ನಾಸಾ ಮುಖ್ಯಸ್ಥರು ಇಂದು ಇಸ್ರೊ ಕೇಂದ್ರಕ್ಕೆ ಭೇಟಿ: ಸಾಥ್ ನೀಡಲಿದ್ದಾರೆ ಭಾರತದ ಮೊದಲ ಗಗನಯಾತ್ರಿ ರಾಕೇಶ್ ಶರ್ಮ

ನಾಸಾ ನಿರ್ವಾಹಕ ಬಿಲ್ ನೆಲ್ಸನ್ ಅವರು ಇಂದು ಗುರುವಾರ ಇಸ್ರೊ ಕೇಂದ್ರಕ್ಕೆ ಭೇಟಿ ನೀಡಲಿದ್ದು, ಕಡಿಮೆ ಭೂ ಕಕ್ಷೆಯ  ವೀಕ್ಷಣಾಲಯವಾದ NISAR ನ್ನು ವೀಕ್ಷಿಸಲಿದ್ದಾರೆ. ಇವರೊಂದಿಗೆ ಭಾರತದ ಮೊದಲ ಗಗನಯಾತ್ರಿ ರಾಕೇಶ್ ಶರ್ಮಾ ಕೂಡ ಇರಲಿದ್ದಾರೆ. ಬೆಂಗಳೂರು: ನಾಸಾ ನಿರ್ವಾಹಕ ಬಿಲ್ ನೆಲ್ಸನ್ ಅವರು ಇಂದು ಗುರುವಾರ ಇಸ್ರೊ ಕೇಂದ್ರಕ್ಕೆ ಭೇಟಿ ನೀಡಲಿದ್ದು, ಕಡಿಮೆ ಭೂ ಕಕ್ಷೆಯ  ವೀಕ್ಷಣಾಲಯವಾದ NISAR ನ್ನು ವೀಕ್ಷಿಸಲಿದ್ದಾರೆ. ಇವರೊಂದಿಗೆ ಭಾರತದ ಮೊದಲ ಗಗನಯಾತ್ರಿ ರಾಕೇಶ್ ಶರ್ಮಾ ಕೂಡ ಇರಲಿದ್ದಾರೆ. ನೆಲ್ಸನ್ ಬೆಂಗಳೂರಿನಲ್ಲಿರುವ ಯುಆರ್ ರಾವ್ ಉಪಗ್ರಹ ಕೇಂದ್ರಕ್ಕೆ (URSC) ಭೇಟಿ ನೀಡಲಿದ್ದಾರೆ, ಅಲ್ಲಿ ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ (NISAR) ಉಪಗ್ರಹವು 2024 ರಲ್ಲಿ ನಿಗದಿತ ಉಡಾವಣೆಗೂ ಮುನ್ನ ಪರೀಕ್ಷೆಗೆ ಒಳಗಾಗುತ್ತಿದೆ. ನಿನ್ನೆ ಭಾರತಕ್ಕೆ ಆಗಮಿಸಿರುವ ನಾಸಾ ಮುಖ್ಯಸ್ಥರು ಬೆಂಗಳೂರಿನ ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಮತ್ತು ಟೆಕ್ನಾಲಜಿಕಲ್ ಮ್ಯೂಸಿಯಂ (ವಿಐಟಿಎಂ) ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. 2024 ರಲ್ಲಿ ಉಡಾವಣೆ ಮಾಡಲು ಯೋಜಿಸಿರುವ ಮುಂಬರುವ ಜಂಟಿ NISAR ಮಿಷನ್ ಹೇಗೆ ಬಾಹ್ಯಾಕಾಶದಲ್ಲಿ ಅಮೆರಿಕ ಮತ್ತು ಭಾರತದ ಪಾಲುದಾರಿಕೆಯು ಭೂಮಿಯ ಮೇಲಿನ ಜನರಿಗೆ ಹೇಗೆ ಸಹಾಯ ಮಾಡಲಿದೆ ಎಂದು ಉದಾಹರಣೆ ಸಹಿತ ವಿವರಿಸಿದರು. ಇದನ್ನೂ ಓದಿ: ಗಗನಯಾನ: ಪರೀಕ್ಷಾರ್ಥ ಉಡಾವಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಇಸ್ರೊ ನಿಸಾರ್ ಅಂಕಿಅಂಶಗಳು ಪ್ರಪಂಚದಾದ್ಯಂತದ ಜನರಿಗೆ ನೈಸರ್ಗಿಕ ಸಂಪನ್ಮೂಲಗಳು ಮತ್ತು ಅಪಾಯಗಳನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ, ಜೊತೆಗೆ ಹವಾಮಾನ ಬದಲಾವಣೆಯ ಪರಿಣಾಮಗಳು ಮತ್ತು ವೇಗವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ವಿಜ್ಞಾನಿಗಳಿಗೆ ಮಾಹಿತಿಯನ್ನು ಒದಗಿಸುತ್ತದೆ. 2024 ರ ಅಂತ್ಯದ ವೇಳೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಭಾರತೀಯ ಗಗನಯಾತ್ರಿಗಳಿಗೆ ತರಬೇತಿ ನೀಡಲು ಮತ್ತು ಕಳುಹಿಸಲು ಅಮೆರಿಕ ಸಹಾಯ ಮಾಡುತ್ತದೆ ಎಂದು ನೆಲ್ಸನ್ ಘೋಷಿಸಿದರು.

ನಾಸಾ ಮುಖ್ಯಸ್ಥರು ಇಂದು ಇಸ್ರೊ ಕೇಂದ್ರಕ್ಕೆ ಭೇಟಿ: ಸಾಥ್ ನೀಡಲಿದ್ದಾರೆ ಭಾರತದ ಮೊದಲ ಗಗನಯಾತ್ರಿ ರಾಕೇಶ್ ಶರ್ಮ
Linkup
ನಾಸಾ ನಿರ್ವಾಹಕ ಬಿಲ್ ನೆಲ್ಸನ್ ಅವರು ಇಂದು ಗುರುವಾರ ಇಸ್ರೊ ಕೇಂದ್ರಕ್ಕೆ ಭೇಟಿ ನೀಡಲಿದ್ದು, ಕಡಿಮೆ ಭೂ ಕಕ್ಷೆಯ  ವೀಕ್ಷಣಾಲಯವಾದ NISAR ನ್ನು ವೀಕ್ಷಿಸಲಿದ್ದಾರೆ. ಇವರೊಂದಿಗೆ ಭಾರತದ ಮೊದಲ ಗಗನಯಾತ್ರಿ ರಾಕೇಶ್ ಶರ್ಮಾ ಕೂಡ ಇರಲಿದ್ದಾರೆ. ಬೆಂಗಳೂರು: ನಾಸಾ ನಿರ್ವಾಹಕ ಬಿಲ್ ನೆಲ್ಸನ್ ಅವರು ಇಂದು ಗುರುವಾರ ಇಸ್ರೊ ಕೇಂದ್ರಕ್ಕೆ ಭೇಟಿ ನೀಡಲಿದ್ದು, ಕಡಿಮೆ ಭೂ ಕಕ್ಷೆಯ  ವೀಕ್ಷಣಾಲಯವಾದ NISAR ನ್ನು ವೀಕ್ಷಿಸಲಿದ್ದಾರೆ. ಇವರೊಂದಿಗೆ ಭಾರತದ ಮೊದಲ ಗಗನಯಾತ್ರಿ ರಾಕೇಶ್ ಶರ್ಮಾ ಕೂಡ ಇರಲಿದ್ದಾರೆ. ನೆಲ್ಸನ್ ಬೆಂಗಳೂರಿನಲ್ಲಿರುವ ಯುಆರ್ ರಾವ್ ಉಪಗ್ರಹ ಕೇಂದ್ರಕ್ಕೆ (URSC) ಭೇಟಿ ನೀಡಲಿದ್ದಾರೆ, ಅಲ್ಲಿ ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ (NISAR) ಉಪಗ್ರಹವು 2024 ರಲ್ಲಿ ನಿಗದಿತ ಉಡಾವಣೆಗೂ ಮುನ್ನ ಪರೀಕ್ಷೆಗೆ ಒಳಗಾಗುತ್ತಿದೆ. ನಿನ್ನೆ ಭಾರತಕ್ಕೆ ಆಗಮಿಸಿರುವ ನಾಸಾ ಮುಖ್ಯಸ್ಥರು ಬೆಂಗಳೂರಿನ ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಮತ್ತು ಟೆಕ್ನಾಲಜಿಕಲ್ ಮ್ಯೂಸಿಯಂ (ವಿಐಟಿಎಂ) ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. 2024 ರಲ್ಲಿ ಉಡಾವಣೆ ಮಾಡಲು ಯೋಜಿಸಿರುವ ಮುಂಬರುವ ಜಂಟಿ NISAR ಮಿಷನ್ ಹೇಗೆ ಬಾಹ್ಯಾಕಾಶದಲ್ಲಿ ಅಮೆರಿಕ ಮತ್ತು ಭಾರತದ ಪಾಲುದಾರಿಕೆಯು ಭೂಮಿಯ ಮೇಲಿನ ಜನರಿಗೆ ಹೇಗೆ ಸಹಾಯ ಮಾಡಲಿದೆ ಎಂದು ಉದಾಹರಣೆ ಸಹಿತ ವಿವರಿಸಿದರು. ಇದನ್ನೂ ಓದಿ: ಗಗನಯಾನ: ಪರೀಕ್ಷಾರ್ಥ ಉಡಾವಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಇಸ್ರೊ ನಿಸಾರ್ ಅಂಕಿಅಂಶಗಳು ಪ್ರಪಂಚದಾದ್ಯಂತದ ಜನರಿಗೆ ನೈಸರ್ಗಿಕ ಸಂಪನ್ಮೂಲಗಳು ಮತ್ತು ಅಪಾಯಗಳನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ, ಜೊತೆಗೆ ಹವಾಮಾನ ಬದಲಾವಣೆಯ ಪರಿಣಾಮಗಳು ಮತ್ತು ವೇಗವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ವಿಜ್ಞಾನಿಗಳಿಗೆ ಮಾಹಿತಿಯನ್ನು ಒದಗಿಸುತ್ತದೆ. 2024 ರ ಅಂತ್ಯದ ವೇಳೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಭಾರತೀಯ ಗಗನಯಾತ್ರಿಗಳಿಗೆ ತರಬೇತಿ ನೀಡಲು ಮತ್ತು ಕಳುಹಿಸಲು ಅಮೆರಿಕ ಸಹಾಯ ಮಾಡುತ್ತದೆ ಎಂದು ನೆಲ್ಸನ್ ಘೋಷಿಸಿದರು. ನಾಸಾ ಮುಖ್ಯಸ್ಥರು ಇಂದು ಇಸ್ರೊ ಕೇಂದ್ರಕ್ಕೆ ಭೇಟಿ: ಸಾಥ್ ನೀಡಲಿದ್ದಾರೆ ಭಾರತದ ಮೊದಲ ಗಗನಯಾತ್ರಿ ರಾಕೇಶ್ ಶರ್ಮ