ಕೇರಳದಲ್ಲಿ ಈ ವರ್ಷ 627 ಮಕ್ಕಳ ಮೇಲೆ ಅತ್ಯಾಚಾರ: ಇಡುಕ್ಕಿ ಭೀಕರ ಘಟನೆ ಬಳಿಕ ಬಹಿರಂಗ

ಕೇರಳದಲ್ಲಿ ಈ ವರ್ಷದ ಮೊದಲ ಐದು ತಿಂಗಳು 600ಕ್ಕೂ ಅಧಿಕ ಶಿಶು ಅತ್ಯಾಚಾರ ಪ್ರಕರಣಗಳು ಖಚಿತವಾಗಿವೆ. ಇಡುಕ್ಕಿಯಲ್ಲಿ ಮಗುವಿನ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಈ ಅಂಕಿ ಅಂಶ ಬಯಲಾಗಿದೆ.

ಕೇರಳದಲ್ಲಿ ಈ ವರ್ಷ 627 ಮಕ್ಕಳ ಮೇಲೆ ಅತ್ಯಾಚಾರ: ಇಡುಕ್ಕಿ ಭೀಕರ ಘಟನೆ ಬಳಿಕ ಬಹಿರಂಗ
Linkup
ತಿರುವನಂತಪುರಂ: ದೇಶದಲ್ಲಿಯೇ ಏಕೈಕ ಸಂಪೂರ್ಣ ಸಾಕ್ಷರತರ ರಾಜ್ಯ ಎನಿಸಿರುವ ಕೇರಳದಲ್ಲಿ 2021ರ ಮೊದಲ ಐದು ತಿಂಗಳಲ್ಲಿಯೇ 627 ಮಕ್ಕಳ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎಂಬ ಆಘಾತಕಾರಿ ಸಂಗತಿಯನ್ನು ಪೊಲೀಸರ ದಾಖಲೆಗಳು ಬಹಿರಂಗಪಡಿಸಿದೆ. ಸಿಪಿಎಂನ ಯುವ ಘಟಕದ ಮುಖಂಡನೊಬ್ಬ ಆರು ವರ್ಷದ ಹೆಣ್ಣು ಮಗುವಿನ ಮೇಲೆ ಸತತ ಮೂರು ವರ್ಷಗಳಿಂದ ಅತ್ಯಾಚಾರ ನಡೆಸಿ, ಅದನ್ನು ಕೊಲೆ ಮಾಡಿದ ಘಟನೆ ಎದೆ ನಡುಗಿಸುವಂತೆ ಮಾಡಿತ್ತು. ಅದರ ಬೆನ್ನಲ್ಲೇ ಪೊಲೀಸ್ ಇಲಾಖೆಯ ಅಂಕಿ ಅಂಶ, ಈ ಕ್ರೌರ್ಯದ ಮುಖವನ್ನು ತೆರೆದಿಟ್ಟಿದೆ. 2016-2020ರ ಹಿಂದಿನ ಐದು ವರ್ಷಗಳಿಗೆ ಹೋಲಿಸಿದರೆ 2021ರ ಜನವರಿ 1 ರಿಂದ ಮೇ 31ರವರೆಗೆ ಪ್ರತಿ ತಿಂಗಳು ವರದಿಯಾಗುವ ಸರಾಸರಿ ಪ್ರಕರಣಗಳ ಸಂಖ್ಯೆ ಅತ್ಯಧಿಕವಾಗಿದೆ. ಅತಿ ಹೆಚ್ಚಿನ ಶಿಶು ಅತ್ಯಾಚಾರ ಪ್ರಕರಣಗಳು 2019ರಲ್ಲಿ ದಾಖಲಾಗಿದ್ದವು. ರಾಜ್ಯದಲ್ಲಿ ಆಗ ಒಟ್ಟು 1,313 ಪ್ರಕರಣಗಳು ವರದಿಯಾಗಿದ್ದವು. 2016ರಲ್ಲಿ 958 ಪ್ರಕರಣಗಳು ದಾಖಲಾಗಿದ್ದರೆ, 2020ರಲ್ಲಿ 1,143 ಪ್ರಕರಣಗಳು ವರದಿಯಾಗಿದ್ದವು. ಈ ವರ್ಷದ ಮೊದಲ ಐದು ತಿಂಗಳಲ್ಲಿ ಮಕ್ಕಳ ಮೇಲಿನ ಅಪರಾಧ ಕೃತ್ಯಗಳ 1,639 ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 15 ಕೊಲೆ, 89 ಅಪಹರಣ, 6 ಪರಿತ್ಯಜಿಸುವಿಕೆ, 5 ಬಾಲ್ಯವಿವಾಹ ಹಾಗೂ 897 ಇತರೆ ಪ್ರಕರಣಗಳು ವರದಿಯಾಗಿವೆ. ಭ್ರೂಣಹತ್ಯೆ, ಆತ್ಮಹತ್ಯೆಗೆ ಪ್ರಚೋದನೆ, ಅಪ್ತಾಪ್ತ ಬಾಲಕಿಯರ ಖರೀದಿ, ವೇಶ್ಯಾ ಚಟುವಟಿಕೆಗಳಿಗಾಗಿ ಬಾಲಕಿಯರ ಖರೀದಿ ಮತ್ತು ಮಾರಾಟ ಮುಂತಾದ ಪ್ರಕರಣಗಳು ದಾಖಲಾಗಿಲ್ಲ. ಕೋಲಾಹಲ ಸೃಷ್ಟಿಸಿದ ಪ್ರಕರಣಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ನೇಣು ಹಾಕಿ ಕೊಲೆ ಮಾಡಿದ ಪ್ರಕರಣದಲ್ಲಿ ಕೇರಳ ಯುವ ಘಟಕ (ಡಿವೈಎಫ್‌ಐ) ಮುಖಂಡ, ಅರ್ಜುನ್ (22) ಎಂಬಾತನನ್ನು ಕಳೆದ ವಾರ ಬಂಧಿಸಲಾಗಿತ್ತು. ಸಿಹಿ ನೀಡುವ ನೆಪದಲ್ಲಿ ಬಾಲಕಿ ಮೇಲೆ ಮೂರು ವರ್ಷಗಳಿಂದ ಅತ್ಯಾಚಾರ ನಡೆಸುತ್ತಿದ್ದ. ಬಾಲಕಿ ಆಕೆಯ ಪೋಷಕರ ಮನೆಯ ಕೊಠಡಿಯಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆಟವಾಡುವಾಗ ಕುತ್ತಿಗೆಯಲ್ಲಿದ್ದ ಶಾಲು ಆಕಸ್ಮಿಕವಾಗಿ ಸಿಕ್ಕಿಕೊಂಡು ಆಕೆ ಸತ್ತಿರಬಹುದು ಎಂದು ಭಾವಿಸಲಾಗಿತ್ತು.