ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ಧಾಣದಲ್ಲಿ 5 ಗನ್‌ ಪತ್ತೆ: ಪರಿಶೀಲನೆ ನಡೆಸಿದಾಗ ಮುಂದೇನಾಯ್ತು?

ಐದು ಗನ್‌ಗಳು ಸಿಗುವ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ಟರ್ಮಿನಲ್‌ನ ಸಿಬ್ಬಂದಿಗಳನ್ನು ಆತಂಕಕ್ಕೀಡು ಮಾಡಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಇದರ ತಪಾಸಣೆ ನಡೆಸಿದರು ಬಳಿಕ ಇದರ ನೈಜ ಸಂಗತಿ ತಿಳಿದು ನಿಟ್ಟುಸಿರುಬಿಟ್ಟಿದ್ದಾರೆ. ಹಾಗಾದರೆ ಅದೇನು ಆಗಿತ್ತು.

ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ಧಾಣದಲ್ಲಿ 5 ಗನ್‌ ಪತ್ತೆ: ಪರಿಶೀಲನೆ ನಡೆಸಿದಾಗ ಮುಂದೇನಾಯ್ತು?
Linkup
ಬೆಂಗಳೂರು: ವಿದೇಶದಿಂದ ಬಂದಿದ್ದ ಗನ್‌ಗಳಿದ್ದ ಪಾರ್ಸೆಲ್‌ವೊಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ಟರ್ಮಿನಲ್‌ನ ಸಿಬ್ಬಂದಿಗಳನ್ನು ಆತಂಕಕ್ಕೀಡು ಮಾಡಿತ್ತು. ಪಾರ್ಸೆಲ್‌ ಅನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿ 'ಡಮ್ಮಿ ಗನ್‌'ಗಳೆಂದು ತಿಳಿದ ಮೇಲೆ ಸಿಬ್ಬಂದಿ ನಿಟ್ಟುಸಿರು ಬಿಟ್ಟರು. ಇಸ್ತಾಂಬುಲ್‌ನಿಂದ ಕೆಐಎ ಕಾರ್ಗೋ ಟರ್ಮಿನಲ್‌ಗೆ ಗುರುವಾರ ಗನ್‌ಗಳಿದ್ದ ಪಾರ್ಸಲ್‌ವೊಂದು ಬಂದಿತ್ತು. ಬೆಂಗಳೂರಿನ ಕೊರಿಯರ್‌ ಸೆಂಟರ್‌ವೊಂದಕ್ಕೆ ಈ ಗನ್‌ಗಳನ್ನು ಕಳುಹಿಸಿಕೊಡಲಾಗಿತ್ತು. ಗನ್‌ಗಳನ್ನು ವರ್ಗಾವಣೆ ಮಾಡುವ ವೇಳೆ, ಅನುಮಾನಗೊಂಡ ಸಿಬ್ಬಂದಿ ಪರಿಶೀಲನೆಗೆ ಸೂಚಿಸಿದರು. ಪಾರ್ಸೆಲ್‌ ಬಿಚ್ಚಿ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಡಮ್ಮಿ ಗನ್‌ಗಳೆಂಬುದು ತಿಳಿಯಿತು. ಆದರೂ, ಕೆಐಎ ತನಿಖಾಧಿಕಾರಿಗಳು ಈ ಪಾರ್ಸೆಲ್‌ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.