ಮಗನ ಮದುವೆಗಿಟ್ಟ 18 ಲಕ್ಷ ಹಣವನ್ನು ತನ್ನ ಕ್ಷೇತ್ರದ ಜನರಿಗೆ ಕೊರೊನಾ ಲಸಿಕೆ ಹಾಕಲು ಕೊಟ್ಟ ಬಿಜೆಪಿ ಶಾಸಕ!

ಕಲ್ಯಾಣ್‌ ಕ್ಷೇತ್ರದ ಬಿಜೆಪಿ ಶಾಸಕ ಗಣಪತ್‌ ಗಾಯಕ್ವಾಡ್‌ ಅವರು ತಮ್ಮ ಮಗನ ಮದುವೆಗೆಂದು ತೆಗೆದಿರಿಸಿದ್ದ 18 ಲಕ್ಷ ರೂಪಾಯಿಗಳನ್ನು ಕ್ಷೇತ್ರದಲ್ಲಿನ ಜನರಿಗೆ ಲಸಿಕೆ ಹಾಕಿಸಲು ಬಳಸುವ ನಿರ್ಧಾರ ಪ್ರಕಟಿಸಿದ್ದಾರೆ. ​​ಈ ಮೂಲಕ ಇತರ ಜನಪ್ರತಿನಿಧಿಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.

ಮಗನ ಮದುವೆಗಿಟ್ಟ 18 ಲಕ್ಷ ಹಣವನ್ನು ತನ್ನ ಕ್ಷೇತ್ರದ ಜನರಿಗೆ ಕೊರೊನಾ ಲಸಿಕೆ ಹಾಕಲು ಕೊಟ್ಟ ಬಿಜೆಪಿ ಶಾಸಕ!
Linkup
ಮುಂಬಯಿ: ಲಸಿಕೆ ಕೊರತೆ ಹಾಗೂ ವೈದ್ಯಕೀಯ ಉಪಕರಣಗಳ ಅಭಾವದಿಂದ ಸೋಂಕಿತರ ಚಿಕಿತ್ಸೆಗೆ ಮಹಾರಾಷ್ಟ್ರದ ಆಸ್ಪತ್ರೆಗಳು ಪರದಾಡುತ್ತಿವೆ. ಇಂತಹ ಸಂಕಷ್ಟದ ಸಮಯದಲ್ಲಿ ಕಲ್ಯಾಣ್‌ ಕ್ಷೇತ್ರದ ಬಿಜೆಪಿ ಶಾಸಕ ಅವರು ತಮ್ಮ ಮಗನ ಮದುವೆಗೆಂದು ತೆಗೆದಿರಿಸಿದ್ದ 18 ಲಕ್ಷ ರೂಪಾಯಿಗಳನ್ನು ಕ್ಷೇತ್ರದಲ್ಲಿನ ಜನರಿಗೆ ಲಸಿಕೆ ಹಾಕಿಸಲು ಬಳಸುವ ನಿರ್ಧಾರ ಪ್ರಕಟಿಸಿದ್ದಾರೆ. ಈ ಮೂಲಕ ಇತರ ಜನಪ್ರತಿನಿಧಿಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಗಾಯಕ್ವಾಡ್‌ ಅವರ ಪುತ್ರ ವೈಭವ್‌ ಮದುವೆ ಮೇ 4ರಂದು ನಡೆಯಲಿದೆ. ಆದರೆ ಲಾಕ್‌ಡೌನ್‌ ನಿರ್ಬಂಧಗಳಿಂದ ಮದುವೆಯಲ್ಲಿ 25 ಜನರಷ್ಟೇ ಪಾಲ್ಗೊಳ್ಳುತ್ತಿರುವುದರಿಂದ ಅವರಿಗೆ ಭಾರಿ ಹಣ ಉಳಿತಾಯವಾಗುತ್ತಿದೆ. ಹೀಗಾಗಿ ಮಗನ ಮದುವೆಗೆಂದು ಕೂಡಿಟ್ಟಿದ್ದ 18 ಲಕ್ಷ ರೂಪಾಯಿಗಳನ್ನು ಅವರು ಕ್ಷೇತ್ರದ ಜನರಿಗೆ ಲಸಿಕೆ ಹಾಕಿಸಲು ಬಳಸುತ್ತಿದ್ದಾರೆ. ಈ ಸಂಬಂಧ ಲಸಿಕೆ ಉತ್ಪಾದಕ ಕಂಪನಿಗಳ ಜತೆ ಮಾತುಕತೆ ನಡೆಸಿದ್ದು, ಅಭಿಯಾನಕ್ಕೆ ಸಿದ್ಧತೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.