ಕೊರೊನಾ ಭೀತಿ; ಭಾರತದಿಂದ ಪ್ರವೇಶಿಸುವ ವಿಮಾನಕ್ಕೆ ನಿರ್ಬಂಧ ಹೇರಿದ ದುಬೈ!

ಪ್ರಯಾಣಿಕರು ಇತರ ರಾಷ್ಟ್ರಗಳಲ್ಲಿ 14 ದಿನಗಳ ವಾಸ್ತವ್ಯ (ಕ್ವಾರಂಟೈನ್‌) ಹೂಡಿದ್ದರೆ, ಬಳಿಕ ಯುಎಇ ಪ್ರವೇಶಕ್ಕೆ ಅವಕಾಶ ಸಿಗಲಿದೆ. ಉಭಯ ರಾಷ್ಟ್ರಗಳ ನಡುವೆ ಕಾರ್ಗೊ ವಿಮಾನಗಳು ಹಾಗೂ ಯುಎಇನಿಂದ ಭಾರತಕ್ಕೆ ಬಂದಿಳಿಯುವ ವಿಮಾನಗಳ ಮೇಲೆ ಯಾವುದೇ ನಿರ್ಬಂಧ ಇರುವುದಿಲ್ಲ.

ಕೊರೊನಾ ಭೀತಿ; ಭಾರತದಿಂದ ಪ್ರವೇಶಿಸುವ ವಿಮಾನಕ್ಕೆ ನಿರ್ಬಂಧ ಹೇರಿದ ದುಬೈ!
Linkup
ಮಂಗಳೂರು: ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಏ.24ರಿಂದ ಮೇ 3ರವರೆಗೆ ದುಬೈ ಹಾಗೂ ಭಾರತದ ನಡುವಿನ ವಿಮಾನಯಾನವನ್ನು ಸ್ಥಗಿತಗೊಳಿಸಲಾಗುವುದು ಎಂದು ಎಮಿರೇಟ್ಸ್‌ ವಿಮಾನ ಯಾನ ಸಂಸ್ಥೆ ತಿಳಿಸಿದೆ. ಭಾರತದಿಂದ ಪ್ರಯಾಣಿಕರು ಬೇರೆ ರಾಷ್ಟ್ರಗಳ ಮೂಲಕ ಯುಎಇ ಪ್ರವೇಶಿಸುವುದಕ್ಕೂ ನಿರ್ಬಂಧ ವಿಧಿಸಲಾಗಿದೆ. ಪ್ರಯಾಣಿಕರು ಇತರ ರಾಷ್ಟ್ರಗಳಲ್ಲಿ 14 ದಿನಗಳ ವಾಸ್ತವ್ಯ (ಕ್ವಾರಂಟೈನ್‌) ಹೂಡಿದ್ದರೆ, ಬಳಿಕ ಯುಎಇ ಪ್ರವೇಶಕ್ಕೆ ಅವಕಾಶ ಸಿಗಲಿದೆ. ಉಭಯ ರಾಷ್ಟ್ರಗಳ ನಡುವೆ ಕಾರ್ಗೊ ವಿಮಾನಗಳು ಹಾಗೂ ಯುಎಇನಿಂದ ಭಾರತಕ್ಕೆ ಬಂದಿಳಿಯುವ ವಿಮಾನಗಳ ಮೇಲೆ ಯಾವುದೇ ನಿರ್ಬಂಧ ಇರುವುದಿಲ್ಲ. ಟೆಸ್ಟ್‌ ಅವಧಿ ಇಳಿಕೆ: ದುಬೈಗೆ ಭಾರತದಿಂದ ತೆರಳುವ ಪ್ರಯಾಣಿಕರು ಹೊಂದಿರಬೇಕಾದ ಕೋವಿಡ್‌ ಟೆಸ್ಟ್‌ ನೆಗೆಟಿವ್‌ ಪ್ರಮಾಣಪತ್ರದ ಅವಧಿಯನ್ನು 72 ಗಂಟೆಯಿಂದ 48 ಗಂಟೆಗೆ ಇಳಿಸಲಾಗಿದೆ. ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರದವರು ನೀಡಿರುವ ಸಂವಹನದ ಪ್ರಕಾರ ಏ.22ರಿಂದ ಇದು ಅನ್ವಯವಾಗಿದೆ. ಒಮಾನ್‌ ನಿರ್ಬಂಧ: ಒಮಾನ್‌ ದೇಶ ಕೂಡ ಏ.24ರ ಸಂಜೆಯ ನಂತರ ಭಾರತ ಸಹಿತ ಹಲವು ರಾಷ್ಟ್ರಗಳ ವಿಮಾನ ಯಾನ ಸೇವೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಆದೇಶಿಸಿದೆ.