ಕೋಮಾದಲ್ಲಿದ್ದಾರೆ ಸಾಯಿ ಧರಮ್ ತೇಜ್: ಆಘಾತಕಾರಿ ವಿಷಯ ಬಾಯ್ಬಿಟ್ಟ ಪವನ್ ಕಲ್ಯಾಣ್!

ನಟ ಸಾಯಿ ಧರಮ್ ತೇಜ್ ಅವರ ಆರೋಗ್ಯದ ಬಗ್ಗೆ ಪವನ್ ಕಲ್ಯಾಣ್ ಆಘಾತಕಾರಿ ಮಾಹಿತಿ ಬಾಯ್ಬಿಟ್ಟಿದ್ದಾರೆ. ಸಾಯಿ ಧರಮ್ ತೇಜ್ ಇನ್ನೂ ಕೋಮಾದಲ್ಲಿದ್ದಾರೆ ಎಂದು ಪವನ್ ಕಲ್ಯಾಣ್ ತಿಳಿಸಿದ್ದಾರೆ.

ಕೋಮಾದಲ್ಲಿದ್ದಾರೆ ಸಾಯಿ ಧರಮ್ ತೇಜ್: ಆಘಾತಕಾರಿ ವಿಷಯ ಬಾಯ್ಬಿಟ್ಟ ಪವನ್ ಕಲ್ಯಾಣ್!
Linkup
ಮೆಗಾ ಸ್ಟಾರ್ ಚಿರಂಜೀವಿ ಅವರ ಸಹೋದರಿಯ ಪುತ್ರ, ಟಾಲಿವುಡ್‌ನ ಉದಯೋನ್ಮುಖ ನಟ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಕಳೆದ ಸೆಪ್ಟೆಂಬರ್ 10 ರಂದು ಸಂಭವಿಸಿದ ಬೈಕ್ ಆಕ್ಸಿಡೆಂಟ್‌ನಲ್ಲಿ ನಟ ಸಾಯಿ ಧರಮ್ ತೇಜ್ ಅವರ ಕಾಲರ್ ಬೋನ್ ಫ್ರ್ಯಾಕ್ಚರ್ ಆಗಿತ್ತು. ಆಸ್ಪತ್ರೆಯಲ್ಲಿ ಸಾಯಿ ಧರಮ್ ತೇಜ್ ಅವರ ಚಿಕಿತ್ಸೆ ಮುಂದುವರೆದಿದೆ. ಹೀಗಿರುವಾಗಲೇ, ನಟ ಸಾಯಿ ಧರಮ್ ತೇಜ್ ಅವರ ಆರೋಗ್ಯದ ಬಗ್ಗೆ ಆಘಾತಕಾರಿ ಮಾಹಿತಿ ಬಾಯ್ಬಿಟ್ಟಿದ್ದಾರೆ. ‘‘ಸಾಯಿ ಧರಮ್ ತೇಜ್ ಕೋಮಾದಲ್ಲಿದ್ದಾರೆ’’ ಎಂದ ನಟ ಪವನ್ ಕಲ್ಯಾಣ್ ನಟ ಸಾಯಿ ಧರಮ್ ತೇಜ್ ಅಭಿನಯದ ‘ರಿಪಬ್ಲಿಕ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ‘ರಿಪಬ್ಲಿಕ್’ ಚಿತ್ರದ ಪ್ರೀ-ರಿಲೀಸ್ ಈವೆಂಟ್‌ಗೆ ಪವನ್ ಕಲ್ಯಾಣ್ ಹಾಜರ್ ಆಗಿದ್ದರು. ಇದೇ ಸಮಾರಂಭದಲ್ಲಿ ಸಾಯಿ ಧರಮ್ ತೇಜ್ ಅವರ ಆರೋಗ್ಯದ ಬಗ್ಗೆ ಪವನ್ ಕಲ್ಯಾಣ್ ಮಾತನಾಡಿದ್ದಾರೆ. ‘’ನನ್ನ ಸಂಬಂಧಿಕರ ಸಿನಿಮಾ ಸಮಾರಂಭಗಳಲ್ಲಿ ನಾನು ಭಾಗವಹಿಸುವುದಿಲ್ಲ. ಆದರೆ, ಈಗ ‘ರಿಪಬ್ಲಿಕ್’ ಚಿತ್ರದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ನಾನು ಭಾಗವಹಿಸುತ್ತಿರುವುದಕ್ಕೆ ಕಾರಣ ನನ್ನ ಸೋದರಳಿಯ ಸಾಯಿ ಧರಮ್ ತೇಜ್. ರಸ್ತೆ ಅಪಘಾತದಿಂದಾಗಿ ಗಾಯಗೊಂಡಿರುವ ಸಾಯಿ ಧರಮ್ ತೇಜ್ ಸದ್ಯ ಆಸ್ಪತ್ರೆಯಲ್ಲಿದ್ದಾರೆ’’ ‘’ಸಾಯಿ ಧರಮ್ ತೇಜ್ ವೇಗವಾಗಿ ಬೈಕ್ ಚಲಾಯಿಸುತ್ತಿದ್ದರು