ನಟ ಮೋಹನ್ ತಂದೆ-ತಾಯಿ ಹಾಗೂ ಪುತ್ರನಿಗೆ ಕೋವಿಡ್-19 ಪಾಸಿಟಿವ್

ತಮ್ಮ ಕುಟುಂಬದ ಕೋವಿಡ್ ಅನುಭವ ಹಾಗೂ ಪ್ರಸ್ತುತ ಸನ್ನಿವೇಶದ ಬಗ್ಗೆ ಕನ್ನಡ ನಟ ಹಾಗೂ ನಿರ್ದೇಶಕ ಮೋಹನ್ ಮಾತನಾಡಿದ್ದಾರೆ.

ನಟ ಮೋಹನ್ ತಂದೆ-ತಾಯಿ ಹಾಗೂ ಪುತ್ರನಿಗೆ ಕೋವಿಡ್-19 ಪಾಸಿಟಿವ್
Linkup
ಕನ್ನಡ ನಟ, ನಿರ್ದೇಶಕ ಅವರ ತಂದೆ-ತಾಯಿ ಹಾಗೂ ಪುತ್ರನಿಗೆ ಪಾಸಿಟಿವ್ ದೃಢಪಟ್ಟಿದೆ. ಅದೃಷ್ಟವಶಾತ್ ಕೊರೊನಾ ಪರೀಕ್ಷಾ ವರದಿಯಲ್ಲಿ ನಟ ಮೋಹನ್ ಅವರಿಗೆ ನೆಗೆಟಿವ್ ಕಂಡುಬಂದಿದೆ. ತಮ್ಮ ಕುಟುಂಬದ ಕೋವಿಡ್ ಅನುಭವ ಹಾಗೂ ಪ್ರಸ್ತುತ ಸನ್ನಿವೇಶದ ಬಗ್ಗೆ ನಟ ಮೋಹನ್ ಮಾತನಾಡಿದ್ದಾರೆ. ನಟ ಮೋಹನ್ ಹೇಳಿದ್ದೇನು? ''ಇಂದಿನ ಪರಿಸ್ಥಿತಿಯಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆ ಮತ್ತು ಆಕ್ಸಿಜನ್ ಸಿಗುವುದೇ ಕಷ್ಟವಾಗಿದೆ. ನನ್ನ ತಂದೆ-ತಾಯಿ ಇಬ್ಬರಿಗೂ ವಯಸ್ಸು 60+. ಅವರಿಬ್ಬರಿಗೂ ಬೆಡ್ ದೊರಕಿಸಿಕೊಡಲು ಹರಸಾಹಸ ಪಡಬೇಕಾಯಿತು. ಎಲ್ಲವೂ ಸರಿ ಹೋಯ್ತು ಅನ್ನೋಷ್ಟರಲ್ಲಿ ನನ್ನ ಮಗನಿಗೆ ಕೋವಿಡ್-19 ಪಾಸಿಟಿವ್ ಕಂಡುಬಂದಿದೆ. ಸದ್ಯ ಮಗ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾನೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ'' ಅಂತ ನಟ ಮೋಹನ್ ತಿಳಿಸಿದ್ದಾರೆ. ''ಈಗಿನ ಪರಿಸ್ಥಿತಿಯಂತೂ ಭಯಾನಕವಾಗಿದೆ. ಉತ್ತಮ ನಾಗರಿಕರಾಗಿ ನಾವು ಮನೆಯಲ್ಲೇ ಇದ್ದು, ಸೋಂಕು ಹರಡುವುದನ್ನು ತಪ್ಪಿಸಬೇಕು'' ಎಂದು ಮೋಹನ್ ಹೇಳಿದ್ದಾರೆ. ಅಂದ್ಹಾಗೆ, ನಟ ಮೋಹನ್ 'ನಾಗಿಣಿ 2' ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದರು. ಕ್ರೇಜಿ ಸ್ಟಾರ್ ರವಿಚಂದ್ರನ್ ಜೊತೆಗೆ ಮೋಹನ್ ನಟಿಸಿರುವ 'ರವಿ ಬೋಪಣ್ಣ' ಚಿತ್ರ ಬಿಡುಗಡೆಯಾಗಬೇಕಿದೆ. ವೆಬ್ ಸೀರೀಸ್‌ವೊಂದನ್ನು ನಿರ್ದೇಶನ ಮಾಡಲು ಮೋಹನ್ ಮನಸ್ಸು ಮಾಡಿದ್ದಾರೆ.