ಅಪ್ಪನನ್ನು ಅಗೌರವಿಸಿ ಅಮ್ಮನ ಕೊನೆಯ ಹೆಸರನ್ನು ಇಟ್ಟುಕೊಂಡ್ರಂತೆ ಬೋಲ್ಡ್ ನಟಿ ಮಲ್ಲಿಕಾ ಶೆರಾವತ್

ಮಾದಕ ನಟಿ ಮಲ್ಲಿಕಾ ಶೆರಾವತ್ ಅವರು ಅಪ್ಪನನ್ನು ಅಗೌರವಿಸಿ ಅಮ್ಮನ ಕೊನೆಯ ಹೆಸರನ್ನು ಇಟ್ಟುಕೊಂಡಿದ್ದಾರೆ. ಯಾಕೆ ನಾನು ಈ ರೀತಿ ಮಾಡಿದೆ ಎಂದು ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಅಪ್ಪನನ್ನು ಅಗೌರವಿಸಿ ಅಮ್ಮನ ಕೊನೆಯ ಹೆಸರನ್ನು ಇಟ್ಟುಕೊಂಡ್ರಂತೆ ಬೋಲ್ಡ್ ನಟಿ ಮಲ್ಲಿಕಾ ಶೆರಾವತ್
Linkup
ನಟಿ ಅವರು ಬಾಲಿವುಡ್‌ನ ಬೋಲ್ಡ್ ನಟಿಯರಲ್ಲಿ ಒಬ್ಬರು. 2014ರಲ್ಲಿ ಇಮ್ರಾನ್ ಹಷ್ಮಿ ಜೊತೆಗೆ 'ಮರ್ಡರ್' ಸಿನಿಮಾದಲ್ಲಿನ ಬೋಲ್ಡ್ ಪಾತ್ರದ ಮೂಲಕ ಮಲ್ಲಿಕಾ ಪ್ರೇಕ್ಷಕರ ಮನಸ್ಸು ಗೆದ್ದಿದ್ದರು. ಇಷ್ಟುದಿನ ನಟನೆಗೆ ಅಷ್ಟಾಗಿ ಮಹತ್ವ ನೀಡದ ಅವರು ಅಭಿಮಾನಿಗಳ ಜೊತೆಗೆ ಸದಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುತ್ತಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅವರು ಚಿತ್ರರಂಗದ ಆರಂಭದಲ್ಲಿ ಎದುರಿಸಿದ ಕಷ್ಟಗಳು, ತಾಯಿಯ ಹೆಸರಿನ ಕೊನೆಯ ಹೆಸರನ್ನು ಯಾಕೆ ಇಟ್ಟುಕೊಂಡೆ ಎಂಬುದನ್ನು ಕೂಡ ಹೇಳಿದ್ದಾರೆ. ಮಲ್ಲಿಕಾ ಶೆರಾವತ್ ಕುಟುಂಬದಲ್ಲಿ ಅವರು ನಟಿಯಾಗೋದು ಇಷ್ಟವಿರಲಿಲ್ಲ. ಮಲ್ಲಿಕಾ ತಂದೆ ತುಂಬ ಬಲವಾಗಿ ನಟಿ ಯಾಗುವುದನ್ನು ವಿರೋಧಿಸಿದ್ದರು. ಮಲ್ಲಿಕಾ ತನ್ನ ಕುಟುಂಬದ ಹೆಸರನ್ನು ಹಾಳುಮಾಡುತ್ತಾರೆ ಎಂದು ಅವರ ತಂದೆ ಹೇಳುತ್ತಿದ್ದರಂತೆ. ಅಪ್ಪನ ಕಟುವಾದ ಮಾತುಗಳಿಂದ ಬೇಸರಗೊಂಡ ಮಲ್ಲಿಕಾ ಅವರು ತಂದೆಯ ಕೊನೆಯ ಹೆಸರನ್ನು ತೆಗೆದು ಹಾಕಿ, ತಾಯಿಯ ಹೆಸರಿನ ಕೊನೆಯ ಶಬ್ದವನ್ನು ಇಟ್ಟುಕೊಂಡಿದ್ದಾರೆ. ತಂದೆಗೆ ಆಗ ಉತ್ತರ ನೀಡಿದ್ದ ಮಲ್ಲಿಕಾ ಶೆರಾವತ್ ಅವರು "ಹೌದು, ನೀವು ನನ್ನ ತಂದೆ, ನಿಮ್ಮನ್ನು ಗೌರವಿಸುತ್ತೇನೆ, ಪ್ರೀತಿಸುತ್ತೇನೆ, ನಾನು ತಾಯಿಯ ಹೆಸರು ಬಳಸಿಕೊಳ್ಳುತ್ತೇನೆ. ಹೀಗಾಗಿ ನಾನು ಶೆರಾವತ್ ಎಂದು ಹೆಸರಿಟ್ಟುಕೊಂಡೆ" ಎಂದು ಹೇಳಿದ್ದರು. 