ಬೆಂಗಳೂರು: ದುಬಾರಿ ಬೈಕ್‌ ಕಳವು ಮಾಡುತ್ತಿದ್ದ ಮೆಕ್ಯಾನಿಕ್‌ ಗ್ಯಾಂಗ್‌ ಸೆರೆ

ಕಾಲಿನಲ್ಲಿ ಒದ್ದು, ಹ್ಯಾಂಡಲ್‌ ಮುರಿದು ಸ್ವಲ್ಪ ದೂರ ತಳ್ಳಿಕೊಂಡು ಹೋಗಿ ಬಳಿಕ ಸ್ಟಾರ್ಟ್‌ ಮಾಡಿಕೊಂಡು ರಾಜಸ್ಥಾನದವರೆಗೂ ಚಲಾಯಿಸಿಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು

ಬೆಂಗಳೂರು: ದುಬಾರಿ ಬೈಕ್‌ ಕಳವು ಮಾಡುತ್ತಿದ್ದ ಮೆಕ್ಯಾನಿಕ್‌ ಗ್ಯಾಂಗ್‌ ಸೆರೆ
Linkup
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದುಬಾರಿ ಬೈಕ್‌ಗಳನ್ನು ಕಳವು ಮಾಡುತ್ತಿದ್ದ ರಾಜಸ್ಥಾನ ಮೂಲದ ಗ್ಯಾಂಗ್‌ ಬಂಧಿಸಿರುವ ಪಶ್ಚಿಮ ವಿಭಾಗದ ಪೊಲೀಸರು, 32.70 ಲಕ್ಷ ರೂ. ಮೌಲ್ಯದ 26 ದುಬಾರಿ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜಸ್ಥಾನ ಮೂಲದ ವಿಕಾಸ್‌ ಕುಮಾರ್‌, ಧವಲ್‌ ದಾಸ್‌ ಹಾಗೂ ದಶರಥ್‌ ಬಂಧಿತ ಆರೋಪಿಗಳು. ಆರೋಪಿಗಳು ಬೈಕ್‌ಗಳನ್ನು ಕಾಲಿನಲ್ಲಿ ಒದ್ದು, ಹ್ಯಾಂಡಲ್‌ ಮುರಿದು ಸ್ವಲ್ಪ ದೂರ ತಳ್ಳಿಕೊಂಡು ಹೋಗಿ ಬಳಿಕ ಸ್ಟಾರ್ಟ್‌ ಮಾಡಿಕೊಂಡು ರಾಜಸ್ಥಾನದವರೆಗೂ ಚಲಾಯಿಸಿಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು ಎಂದು ಡಿಸಿಪಿ ಡಾ.ಸಂಜೀವ್‌ ಪಾಟೀಲ್‌ ತಿಳಿಸಿದ್ದಾರೆ. ಬಂಧಿತ ಮೂವರು ಆರೋಪಿಗಳು ಮೆಕ್ಯಾನಿಕ್‌ಗಳಾಗಿದ್ದು, ನಗರದ ಹಾರ್ಡ್‌ವೇರ್‌ ಅಂಗಡಿಗಳಲ್ಲಿಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ರಾತ್ರಿ ವೇಳೆ ನಿರ್ಜನ ಪ್ರದೇಶದಲ್ಲಿ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ, ನಂತರ ಒಎಲ್‌ಎಕ್ಸ್‌ನಲ್ಲಿಮಾರಾಟಕ್ಕಿರುವ ದ್ವಿಚಕ್ರ ವಾಹನಗಳ ನೋಂದಣಿ ಸಂಖ್ಯೆ ಬಳಸಿಕೊಂಡು ಕಳವು ಮಾಡಿದ ವಾಹನಗಳನ್ನು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. 50 ಸಾವಿರ ರೂ.ಗಿಂತ ಕಡಿಮೆ ಬೆಲೆಯ ವಾಹನಗಳನ್ನು ನಗರದಲ್ಲಿಮಾರಾಟ ಮಾಡಿದರೆ, ದುಬಾರಿ ಬೆಲೆಯ ವಾಹನಗಳನ್ನು ರಾಜಸ್ಥಾನದಲ್ಲಿಮಾರಾಟ ಮಾಡುತ್ತಿದ್ದರು. ಆರೋಪಿಗಳು ಫೆ.28ರ ರಾತ್ರಿ ಸುಂಕದಕಟ್ಟೆಯ ಬೇಕಧಿರಿಯೊಂದರ ಮುಂದೆ ನಿಲ್ಲಿಸಿದ್ದ ಹೋಂಡಾ ಆ್ಯಕ್ಟಿವಾ ಸ್ಕೂಟರ್‌ ಕಳವು ಮಾಡಿದ್ದ ಬಗ್ಗೆ ದೂರು ದಾಖಲಾಗಿತ್ತು. ಈ ವೇಳೆ ಇನ್ಸ್‌ಪೆಕ್ಟರ್‌ ಪ್ರಶಾಂತ್‌ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.