ಕೇರಳ ಸೋಲಾರ್‌ ಹಗರಣದಲ್ಲಿ ಸರಿತಾ ನಾಯರ್‌ ದೋಷಿ, ಆರು ವರ್ಷ ಜೈಲು ಶಿಕ್ಷೆ

ಕೇರಳ ಸೋಲಾರ್‌ ಹಗರಣ ಎಂದೇ ಕುಖ್ಯಾತವಾದ ಸೌರ ಫಲಕ ಹಗರಣದಲ್ಲಿ, ದಾಖಲೆಗಳಿಗೆ ನಕಲಿ ಸಹಿ, ವಂಚನೆ, ವಿಶ್ವಾಸಘಾತದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಸರಿತಾ ನಾಯರ್‌ಗೆ ಶಿಕ್ಷೆ ಘೋಷಿಸಲಾಗಿದೆ.

ಕೇರಳ ಸೋಲಾರ್‌ ಹಗರಣದಲ್ಲಿ ಸರಿತಾ ನಾಯರ್‌ ದೋಷಿ, ಆರು ವರ್ಷ ಜೈಲು ಶಿಕ್ಷೆ
Linkup
ಕೋಳಿಕ್ಕೋಡ್‌: ಕೇರಳ ಎಂದೇ ಕುಖ್ಯಾತವಾದ ಸೌರ ಫಲಕ ಹಗರಣದಲ್ಲಿ ದೋಷಿ ಎಂದು ಪರಿಗಣಿಸಿರುವ ಮ್ಯಾಜಿಸ್ಪ್ರೇಟ್‌ ಕೋರ್ಟ್‌, ಆರು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಜತೆಗೆ 40 ಸಾವಿರ ರೂ. ದಂಡ ಕೂಡ ಕಟ್ಟಲೂ ಆದೇಶಿಸಿದೆ. ದಾಖಲೆಗಳಿಗೆ ನಕಲಿ ಸಹಿ, ವಂಚನೆ, ವಿಶ್ವಾಸಘಾತದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಸರಿತಾಗೆ ಶಿಕ್ಷೆ ನೀಡಲಾಗಿದೆ. ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಸರಿತಾ ನಾಯರ್‌ ಪತಿ ಬಿಜು ರಾಧಾಕೃಷ್ಣನ್‌ ಸದ್ಯ ಕೊರೊನಾ ಸೋಂಕಿನಿಂದಾಗಿ ಕ್ವಾರಂಟೈನ್‌ನಲ್ಲಿದ್ದಾರೆ. ಹಾಗಾಗಿ ಅವರ ಶಿಕ್ಷೆ ಪ್ರಮಾಣವನ್ನು ಬಳಿಕ ಪ್ರಕಟಿಸುವುದಾಗಿ ಕೋರ್ಟ್‌ ಹೇಳಿದೆ. 2013ರಲ್ಲಿ ಬೆಳಕಿಗೆ ಬಂದ ಈ ಹಗರಣದಿಂದಾಗಿ ಆಗಿನ ಓಮನ್‌ ಚಾಂಡಿ ನೇತೃತ್ವದ ಸರಕಾರ ಅಧಿಕಾರ ಕಳೆದುಕೊಂಡಿತ್ತು. ಟೀಮ್‌ ಸೋಲಾರ್‌ ಹೆಸರಿನಲ್ಲಿ ನಕಲಿ ಸೌರಶಕ್ತಿ ಕಂಪನಿಯೊಂದನ್ನು ಸ್ಥಾಪಿಸಿದ್ದ ಸರಿತಾ ನಾಯರ್‌ ಮತ್ತು ಆಕೆಯ ಪತಿ, ಹೂಡಿಕೆ ವಿಚಾರವಾಗಿ ಅನೇಕರಿಗೆ ಕೋಟ್ಯಂತರ ರೂಪಾಯಿ ಮೋಸ ಮಾಡಿದ್ದರು. ಸಿಎಂ ಕಚೇರಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದ ಸರಿತಾ, ಸರಕಾರದ ಪ್ರಭಾವ ಬಳಸಿ ಹೂಡಿಕೆದಾರರನ್ನು ಸೆಳೆದು ವಂಚಿಸಿದ್ದಾರೆ ಎಂದು ದೂರಲಾಗಿತ್ತು. ಕೆಲವು ಕಾಂಗ್ರೆಸ್‌ ನಾಯಕರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸರಿತಾ ನಂತರ ದೂರಿದ್ದರು. ಇದರು ಕೇರಳದಲ್ಲಿ ರಾಜಕೀಯ ಕೋಲಾಹಲವನ್ನೇ ಎಬ್ಬಿಸಿತ್ತು. ಇದೀಗ ಹಲವು ವರ್ಷಗಳ ಬಳಿಕ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಿಗೆ ಶಿಕ್ಷೆ ಘೋಷಣೆಯಾಗಿದೆ.