ಬೆಂಗಳೂರು: 24 ನವೋದ್ಯಮಿಗಳಿಗೆ ಸ್ಟಾರ್‌ ಸ್ಟಾರ್ಟಪ್‌ ಪ್ರಶಸ್ತಿ ಪ್ರದಾನ

ರಾಮಯ್ಯ ಸಮೂಹ ಶಿಕ್ಷಣ ಸಂಸ್ಥೆ ರೂಪಿಸಿರುವ ವಿಕಸನ ಕೇಂದ್ರದ ಮೂಲಕ, ಭವಿಷ್ಯದ 24 ನವೋದ್ಯಮಿಗಳಿಗೆ ಸ್ಟಾರ್‌ ಸ್ಟಾರ್ಟ್‌ ಅಪ್‌ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆವಿಷ್ಕಾರಗಳು ಪರಿಹಾರ ನೀಡುವಂತಿರಬೇಕು ಎಂದು ಡಾ.ಎಂ.ಆರ್‌.ಜಯರಾಂ ಅಭಿಪ್ರಾಯಪಟ್ಟರು.

ಬೆಂಗಳೂರು: 24 ನವೋದ್ಯಮಿಗಳಿಗೆ ಸ್ಟಾರ್‌ ಸ್ಟಾರ್ಟಪ್‌ ಪ್ರಶಸ್ತಿ ಪ್ರದಾನ
Linkup
ಬೆಂಗಳೂರು: ಸಮಾಜದಲ್ಲಿ ಹೊಸ ಸಮಸ್ಯೆಗಳು ಉದ್ಭವಿಸುತ್ತಿದ್ದು, ಅವುಗಳಿಗೆ ನವೋದ್ಯಮಿಗಳ ಆವಿಷ್ಕಾರಗಳು ಪರಿಹಾರ ನೀಡುವಂತಿರಬೇಕು ಎಂದು ಗೋಕುಲಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಆರ್‌.ಜಯರಾಂ ಹೇಳಿದರು. ರಾಮಯ್ಯ ಸಮೂಹ ಶಿಕ್ಷಣ ಸಂಸ್ಥೆ ರೂಪಿಸಿರುವ ವಿಕಸನ ಕೇಂದ್ರದ ಮೂಲಕ, ಭವಿಷ್ಯದ 24 ನವೋದ್ಯಮಿಗಳಿಗೆ ಸ್ಟಾರ್‌ ಸ್ಟಾರ್ಟ್‌ ಅಪ್‌ ಪ್ರಶಸ್ತಿ ನೀಡಿ ಗೌರವಿಸಿದರು. ನಂತರ ಮಾತನಾಡಿದ ಅವರು, ದೇಶದಲ್ಲಿ ಪ್ರತಿ ನಿತ್ಯ ಸಾಕಷ್ಟು ಸಮಸ್ಯೆಗಳು ಉದ್ಭವಿಸುತ್ತಿವೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆವಿಷ್ಕಾರಗಳು ನಡೆಯಬೇಕಿದೆ ಎಂದರು. ನಾವು ಸಂಶೋಧನೆಯಲ್ಲಿ ಹಿಂದೆ ಉಳಿದಿದ್ದೇವೆ. ಬೇರೆ ದೇಶಗಳು ಈ ವಿಚಾರದಲ್ಲಿ ಸಾಕಷ್ಟು ಮುಂದೆ ಇದ್ದು, ಇನ್ನು ಮುಂದೆ ಆದರೂ ನಾವು ಎಚ್ಚೆತ್ತುಕೊಂಡು ನವೋದ್ಯಮಕ್ಕೆ ಪ್ರೋತ್ಸಾಹ ನೀಡುವಂತಾಗಬೇಕು. ರಾಜ್ಯ ಸರಕಾರ ತಾರತಮ್ಯ ಮಾಡದೆ, ಎಲ್ಲ ಕಾಲೇಜುಗಳಲ್ಲಿರುವ ವಿದ್ಯಾರ್ಥಿಗಳಿಗೆ ಒಂದೇ ರೀತಿಯ ಪ್ರೋತ್ಸಾಹ ನೀಡಬೇಕೆಂದರು. ನಮ್ಮ ಕಾಲೇಜಿನಲ್ಲಿ ನಾವು ಪ್ರಾಯೋಗಿಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದ್ದೇವೆ. ಜಾಗತಿಕ ಮಟ್ಟದಲ್ಲಿ ಸಂಪರ್ಕ ಸಾಧಿಸಿದ್ದೇವೆ. ಹೊಸ ಆಲೋಚನೆ ಇರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ, ಮಾರ್ಗದರ್ಶನ ನೀಡುತ್ತಿದ್ದೇವೆ. ಇದೇ ರೀತಿಯಲ್ಲಿ ಸರಕಾರ ಕೂಡ ಎಲ್ಲಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಮಾರ್ಗದರ್ಶನ ನೀಡಬೇಕೆಂದರು. ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯದ ಎಂ.ಆರ್‌.ಸೀತಾರಾಂ, '' ಸ್ಟಾರ್‌ ಸ್ಟಾರ್ಟ್‌ ಅಪ್‌ ಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. 150ಕ್ಕೂ ಹೆಚ್ಚಿನ ಅರ್ಜಿಗಳು ಬಂದಿದ್ದವು. ಈ ಪೈಕಿ 24 ಅರ್ಜಿಗಳನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡುತ್ತಿದ್ದೇವೆ. ಈ ಎಲ್ಲರಿಗೂ ತಮ್ಮ ಯೋಜನೆಗಳನ್ನು ಅಭಿವೃದ್ಧಿಗೊಳಿಸಲು ಅವಶ್ಯವಾದ ಆರ್ಥಿಕ ಸಹಾಯ ಮತ್ತು ಮಾರ್ಗದರ್ಶನವನ್ನು ನಮ್ಮ ವಿಕಸನ ಕೇಂದ್ರ ನೀಡಲಿದೆ'' ಎಂದರು. ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯದ ಎಂ.ಆರ್‌.ರಾಮಯ್ಯ, ವಿಕಸನ ಕೇಂದ್ರದ ಸಲಹೆಗಾರ ಸಮರ್ಥ ರಾಘವ ನಾಗಭೂಷಣ, ಸಿಇಒ ಮುರಳಿಕೃಷ್ಣ, ಗೋಪಾಲಕೃಷ್ಣನ್‌ ಇತರರು ಇದ್ದರು.