'ನಕಾಬ್' ವೆಬ್ ಶೋನಲ್ಲಿ ನಟಿ ಮಲ್ಲಿಕಾ ಶೆರಾವತ್ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಮರ್ಡರ್‌ ಮಿಸ್ಟರ್ ಕಥೆಯುಳ್ಳದ್ದಾಗಿದೆ. 'ನಕಾಬ್‌'ನಲ್ಲಿ ನಟಿ ಇಶಾ ಗುಪ್ತಾ ಕೂಡ ಕಾಣಿಸಿಕೊಂಡಿದ್ದಾರೆ. ಇನ್ನು ಮಲ್ಲಿಕಾ ಶೆರಾವತ್ ಅವರು ಕೆಲ ರಿಯಾಲಿಟಿ ಶೋಗಳಿಗೆ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಎಂಎಕ್ಸ್ ಪ್ಲೇಯರ್‌ನಲ್ಲಿ ರಿಲೀಸ್ ಆಗೋಕೆ ರೆಡಿ ಇರುವ ಈ ವೆಬ್‌ ಸಿರೀಸ್‌ನ ಟ್ರೈಲರ್ ಕೂಡ ಲಾಂಚ್ ಆಗಿದೆ. ಮುಂಬರುವ ದಿನಗಳಲ್ಲಿ ಮಲ್ಲಿಕಾ ಇನ್ನಷ್ಟು ಸಿನಿಮಾಗಳನ್ನು ಮಾಡಲಿದ್ದಾರಂತೆ. "ನನ್ನ ಆನ್‌ಸ್ಕ್ರೀನ್ ಇಮೇಜ್‌ನಿಂದಾಗಿ ನಟರು ನನ್ನ ಬಗ್ಗೆ ಏನೇನೋ ಕಲ್ಪನೆ ಮಾಡಿಕೊಂಡಿದ್ದರು. ಆದರೆ, ಹೀರೋಗಳ ಜೊತೆಗೆ ನಾನು ಮಂಚ ಏರಲಿಲ್ಲ. ಇದರಿಂದ ಅನೇಕ ಪಾತ್ರಗಳು ನನಗೆ ಸಿಗಲಿಲ್ಲ" ಎಂದು ಬಾಲಿವುಡ್‌ನಲ್ಲಿರುವ ಕಾಸ್ಟಿಂಗ್ ಕೌಚ್ ಮಲ್ಲಿಕಾ ಶೆರಾವತ್ ಮಾತನಾಡಿದ್ದರು. ಒಂದು ಕಾಮಿಡಿ ಶೋನಲ್ಲಿ ಭಾಗವಹಿಸಿದ್ದ ಅವರು ಅತ್ತ ಸ್ಕರ್ಟ್ ಅಲ್ಲದ, ಇತ್ತ ಸೀರೆಯೂ ಅಲ್ಲದ ಉಡುಗೆ ತೊಟ್ಟಿದ್ದರು. ಮಲ್ಲಿಕಾ ಶೆರಾವತ್ ಡ್ರೆಸ್ ನೋಡಿ "ಈ ತರಹ ಉಡುಪು ತೊಡುವ ಬದಲು ಸೀರೆಯನ್ನೇ ನಟಿ ಮಲ್ಲಿಕಾ ಶೆರಾವತ್ ತೊಡಬಹುದಿತ್ತು, ಇಂತಹ ಬಟ್ಟೆ ತೊಡುವ ಬದಲು ಸ್ಕರ್ಟ್‌ ಅನ್ನೇ ಹಾಕಿಕೊಳ್ಳಬಹುದಿತ್ತು" ಎಂದೆಲ್ಲ ಕಾಮೆಂಟ್ ಮಾಡಿದ್ದರು. 'ಪ್ಯಾರ್ ಕೆ ಸೈಡ್ ಎಫೆಕ್ಟ್ಸ್', 'ಬಚ್ಕೆ ರೆಹ್ನಾ ರೇ ಬಾಬಾ', 'ಶಾದಿ ಸೆ ಪೆಹ್ಲೆ', 'ಡರ್ನಾ ಝರೂರಿ ಹೈ', 'ವೆಲ್‌ಕಮ್', 'ಝೀನತ್' ಚಿತ್ರದ ಬಳಿಕ 'ದಿ ಸ್ಟೋರಿ', 'ಬೂ ಸಬ್ಕಿ ಫಟೇಗಿ' ಮುಂತಾದ ಸಿನಿಮಾ, ವೆಬ್ ಸಿರೀಸ್‌ಗಳಲ್ಲಿ ಮಲ್ಲಿಕಾ ಬಣ್ಣ ಹಚ್ಚಿದ್ದಾರೆ.