ಬನಶಂಕರಿ ದೇವಸ್ಥಾನದಲ್ಲಿ 53.64 ಲಕ್ಷ ಹಣ ಸಂಗ್ರಹ; ಹುಂಡಿಯಲ್ಲಿತ್ತು 63 ಗ್ರಾಂ ಚಿನ್ನ, 300 ಗ್ರಾಂ ಬೆಳ್ಳಿ!

ಈ ಹಿಂದೆ ಮಾ.29ರಂದು ಹುಂಡಿಗಳನ್ನು ತೆಗೆಯಲಾಗಿತ್ತು. ಆಗ 21.31 ಲಕ್ಷ ರೂ. ನಗದು ಸಂಗ್ರಹವಾಗಿತ್ತು. ತದನಂತರ ಸುಮಾರು ಎರಡು ತಿಂಗಳು ಲಾಕ್‌ಡೌನ್‌ ಇತ್ತು. ಆದರೆ, ಕಳೆದ ತಿಂಗಳ ಆಷಾಢ ಮಾಸದಲ್ಲಿ ದೇವಸ್ಥಾನಕ್ಕೆ ಹೆಚ್ಚು ಭಕ್ತರು ಆಗಮಿಸಿದ್ದರು. ಹೀಗಾಗಿ, ಏಪ್ರಿಲ್‌ನಿಂದ ಆ.26ರವರೆಗೆ ಸಂಗ್ರಹವಾಗಿದ್ದ ನಗದು, ಆಭರಣಗಳನ್ನು ತೆಗೆಯಲಾಗಿದೆ ಎಂದು ಅವರು ತಿಳಿಸಿದರು.

ಬನಶಂಕರಿ ದೇವಸ್ಥಾನದಲ್ಲಿ 53.64 ಲಕ್ಷ ಹಣ ಸಂಗ್ರಹ; ಹುಂಡಿಯಲ್ಲಿತ್ತು 63 ಗ್ರಾಂ ಚಿನ್ನ, 300 ಗ್ರಾಂ ಬೆಳ್ಳಿ!
Linkup
ಬೆಂಗಳೂರು: ಬನಶಂಕರಿ ದೇವಸ್ಥಾನಕ್ಕೆ ಕೋವಿಡ್‌ ನಡುವೆಯೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಹುಂಡಿಗಳು ತುಂಬಿದ್ದವು. ಹೀಗಾಗಿ, ಗುರುವಾರ ಹುಂಡಿಗಳನ್ನು ತೆಗೆಯಲಾಗಿದ್ದು, ಕಳೆದ ನಾಲ್ಕೂವರೆ ತಿಂಗಳಲ್ಲಿ ಬರೋಬ್ಬರಿ 53.64 ಲಕ್ಷಕ್ಕೂ ಹೆಚ್ಚು ನಗದು ಸಂಗ್ರಹವಾಗಿದೆ. ಅಲ್ಲದೆ, 63 ಗ್ರಾಂಗೂ ಅಧಿಕ ಚಿನ್ನ ಸಂಗ್ರಹವಾಗಿದ್ದು (2,27,950 ರೂ.), 300 ಗ್ರಾಂ ಬೆಳ್ಳಿ ಕೂಡ ಸಂಗ್ರಹವಾಗಿದೆ (12,240 ರೂ.). ಈ ಪೈಕಿ ಚಿನ್ನದ 24 ಮಾಂಗಲ್ಯಗಳು, 2 ಬಳೆಗಳು, 3 ಮೂಗುತಿಗಳು, ಎರಡು ಓಲೆ, ಇತರೆ ಚಿನ್ನದ ಆಭರಣಗಳನ್ನು ಭಕ್ತರು ದೇವಿಗೆ ಕಾಣಿಕೆಯಾಗಿ ನೀಡಿದ್ದಾರೆ. ಬೆಳ್ಳಿಯ 4 ತೊಟ್ಟಿಲುಗಳು, 2 ಗೆಜ್ಜೆಗಳು ಹುಂಡಿಯಲ್ಲಿ ಸಿಕ್ಕಿವೆ ಎಂದು ಬನಶಂಕರಿ ದೇವಸ್ಥಾನದ ಆಡಳಿತಾಧಿಕಾರಿ ಲಕ್ಷ್ಮಿ ತಿಳಿಸಿದರು. ಈ ಹಿಂದೆ ಮಾ.29ರಂದು ಹುಂಡಿಗಳನ್ನು ತೆಗೆಯಲಾಗಿತ್ತು. ಆಗ 21.31 ಲಕ್ಷ ರೂ. ನಗದು ಸಂಗ್ರಹವಾಗಿತ್ತು. ತದನಂತರ ಸುಮಾರು ಎರಡು ತಿಂಗಳು ಲಾಕ್‌ಡೌನ್‌ ಇತ್ತು. ಆದರೆ, ಕಳೆದ ತಿಂಗಳ ಆಷಾಢ ಮಾಸದಲ್ಲಿ ದೇವಸ್ಥಾನಕ್ಕೆ ಹೆಚ್ಚು ಭಕ್ತರು ಆಗಮಿಸಿದ್ದರು. ಹೀಗಾಗಿ, ಏಪ್ರಿಲ್‌ನಿಂದ ಆ.26ರವರೆಗೆ ಸಂಗ್ರಹವಾಗಿದ್ದ ನಗದು, ಆಭರಣಗಳನ್ನು ತೆಗೆಯಲಾಗಿದೆ ಎಂದು ಅವರು ತಿಳಿಸಿದರು. ಭಕ್ತರಿಗೆ ಅಮ್ಮನವರ ಸೀರೆಗಳ ಮಾರಾಟ:ಬನಶಂಕರಿ ಅಮ್ಮನಿಗೆ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಸೀರೆಗಳನ್ನು ನೀಡಿದ್ದಾರೆ. ಇವುಗಳನ್ನು ಶೇ.75 ರ ರಿಯಾಯಿತಿ ದರದಲ್ಲಿ ದೇವಾಲಯದ ಆಡಳಿತ ಮಂಡಳಿಯು ಮಾರಾಟ ಮಾಡುತ್ತಿದೆ. ಪ್ರತಿ ಶುಕ್ರವಾರ, ಮಂಗಳವಾರ ಹರಾಜು ಮೂಲಕ ಮಾರಾಟ ಮಾಡಿದರೆ, ಉಳಿದ ದಿನಗಳಲ್ಲಿ ಬೆಳಗ್ಗೆ 10.30 ರಿಂದ ಸಂಜೆ 5.30ರವರೆಗೆ ಪ್ರವೇಶ ದ್ವಾರದಲ್ಲಿ ತೆರೆದಿರುವ ಕೌಂಟರ್‌ನಲ್ಲಿ ಮಾರಾಟ ಮಾಡಲಾಗುವುದು. ಆಸಕ್ತ ಭಕ್ತರು ಖರೀದಿಸಬಹುದು.