ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ನಾಗರತ್ನ ಅವರ ಕುರಿತಾದ ಒಂದಿಷ್ಟು ಇಂಟರೆಸ್ಟಿಂಗ್ ಸಂಗತಿಗಳು..!

ನ್ಯಾಯಮೂರ್ತಿ ನಾಗರತ್ನ ಅವರು ಚಿಕ್ಕವರಿದ್ದಾಗ ಅವರನ್ನು ಪ್ರತಿದಿನ ಶಾಲೆಗೆ ಕರೆದೊಯ್ದು, ಸಂಜೆ ವಾಪಸ್ ಕರೆತರುತ್ತಿದ್ದ ವ್ಯಕ್ತಿ ಇದೀಗ ಸುಪ್ರೀಂ ಕೋರ್ಟ್‌ನ ಹಿರಿಯ ರಿಜಿಸ್ಟ್ರಾರ್ ಆಗಿದ್ದಾರಂತೆ..!

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ನಾಗರತ್ನ ಅವರ ಕುರಿತಾದ ಒಂದಿಷ್ಟು ಇಂಟರೆಸ್ಟಿಂಗ್ ಸಂಗತಿಗಳು..!
Linkup
: ಶೀಘ್ರದಲ್ಲೇ ಸುಪ್ರೀಂ ಕೋರ್ಟ್‌ ಮುಖ್ಯ ಆಗಲಿರುವ ನ್ಯಾಯಮೂರ್ತಿ ಬಿ. ವಿ. ಅವರು, ತಮ್ಮ ಜೀವನವನ್ನು ಕಳೆದಿದ್ದು, ದಿಲ್ಲಿಯಲ್ಲಿ. ಅವರ ತಂದೆ ಇ. ಎಸ್. ವೆಂಕಟರಾಮಯ್ಯ ಅವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿದ್ದ ಕಾಲದಲ್ಲಿ ನಾಗರತ್ನ ಅವರು ತಮ್ಮ ಬಾಲ್ಯ ಜೀವನವನ್ನು ದಿಲ್ಲಿಯಲ್ಲೇ ಕಳೆದಿದ್ದರು. ವಿಶೇಷ ಎಂದರೆ, ನಾಗರತ್ನ ಅವರನ್ನು ಅಂದು ಶಾಲೆಗೆ ಕರೆದುಕೊಂಡು ಹೋಗಿ ಬಿಟ್ಟು ಬರುತ್ತಿದ್ದ ವ್ಯಕ್ತಿ, ಇಂದು ಸುಪ್ರೀಂ ಕೋರ್ಟ್‌ನ ಹಿರಿಯ ಅಧಿಕಾರಿ..! ಕಳೆದ ವಾರ ಕರ್ನಾಟಕ ಹೈಕೋರ್ಟ್‌ನಿಂದ ಬೀಳ್ಕೊಡುಗೆ ಸ್ವೀಕರಿಸಿದ ಬಳಿಕ ತಮ್ಮ ನೆನಪಿನ ಬುತ್ತಿ ಬಿಚ್ಚಿಟ್ಟಿದ್ದ ನಾಗರತ್ನ ಅವರು, ದಿಲ್ಲಿಯಲ್ಲಿ ತಾವು ಕಳೆದ ಬಾಲ್ಯದ ನೆನಪು ಮಾಡಿಕೊಂಡಿದ್ದರು. ಕರ್ನಾಟಕದ ಮೂಲದ ಮೊದಲ ನ್ಯಾಯಮೂರ್ತಿಗಳಾಗಿರುವ ನಾಗರತ್ನ ಅವರು, ಕರ್ನಾಟಕ ಹೈಕೋರ್ಟ್‌ನಲ್ಲಿ ಬಹುಕಾಲ ಸೇವೆ ಸಲ್ಲಿಸಿದ ನ್ಯಾಯಾಧೀಶರಾಗಿಯೂ ಗುರ್ತಿಸಿಕೊಂಡಿದ್ದಾರೆ. ಕರ್ನಾಟಕ ಹೈಕೋರ್ಟ್‌ಗೆ ವಿದಾಯ ಹೇಳುವಾಗ ನಾಗರತ್ನ ಅವರು ಭಾವುಕರಾಗಿ ತಮ್ಮ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡಿದ್ದರು. ಸೋಫಿಯಾ ಹೈಸ್ಕೂಲ್‌ನ ಶಿಕ್ಷಕರು ತಮಗೆ ಹೇಳಿಕೊಟ್ಟ ಶಿಸ್ತಿನ ಪಾಠಗಳನ್ನು ನ್ಯಾಯಮೂರ್ತಿ ನಾಗರತ್ನ ಅವರು ನೆನಪು ಮಾಡಿಕೊಂಡಿದ್ದರು. ಅಷ್ಟೇ ಅಲ್ಲ, ದಿಲ್ಲಿಯ ಭಾರತೀಯ ವಿದ್ಯಾ ಭವನದಲ್ಲಿ ತಾವು ದೇಶದ ಸಾಂಸ್ಕೃತಿಕ ವಿವಿಧತೆಯನ್ನು ಕಂಡ ಬಗೆಯನ್ನು ವಿವರಿಸಿದರು. ದೇಶದ ಕಲೆ, ಸಂಸ್ಕೃತಿ, ಇತಿಹಾಸ ಹಾಗೂ ಭವ್ಯತೆ ವಿವರಿಸಿದ್ದ ನಾಗರತ್ನ ಅವರು, ತಾವು ಈ ದೇಶದ ಜನರಿಗೆ ಚಿರಋಣಿ ಎಂದಿದ್ದರು. ಅಚ್ಚರಿಯ ವಿಷಯವೆಂದರೆ, ದಿಲ್ಲಿಯ ಭಾರತೀಯ ವಿದ್ಯಾಭವನಕ್ಕೆ ನ್ಯಾಯಮೂರ್ತಿ ನಾಗರತ್ನ ಅವರನ್ನು ನೋಂದಣಿ ಮಾಡುವಲ್ಲಿ ಸುಪ್ರೀಂ ಕೋರ್ಟ್‌ನ ನೌಕರರೊಬ್ಬರು ಮುಖ್ಯ ಪಾತ್ರ ವಹಿಸಿದ್ದರು. ಅಷ್ಟೇ ಅಲ್ಲ, ನಾಗರತ್ನ ಅವರನ್ನು ಪ್ರತಿದಿನ ಅವರೇ ಶಾಲೆಗೆ ಕರೆದೊಯ್ದು, ಸಂಜೆ ವಾಪಸ್ ಕರೆತರುತ್ತಿದ್ದರಂತೆ. ಇದೀಗ ಅದೇ ವ್ಯಕ್ತಿ ಸುಪ್ರೀಂ ಕೋರ್ಟ್‌ನ ಹಿರಿಯ ರಿಜಿಸ್ಟ್ರಾರ್ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಾವು ಶಾಲೆಗೆ ಕರೆದೊಯ್ಯುತ್ತಿದ್ದ ಬಾಲಕಿಯೇ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆಗಲಿದ್ದಾರೆ..! ಅವರ ಕೈಕೆಳಗೆ ಕೆಲಸ ಮಾಡುವ ಸಾರ್ಥಕ ಭಾವ ಅವರ ಮನದಲ್ಲಿ ಇರಬಹುದೇ..! ಇದೀಗ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿರುವ ನಾಗರತ್ನ ಅವರು, ದೇಶದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ. 2027ರಲ್ಲಿ ಅವರು ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆಯಲಿದ್ದಾರೆ. ನ್ಯಾಯಮೂರ್ತಿ ನಾಗರತ್ನ ಅವರ ತಂದೆ ನ್ಯಾ. ವೆಂಕಟರಾಮಯ್ಯ ಅವರೂ 1989ರಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಆಗಿದ್ದರು. ನ್ಯಾಯಮೂರ್ತಿ ನಾಗರತ್ನ ಅವರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಆಗುವುದರೊಂದಿಗೆ ತಂದೆ-ಮಗಳು ಇಬ್ಬರೂ ಮುಖ್ಯ ನ್ಯಾಯಮೂರ್ತಿ ಆದ ದಾಖಲೆ ನಿರ್ಮಾಣವಾಗಲಿದೆ. ಜೊತೆಯಲ್ಲೇ ಈಗಾಗಲೇ ತಂದೆ-ಮಗಳು ಇಬ್ಬರೂ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಿದ ದಾಖಲೆ ಸೃಷ್ಟಿಯಾಗಿ ಹೋಗಿದೆ..!