ಕರ್ನಾಟಕದ ದಕ್ಷ ಐಪಿಎಸ್‌ ಅಧಿಕಾರಿ ದಿವಂಗತ ಡಾ.ಕೆ. ಮಧುಕರ್‌ ಶೆಟ್ಟಿಗೆ ವಿಶೇಷ ಗೌರವ!

ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ರಾಷ್ಟ್ರೀಯ ಪೊಲೀಸ್‌ ಅಕಾಡೆಮಿಯ ಹಾಲ್‌ ನಂ. 106ಕ್ಕೆ ಕರ್ನಾಟಕದ ಐಪಿಎಸ್‌ ಅಧಿಕಾರಿ ದಿವಂಗತ ಡಾ.ಕೆ. ಮಧುಕರ್‌ ಶೆಟ್ಟಿ ಅವರ ಹೆಸರನ್ನು ಇಟ್ಟು ಗೌರವ ಸೂಚಿಸಲು ನಿರ್ಧರಿಸಲಾಗಿದೆ ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ. ​​ಮಧುಕರ್‌ ಶೆಟ್ಟಿ ಅವರ ಸೇವಾ ಮನೋಭಾವ, ವೃತ್ತಿಪರತೆ ಹಾಗೂ ಬದ್ಧತೆಗೆ ಈ ಮೂಲಕ ಗೌರವ ಸೂಚಿಸಲಾಗಿದೆ.

ಕರ್ನಾಟಕದ ದಕ್ಷ ಐಪಿಎಸ್‌ ಅಧಿಕಾರಿ ದಿವಂಗತ ಡಾ.ಕೆ. ಮಧುಕರ್‌ ಶೆಟ್ಟಿಗೆ ವಿಶೇಷ ಗೌರವ!
Linkup
ಹೈದರಾಬಾದ್‌: ಇಲ್ಲಿನ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ರಾಷ್ಟ್ರೀಯ ಪೊಲೀಸ್‌ ಅಕಾಡೆಮಿಯ ಹಾಲ್‌ ನಂ. 106ಕ್ಕೆ ಕರ್ನಾಟಕದ ಐಪಿಎಸ್‌ ಅಧಿಕಾರಿ ದಿವಂಗತ ಡಾ.ಕೆ. ಅವರ ಹೆಸರನ್ನು ಇಟ್ಟು ಗೌರವ ಸೂಚಿಸಲು ನಿರ್ಧರಿಸಲಾಗಿದೆ ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ. ಮಧುಕರ್‌ ಶೆಟ್ಟಿ ಅವರ ಸೇವಾ ಮನೋಭಾವ, ವೃತ್ತಿಪರತೆ ಹಾಗೂ ಬದ್ಧತೆಗೆ ಈ ಮೂಲಕ ಗೌರವ ಸೂಚಿಸಲಾಗಿದೆ. ಅವರು ಐಪಿಎಸ್‌ ಪ್ರೊಬೆಷನರಿಗಳಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಉಡುಪಿ ಮೂಲದ ಶೆಟ್ಟಿ ಅವರು 1999ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿ. ಬೆಂಗಳೂರು ಗ್ರಾಮಾಂತರ, ಚಾಮರಾಜನಗರ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿಎಸ್‌ಪಿಯಾಗಿ ಕೆಲಸ ಮಾಡಿದ್ದರು. ಐಜಿಪಿಯಾಗಿ ಕೆಲ ಕಾಲ ಪೊಲೀಸ್‌ ನೇಮಕಾತಿ ವಿಭಾಗದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ರಾಷ್ಟ್ರೀಯ ಪೊಲೀಸ್‌ ಅಕಾಡೆಮಿಯಲ್ಲಿಉಪ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ 2018ರ ಡಿಸೆಂಬರ್‌ನಲ್ಲಿಅನಾರೋಗ್ಯಕ್ಕೆ ತುತ್ತಾಗಿ ಅದೇ ತಿಂಗಳ 25ರಂದು ಹೈದರಾಬಾದ್‌ನ ಕಾಂಟಿನೆಂಟಲ್‌ ಆಸ್ಪತ್ರೆಯಲ್ಲಿ ಮೃತಪಟ್ಟರು. ಅವರ ಸಾವಿಗೆ ಹೆಚ್‌1ಎನ್‌1 ಕಾರಣ ಎಂದು ವೈದ್ಯರು ಹೇಳಿದ್ದರು. ಆದರೆ ಸಾವಿನ ಸುತ್ತ ಅನುಮಾನಗಳು ಹುಟ್ಟಿಕೊಂಡಿದ್ದವು. ಭ್ರಷ್ಟರ ವಿರುದ್ಧ ನಡುಕ ಹುಟ್ಟಿಸಿದ್ದ ಶೆಟ್ಟಿ ಅವರು 2011ರಲ್ಲಿ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್‌ ಹೆಗಡೆ ಕಾರ‍್ಯ ವೈಖರಿ ವಿಚಾರದಲ್ಲಿ ಅಸಮಾಧಾನ ಹೊರಹಾಕಿದ್ದು ಸಾಕಷ್ಟು ಸದ್ದು ಮಾಡಿತ್ತು.