ಮಗನಿಗೆ ಆಸ್ತಿ ಕೊಡಲ್ಲ, ಚಾರಿಟಿಗಳಿಗೆ 350 ಮಿಲಿಯನ್ ಡಾಲರ್ ಆಸ್ತಿ ದಾನ ಮಾಡ್ತೀನಿ: ನಟ ಜಾಕಿ ಚಾನ್!

ನಟ ಜಾಕಿ ಚಾನ್ ಅವರಿಗೆ ದೊಡ್ಡಮಟ್ಟದ ಅಭಿಮಾನಿ ಬಳಗವಿದೆ, ಇನ್ನು ಅವರು ದೊಡ್ಡ ಸಂಭಾವನೆಯನ್ನು ಪಡೆದಿದ್ದರು. ದೊಡ್ಡ ಮಟ್ಟದ ಆಸ್ತಿ ಹೊಂದಿರುವ ಜಾಕಿ ಚಾನ್ ಮಗನಿಗೆ ಆಸ್ತಿ ಕೊಡದೆ, ದಾನ ಮಾಡಲಿದ್ದಾರಂತೆ. ಯಾಕೆ?

ಮಗನಿಗೆ ಆಸ್ತಿ ಕೊಡಲ್ಲ, ಚಾರಿಟಿಗಳಿಗೆ 350 ಮಿಲಿಯನ್ ಡಾಲರ್ ಆಸ್ತಿ ದಾನ ಮಾಡ್ತೀನಿ: ನಟ ಜಾಕಿ ಚಾನ್!
Linkup
ನಟ ಅವರು ಇತ್ತೀಚೆಗಷ್ಟೇ 67ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ವಿಶ್ವದಲ್ಲಿ ಅವರು ಅತಿಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ. ಏಷ್ಯಾ, ಹಾಲಿವುಡ್‌ನಲ್ಲಿ ಜಾಕಿ ಚಾನ್‌ಗೆ ದೊಡ್ಡ ಅಭಿಮಾನಿ ಬಳಗವಿದೆ. 2019 ಜೂನ್‌ರಿಂದ 2020ರ ಜೂನ್‌ವರೆಗೆ ಅವರಿಗೆ 40 ಮಿಲಿಯನ್ ಡಾಲರ್ ರೂಪಾಯಿ ಸಿಕ್ಕಿದೆ ಎಂದು ಅಂದಾಜಿಸಲಾಗಿತ್ತು. ದಶಕದ ಹಿಂದೆ ನಟ ಜಾಕಿ ಚಾನ್ ಅವರು "ಮಗನಿಗೆ ಆಸ್ತಿ ಕೊಡೋದಿಲ್ಲ, 350 ಮಿಲಿಯನ್ ಡಾಲರ್‌ ಆಸ್ತಿಯನ್ನು ದಾನ ಮಾಡುವೆ. ಆದರೆ ಮಗನಿಗೆ ಮಾತ್ರ ನೀಡೋದಿಲ್ಲ" ಅಂತ ಹೇಳಿಕೆ ನೀಡಿದ್ದರು. "ನನ್ನ ಮಗನಿಗೆ ಸಾಮರ್ಥ್ಯವಿದ್ದರೆ ಆತ ದುಡ್ಡು ಮಾಡಿಕೊಳ್ಳಬಲ್ಲ. ಅವನ ಹತ್ತಿರ ಸಾಮರ್ಥ್ಯ ಇಲ್ಲವೆಂದರೆ ನನ್ನ ಹಣವನ್ನೂ ಆತ ವ್ಯರ್ಥ ಮಾಡುತ್ತಾನೆ" ಅಂತ ಜಾಕಿ ಚಾನ್ ಹೇಳಿದ್ದರು. 2011ರಲ್ಲಿ ಈ ಮಾತನ್ನು ಅವರು ಹೇಳಿದ್ದರು. 'ತನ್ನ ಪಾತ್ರವನ್ನು ಮೃದುಗೊಳಿಸಲು' ತನ್ನ ಮಗ ಚಿಕ್ಕವನಿದ್ದಾಗ ಸೈನ್ಯಕ್ಕೆ ಸೇರಿಕೊಳ್ಳಬೇಕೆಂದು ಒತ್ತಾಯಿಸಲಿಲ್ಲ ಎಂದು ನಟ ವಿಷಾದ ವ್ಯಕ್ತಪಡಿಸಿದರು. "ನನ್ನ ಮಗನನ್ನು ಮೃದುವಾಗಿ ಬೆಳೆಸಬೇಕು ಅಂತ ಚಿಕ್ಕ ವಯಸ್ಸಿನಲ್ಲಿಯೇ ಸೈನ್ಯಕ್ಕೆ ಸೇರಿಸಿರಲಿಲ್ಲ ಎಂಬ ಪಶ್ಚಾತ್ತಾಪವಿದೆ" ಅಂತ ಕೂಡ ಜಾಕಿ ಚಾನ್ ಹೇಳಿದ್ದಾರೆ. ಜಾಕಿ ಚಾನ್ ಹಾಗೂ ಜಾನ್ ಲಿನ್ ದಂಪತಿಗೆ ಜಾಯ್ಸಿ ಎಂಬ ಮಗನಿದ್ದಾನೆ. ಈ ಜೋಡಿ 1982ರಲ್ಲಿ ಮದುವೆಯಾಗಿದ್ದಾರೆ. ಜಾಕಿ ಚಾನ್ ಅವರು ನಟ, ಸಂಗೀತಗಾರ ಕೂಡ ಹೌದು. ಡ್ರಗ್ಸ್ ವಿಚಾರಕ್ಕೆ ಜಾಕಿ ಚಾನ್ ಅವರು 2014ರಲ್ಲಿ ಮದುವೆಯಾಗಿದ್ದರು. 'ಸ್ಟಂಟ್‌ಮನ್‌' ಎಂದೇ ಖ್ಯಾತಿಯ ಖ್ಯಾತ ನಟ ಜಾಕಿ ಚಾನ್‌ಗೆ ಕೊರೊನಾ ವೈರಸ್‌ ಸೋಂಕು ತಗುಲಿದೆ ಎಂದು ಹೇಳಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಾಕಿ ಚಾನ್, ಇದೆಲ್ಲ ಶುದ್ಧ ಸುಳ್ಳು ಎಂದು ಹೇಳಿದ್ದಾರೆ. ಜಾಕಿ ಚಾನ್ ಅವರು 100ಕ್ಕೂ ಅಧಿಕ ಆಕ್ಷನ್ ಸಿನಿಮಾಗಳಲ್ಲಿ ನಟಿಸಿದ್ದರು. 1970ರಲ್ಲಿ ಬ್ರೂಸ್ ಲೀ ಅವರ ‘ಫಿಸ್ಟ್ ಆಫ್ ಫ್ಯೂರಿ’, ‘ಎಂಟರ್ ದಿ ಡ್ರ್ಯಾಗನ್’ ಸಿನಿಮಾಗಳಲ್ಲಿ ನಟನಾಗಿ ಅಭಿನಯಿಸಿದ್ದರು. ಜಾಕಿ ಚಾನ್‌ಗೆ 1978ರಲ್ಲಿ ಬಿಡುಗಡೆಯಾದ ‘ಸ್ನೇಕ್ ಇನ್ ದಿ ಈಗಲ್ಸ್ ಶ್ಯಾಡೊ’ ಚಿತ್ರ ಭಾರೀ ಜನಪ್ರಿಯತೆ ತಂದುಕೊಟ್ಟಿತ್ತು.