ಎಂದು ವರದಿಯಾಗಿದೆ. ಆದರೆ, ಸಾಯಿ ಧರಮ್ ತೇಜ್ 45 kmph ವೇಗದಲ್ಲಿ ಮಾತ್ರ ಬೈಕ್ ಚಲಾಯಿಸುತ್ತಿದ್ದರು. ಸಂಭವಿಸಿದ್ದು ದುರಾದೃಷ್ಟಕರ. ಸಾಯಿ ಧರಮ್ ತೇಜ್ ಇನ್ನೂ ಕೋಮಾದಲ್ಲಿದ್ದಾರೆ. ಅವರಿನ್ನೂ ಕಣ್ಣು ಬಿಟ್ಟಿಲ್ಲ’’ ಎಂದು ‘ರಿಪಬ್ಲಿಕ್’ ಚಿತ್ರದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಪವನ್ ಕಲ್ಯಾಣ್ ಹೇಳಿದ್ದಾರೆ. ಜೊತೆಗೆ ಸಾಯಿ ಧರಮ್ ತೇಜ್ ಅವರ ಬೈಕ್ ಆಕ್ಸಿಡೆಂಟ್ ಮತ್ತು ಆರೋಗ್ಯದ ವಿಚಾರವೇ ಮಾಧ್ಯಮಗಳಲ್ಲಿ ಹೆಚ್ಚು ಸುದ್ದಿಯಾಗುತ್ತಿರುವುದಕ್ಕೆ ಪವನ್ ಕಲ್ಯಾಣ್ ಬೇಸರ ವ್ಯಕ್ತಪಡಿಸಿದರು. ‘’ಸಾಯಿ ಧರಮ್ ತೇಜ್ ಬದಲು ಪೊಲಿಟಿಕಲ್ ಕ್ರೈಮ್ಸ್‌ ಬಗ್ಗೆ ಮಾತನಾಡಿ’’ ಎಂದರು ಪವನ್ ಕಲ್ಯಾಣ್. ಸಾಯಿ ಧರಮ್ ತೇಜ್ ವಿರುದ್ಧ ದೂರು ದಾಖಲಾಗಿದೆ ಸೆಪ್ಟೆಂಬರ್ 10 ರಂದು ಸಂಭವಿಸಿದ ಸಾಯಿ ಧರಮ್ ತೇಜ್ ಅವರ ಬೈಕ್ ಅಪಘಾತಕ್ಕೆ ಅತೀ ವೇಗದ ಚಾಲನೆಯೇ ಕಾರಣ ಎಂದು ಹೇಳಲಾಗಿದೆ. 40 ಕಿ.ಮೀ ವೇಗ ಮಿತಿ ಇದ್ದ ರಸ್ತೆಯಲ್ಲಿ 70-80 ಕಿ.ಮೀ. ವೇಗದಲ್ಲಿ ಸಾಯಿ ಧರಮ್ ತೇಜ್ ಬೈಕ್ ಚಾಲನೆ ಮಾಡುತ್ತಿದ್ದರು. ಸಾಲದಕ್ಕೆ ಎಡಬದಿಯಿಂದ ರಿಕ್ಷಾವೊಂದನ್ನು ಓವರ್ ಟೇಕ್ ಮಾಡಲು ಅವರು ಪ್ರಯತ್ನಿಸಿದ್ದರು. ಆ ವೇಳೆ ಸಾಯಿ ಧರಮ್ ತೇಜ್ ಅವರು ಸ್ಕಿಡ್ ಆಗಿ ಬಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದರು. ಅಲ್ಲದೆ, ಅವರು ರಾಂಗ್ ಸೈಡ್‌ನಿಂದ ಓವರ್ ಟೇಕ್ ಮಾಡುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ರೆಕಾರ್ಡ್‌ ಆಗಿವೆ. ತಮ್ಮ ದುಬಾರಿ ಸ್ಪೋರ್ಟ್ಸ್‌ ಬೈಕ್‌ನಲ್ಲಿ ಅವರು ಅಜಾಗರೂಕತೆಯಿಂದ ರೈಡ್ ಮಾಡುತ್ತಿದ್ದರು ಮತ್ತು ಹೆಲ್ಮೆಟ್ ಕೂಡ ಸರಿಯಾಗಿ ಧರಿಸಿರಲಿಲ್ಲ ಎನ್ನಲಾಗಿದೆ. ನಿರ್ಲಕ್ಷ್ಯದಿಂದ ಬೈಕ್ ಚಲಾಯಿಸಿದ್ದಕ್ಕೆ ಸಾಯಿ ಧರಮ್ ತೇಜ್‌ ವಿರುದ್ಧ ಹೈದರಾಬಾದ್‌ನ ರಾಯದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.