗಳನನ್ನು ಮುಚ್ಚುತ್ತಾನೆ.

ಏ.17ಕ್ಕೆ ನಭೋಮಂಡಲದಲ್ಲಿ ಕೌತುಕ: ಮಂಗಳನ ಮುಂದೆ ಹಾದು ಹೋಗಲಿದೆ ಚಂದ್ರ!
Linkup
ಮಡಿಕೇರಿ: ಇದೇಏ.17ರಂದು ಶನಿವಾರ ನಭೋಮಂಡಲ ಕೌತುಕವೊಂದಕ್ಕೆ ಸಾಕ್ಷಿಯಾಗಲಿದೆ. ಭಾರತೀಯ ಕಾಲಮಾನ ಪ್ರಕಾರ ಅಂದು ಸಂಜೆ 5.30ರಿಂದ 7.30ರ ನಡುವೆ ಅರ್ಧ ಚಂದ್ರನು ಕೆಂಪು ಗ್ರಹ ಮಂಗಳನನ್ನು ಮುಚ್ಚುತ್ತಾನೆ. ಚಂದ್ರನು ಮಂಗಳನ ಮುಂದೆ ಹಾದು ಹೋಗುವಾಗ ಸಂಭವಿಸುವ ಈ ವಿದ್ಯಮಾನವನ್ನು ಏಷ್ಯಾದ ಕೆಲವು ಭಾಗಗಳಲ್ಲಿ ಕಾಣಬಹುದಾಗಿದೆ. ನಮ್ಮ ದೇಶದಲ್ಲೂ ಪೂರ್ವ ದಿಕ್ಕಿನಲ್ಲಿ ಈ ದೃಶ್ಯ ಕಾಣಲು ಸಿಗುತ್ತದೆ. ಚಂದ್ರನು ಇತರ ಆಕಾಶಕಾಯಗಳಿಗಿಂತ ಭೂಮಿಗೆ ಹೆಚ್ಚು ಹತ್ತಿರದಲ್ಲಿರುವುದರಿಂದ, ಭೂಮಿಯ ಎದುರು ಬದಿಗಳಲ್ಲಿಎರಡು ಬಿಂದುಗಳಿಂದ ನೋಡಿದಂತೆ ಚಂದ್ರನ ಸ್ಥಾನವು ಎರಡು ಡಿಗ್ರಿಗಳವರೆಗೆ ಅಥವಾ ಹುಣ್ಣಿಮೆಯ ವ್ಯಾಸದ ನಾಲ್ಕು ಪಟ್ಟು ಬದಲಾಗುತ್ತದೆ. ಅಂದರೆ ಭೂಮಿಯ ಒಂದು ಬದಿಯಲ್ಲಿರುವ ವೀಕ್ಷಕರಿಗಾಗಿ ಚಂದ್ರನು ನಿರ್ದಿಷ್ಟ ವಸ್ತುವಿನ ಮುಂದೆ ಹಾದುಹೋಗುವಂತೆ ಜೋಡಿಸಿದ್ದರೆ, ಅದು ಭೂಮಿಯ ಇನ್ನೊಂದು ಬದಿಯಲ್ಲಿರುವ ಆ ವಸ್ತುವಿನಿಂದ ಎರಡು ಡಿಗ್ರಿಗಳಷ್ಟು ದೂರದಲ್ಲಿ ಗೋಚರಿಸುತ್ತದೆ. ವಿಶೇಷ ವಿದ್ಯಮಾನ ನಡೆಯುವ ದಿನ ಚಂದ್ರನು ಅಮಾವಾಸ್ಯೆಯ 5 ದಿನಗಳ ಹಿಂದೆ ಇರುವಂತೆ ಶೇ. 24ರಷ್ಟು ಪ್ರಕಾಶಮಾನವಾಗಿರುತ್ತಾನೆ. ಮಂಗಳವು ಚಂದ್ರನ ಪ್ರಕಾಶಿಸದ ಬದಿಯ ಹಿಂದೆ ಕಣ್ಮರೆಯಾಗುತ್ತದೆ ಚಂದ್ರನ ಪ್ರಕಾಶಿತ ಬದಿಯ ಹಿಂದಿನಿಂದ ಮತ್ತೆ ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ಹವ್ಯಾಸಿ ಖಗೋಳ ವೀಕ್ಷಕ ಜಿ. ಶ್ರೀನಾಥ್‌. "ಇದೊಂದು ರೀತಿಯಲ್ಲಿ ಗ್ರಹಣ ಎನ್ನಬಹುದಾದ ಈ ಅಪರೂಪದ ಘಟನೆಯನ್ನು ಸೂರ್ಯಾಸ್ತದ ನಂತರ ವೀಕ್ಷಿಸಬಹುದು. ಭೂಮಿಯ ಮೇಲ್ಮೈಯ ಒಂದು ಸಣ್ಣ ಭಾಗದಿಂದ ಇದು ಗೋಚರಿಸುತ್ತವೆ. ದೂರದರ್ಶಕ ಬಳಸಿ ನೋಡುವಾಗ ಎಚ್ಚರಿಕೆ ಅಗತ್ಯ. ಇಂತಹ ಉಪಕರಣದ ಮೂಲಕ ಸೂರ್ಯನ ಒಂದು ಕ್ಷಣಿಕ ನೋಟ ಶಾಶ್ವತ ಕುರುಡುತನಕ್ಕೆ ಕಾರಣವಾಗಬಹುದು. - ಜಿ. ಶ್ರೀನಾಥ್‌, ಹವ್ಯಾಸಿ ಖಗೋಳ ವೀಕ್ಷಕ.