'ಮನೆಗೆ ಹಿರಿಯನಾಗಿ ಹುಟ್ಟುವುದೇ ಕರ್ಮ': ನಟ ಜಗ್ಗೇಶ್ ಹೀಗೆ ಹೇಳಿದ್ಯಾಕೆ?

ಕೋಮಲ್ ಬಳಿಕ ನಟ ಜಗ್ಗೇಶ್‌ರವರ ಬಾವಮೈದುನನಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಬಾವಮೈದುನನಿಗೆ ಆಸ್ಪತ್ರೆಯಲ್ಲಿ ಬೆಡ್ ದೊರಕಿಸಿಕೊಡಲು ನಟ ಜಗ್ಗೇಶ್ ಹರಸಾಹಸ ಪಟ್ಟಿದ್ದಾರೆ. ಈ ಕುರಿತಾದ ಅನುಭವವನ್ನು ಟ್ವೀಟ್ ಮಾಡುವಾಗ, ''ಮನೆಗೆ ಹಿರಿಯನಾಗಿ ಹುಟ್ಟುವುದೇ ಕರ್ಮ!'' ಎಂದು ಬರೆದಿದ್ದಾರೆ.

'ಮನೆಗೆ ಹಿರಿಯನಾಗಿ ಹುಟ್ಟುವುದೇ ಕರ್ಮ': ನಟ ಜಗ್ಗೇಶ್ ಹೀಗೆ ಹೇಳಿದ್ಯಾಕೆ?
Linkup
ತಮ್ಮ ಸಹೋದರ, ನಟ ಕೋಮಲ್‌ಗೆ ಸೋಂಕು ತಗುಲಿದ್ದರ ಬಗ್ಗೆ ನಟ ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾ ಮೂಲಕ ಬಹಿರಂಗ ಪಡಿಸಿದ್ದರು. ''ರಾಯರು ಬೃಂದಾವನದಿಂದ ಎದ್ದು ಬಂದು ಪಕ್ಕ ನಿಂತು ಅವನನ್ನು ಉಳಿಸಿಬಿಟ್ಟರು! ಈಗ ಸೇಫ್'' ಎಂದು ನಟ ಜಗ್ಗೇಶ್ ಹೇಳಿದ್ದರು. ಬಳಿಕ ''22 ಜನರ ಸಣ್ಣ ಕುಟುಂಬ ನನ್ನದು. ಕೊರೊನಾ ಸಂಕಷ್ಟಕ್ಕೆ ಮನೆಯಲ್ಲಿ ಒಬ್ಬರು ಸಿಲುಕಿದರೆ ಮನೆ ಮಂದಿಯೆಲ್ಲಾ ನರಕ ನೋಡುವಿರಿ'' ಎಂದು ಸಾಮಾಜಿಕ ಜಾಲತಾಣದಲ್ಲಿ ನಟ ಜಗ್ಗೇಶ್ ಬರೆದುಕೊಂಡಿದ್ದರು. ಇದೀಗ ''ಮನೆಗೆ ಹಿರಿಯನಾಗಿ ಹುಟ್ಟುವುದೇ ಕರ್ಮ!'' ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಕೋಮಲ್ ಬಳಿಕ ನಟ ಜಗ್ಗೇಶ್‌ರವರ ಬಾವಮೈದುನನಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಬಾವಮೈದುನನ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಕಾರಣ, ಅವರಿಗೆ ಆಸ್ಪತ್ರೆಯಲ್ಲಿ ಬೆಡ್ ದೊರಕಿಸಿಕೊಡಲು ನಟ ಜಗ್ಗೇಶ್ ಹರಸಾಹಸ ಪಟ್ಟಿದ್ದಾರೆ. ಈ ಕುರಿತಾದ ಅನುಭವವನ್ನು ಟ್ವೀಟ್ ಮಾಡುವಾಗ, ''ಮನೆಗೆ ಹಿರಿಯನಾಗಿ ಹುಟ್ಟುವುದೇ ಕರ್ಮ!'' ಎಂದು ನಟ ಜಗ್ಗೇಶ್ ಉಲ್ಲೇಖಿಸಿದ್ದಾರೆ. ನಟ ಜಗ್ಗೇಶ್ ಟ್ವೀಟ್ ''23 ಜನರ ಕೊರೊನಾ ರಕ್ಷಣೆಗೆ ಮನೆಯ ಹಿರಿಯನಾಗಿ ಹೋರಾಡಿ.. ಸಾಕಪ್ಪಾ ದೇವರೇ.. ಎನ್ನುವಷ್ಟರಲ್ಲಿ ನನ್ನ ಬಾವಮೈದುನ ಸೀರಿಯಸ್ ಆದ ಸುದ್ದಿ ಬಂತು. ರಾತ್ರಿ 11ಕ್ಕೆ. ಸರಿ ರಾತ್ರಿ ಅವನ ಕ್ಷೇಮದ ಜಾಗಕ್ಕೆ ಓಡಾಟ. ರಾಯರ ದಯೇ.. ನಾರಾಯಣ ಆಸ್ಪತ್ರೆಯಲ್ಲಿ ಕರುಣೆ ತೋರಿದರು. ಧನ್ಯವಾದ. ಮನೆಗೆ ಹಿರಿಯನಾಗಿ ಹುಟ್ಟುವುದೇ ಕರ್ಮ!'' ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಸೋಂಕಿತರಿಗೆ ಸಹಾಯ ಮಾಡುತ್ತಿದ್ದಾರೆ ನಟ ಜಗ್ಗೇಶ್ ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿರುವ ಅನೇಕರಿಗೆ ನಟ ಜಗ್ಗೇಶ್ ಸಹಾಯ ಹಸ್ತ ಚಾಚುತ್ತಿದ್ದಾರೆ. ಆಕ್ಸಿಜನ್ ಅವಶ್ಯವಿದ್ದವರಿಗೆ ಆಕ್ಸಿಜನ್ ಸಿಲಿಂಡರ್ ತಲುಪಿಸುವುದೂ ಸೇರಿದಂತೆ ನಟ ಜಗ್ಗೇಶ್ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಮನೆಗೆ ಮರಳಿದ ಕೋಮಲ್ 23 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಕೋಮಲ್ ಇತ್ತೀಚೆಗಷ್ಟೇ ಮನೆಗೆ ವಾಪಸ್ ಆದರು. ಕೋವಿಡ್ ವಿರುದ್ಧದ ಹೋರಾಟದಲ್ಲಿ ನಟ ಕೋಮಲ್ ಗೆದ್ದಿದ್ದಾರೆ. ರಾಯರ ಕೃಪೆ ಹಾಗೂ ವೈದ್ಯರ ಶ್ರಮದಿಂದ ಕೋಮಲ್ ಗುಣಮುಖರಾಗಿದ್ದಾರೆ ಎಂದಿದ್ದಾರೆ ನಟ ಜಗ್ಗೇಶ್.