ದೇಶದಲ್ಲಿ ಆತ್ಮಹತ್ಯೆ ಪ್ರಕರಣ ಗಣನೀಯ ಹೆಚ್ಚಳ; 2020ರಲ್ಲಿ ದಾಖಲೆಯ 1,53,052 ಮಂದಿ ಆತ್ಮಹತ್ಯೆಗೆ ಶರಣು

ಮೊದಲ ಐದು ರಾಜ್ಯಗಳ ಆತ್ಮಹತ್ಯೆ ಪಾಲು ಶೇ. 50.1 ಆಗಿದೆ. ಉಳಿದ ಶೇ. 49.9 ರಷ್ಟು ಆತ್ಮಹತ್ಯೆಗಳು 23 ರಾಜ್ಯಗಳಿಂದ ವರದಿಯಾಗಿವೆ. ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಉತ್ತರ ಪ್ರದೇಶವು ಈ ವಿಷಯದಲ್ಲಿ ಆತ್ಮಹತ್ಯೆಗಳ ಸಂಖ್ಯೆ ಕಡಿಮೆ ಇದೆ. ದೇಶದ ಒಟ್ಟು ಆತ್ಮಹತ್ಯೆ ಪ್ರಕರಣಗಳಲ್ಲಿ ಈ ರಾಜ್ಯದ ಪಾಲು ಕೇವಲ ಶೇ. 3.1ರಷ್ಟಿದೆ. ಕೇಂದ್ರಾಡಳಿತ ಪ್ರದೇಶಗಳ ಪೈಕಿ ದಿಲ್ಲಿ ಆತ್ಮಹತ್ಯೆಯ ಮುಂಚೂಣಿಯಲ್ಲಿದೆ. ಇಲ್ಲಿ 3,142 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂತರದ ಸ್ಥಾನದಲ್ಲಿ ಪುದುಚೇರಿ (408) ಇದೆ.

ದೇಶದಲ್ಲಿ ಆತ್ಮಹತ್ಯೆ ಪ್ರಕರಣ ಗಣನೀಯ ಹೆಚ್ಚಳ; 2020ರಲ್ಲಿ ದಾಖಲೆಯ 1,53,052 ಮಂದಿ ಆತ್ಮಹತ್ಯೆಗೆ ಶರಣು
Linkup
ಹೊಸದಿಲ್ಲಿ: ಸಾಲ ಬಾಧೆ, ಅನಾರೋಗ್ಯ, ಜೀವನ ಶೈಲಿಯ ಪರಿಣಾಮ ಜೀವ ಕಳೆದುಕೊಳ್ಳುವವರ ಸಂಖ್ಯೆ ದೇಶದಲ್ಲಿ ಹೆಚ್ಚಾಗುತ್ತಲೇ ಇದೆ. 2020 ರಲ್ಲಿ ದಾಖಲೆಯ 1,53,052 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ವಾರ್ಷಿಕ ವರದಿ ತಿಳಿಸಿದೆ. ಕೋವಿಡ್‌ ಸಾಂಕ್ರಾಮಿಕ ಬಾಧೆ ಹೆಚ್ಚಿದ್ದರಿಂದ ಕಳೆದ ವರ್ಷ ಜನ ಹೆಚ್ಚಿನ ಒತ್ತಡ ಅನುಭವಿಸಿದರು. ಆರ್ಥಿಕ, ಸಾಮಾಜಿಕ ಬಿಕ್ಕಟ್ಟುಗಳು ಉಲ್ಬಣಿಸಿದ್ದವು. 2019 ರಲ್ಲಿ 1,39,123 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, 2020ರಲ್ಲಿ ಈ ಸಂಖ್ಯೆ ಸುಮಾರು 20 ಸಾವಿರದಷ್ಟು ಹೆಚ್ಚಾಗಿದೆ. ಈ ಸಾಲಿನಲ್ಲಿ ಆತ್ಮಹತ್ಯೆ ದರ ಶೇ. 10.4 ರಿಂದ ಶೇ. 11.3 ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೆ 19,909 ಆತ್ಮಹತ್ಯೆ ಮಂದಿ ಮಾಡಿಕೊಂಡಿದ್ದಾರೆ. ತಮಿಳು ನಾಡಿನಲ್ಲಿ 16,883 ಮತ್ತು ಮಧ್ಯ ಪ್ರದೇಶದಲ್ಲಿ 14,578 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು ಕ್ರಮವಾಗಿ ಎರಡು ಮತ್ತು ಮೂರನೇ ಸಾಲಿನ ರಾಜ್ಯಗಳೆನಿಸಿವೆ. 2020 ರಲ್ಲಿ ಕರ್ನಾಟಕದಲ್ಲಿ 12,259 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು ದೇಶದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ನಡೆದ ಐದನೇ ರಾಜ್ಯ ಎನಿಸಿದೆ. ನಾಲ್ಕನೇ ಸ್ಥಾನದಲ್ಲಿರುವ ಪಶ್ಚಿಮ ಬಂಗಾಳದಲ್ಲಿ 13,103 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ಧಾರೆ. ಮೊದಲ ಐದು ರಾಜ್ಯಗಳ ಆತ್ಮಹತ್ಯೆ ಪಾಲು ಶೇ. 50.1 ಆಗಿದೆ. ಉಳಿದ ಶೇ. 49.9 ರಷ್ಟು ಆತ್ಮಹತ್ಯೆಗಳು 23 ರಾಜ್ಯಗಳಿಂದ ವರದಿಯಾಗಿವೆ. ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಉತ್ತರ ಪ್ರದೇಶವು ಈ ವಿಷಯದಲ್ಲಿ ಆತ್ಮಹತ್ಯೆಗಳ ಸಂಖ್ಯೆ ಕಡಿಮೆ ಇದೆ. ದೇಶದ ಒಟ್ಟು ಆತ್ಮಹತ್ಯೆ ಪ್ರಕರಣಗಳಲ್ಲಿ ಈ ರಾಜ್ಯದ ಪಾಲು ಕೇವಲ ಶೇ. 3.1ರಷ್ಟಿದೆ. ಕೇಂದ್ರಾಡಳಿತ ಪ್ರದೇಶಗಳ ಪೈಕಿ ದಿಲ್ಲಿ ಆತ್ಮಹತ್ಯೆಯ ಮುಂಚೂಣಿಯಲ್ಲಿದೆ. ಇಲ್ಲಿ 3,142 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂತರದ ಸ್ಥಾನದಲ್ಲಿ ಪುದುಚೇರಿ (408) ಇದೆ. ದೇಶದಲ್ಲಿ ಪ್ರತಿದಿನ ಸಾವಿರಾರು ಮಂದಿ ಬೇರೆ ಬೇರೆ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ದಿನ ನಿತ್ಯ ಇದರ ಸಂಖ್ಯೆ ಏರುತ್ತಲೇ ಇದೆ. ಹಣಕಾಸಿನ ಸಮಸ್ಯೆ, ಲೈಂಗಿಕ ದೌರ್ಜನ್ಯ, ಬೆದರಿಕೆಗಳು, ಆಹಾರದ ಸಮಸ್ಯೆ, ಅನಾರೋಗ್ಯ ಮುಂತಾದ ಕಾರಣಗಳಿಗಾಗಿ ಪ್ರತಿ ನಿತ್ಯ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.