ಬಂಗಾಳದಲ್ಲಿ ಮಾನವ ಹಕ್ಕುಗಳ ಆಯೋಗದ ತಂಡದ ಮೇಲೆಯೇ ಹಲ್ಲೆ?

ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೋತ್ತರ ಹಿಂಸಾಚಾರದ ಕುರಿತು ತನಿಖೆ ನಡೆಸಲು ಬಂದಿದ್ದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಅಧಿಕಾರಿಗಳ ಮೇಲೆಯೇ ಮಂಗಳವಾರ ದಾಳಿ ನಡೆದಿದೆ ಎಂದು ವರದಿಯಾಗಿದೆ.

ಬಂಗಾಳದಲ್ಲಿ ಮಾನವ ಹಕ್ಕುಗಳ ಆಯೋಗದ ತಂಡದ ಮೇಲೆಯೇ ಹಲ್ಲೆ?
Linkup
ಕೊಲ್ಕೊತಾ: ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೋತ್ತರ ಹಿಂಸಾಚಾರದ ಘಟನೆಗಳ ಕುರಿತು ತನಿಖೆ ನಡೆಸಲು ಬಂದಿದ್ದ () ಅಧಿಕಾರಿಗಳ ಮೇಲೆಯೇ ಮಂಗಳವಾರ ದಾಳಿ ನಡೆದಿದೆ. ಚುನಾವಣೋತ್ತರ ಹಿಂಸಾಚಾರದ ವೇಳೆ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಜನರನ್ನು ಬಲವಂತವಾಗಿ ಬೇರೆಡೆ ಸ್ಥಳಾಂತರಿಸಲಾಗಿದೆ. ಹಲ್ಲೆ ನಡೆಸಿದ್ದಲ್ಲದೆ, ವ್ಯಾಪಾರ ಸ್ಥಳಗಳಿಂದ ಹಣ ಲೂಟಿ ಮಾಡಲಾಗಿದೆ. ಈ ಕುರಿತು ತನಿಖೆಯಾಗಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಎನ್‌ಎಚ್‌ಆರ್‌ಸಿಗೆ ಕೋಲ್ಕೊತಾ ಹೈಕೋರ್ಟ್‌ ನಿರ್ದೇಶಿಸಿತ್ತು. ಕೋರ್ಟ್‌ ಸೂಚನೆಯಂತೆ ತನಿಖೆಗೆ ಆಗಮಿಸಿದ ಎನ್‌ಎಚ್‌ಆರ್‌ಸಿ ತಂಡದ ಮೇಲೆಯೇ ಗೂಂಡಾಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎನ್‌ಎಚ್‌ಆರ್‌ಸಿ ಸದಸ್ಯ ರಾಜೀವ್‌ ಜೈನ್‌ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದು, ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷ ಆತಿಫ್‌ ರಶೀದ್‌ ಸಹ ತಂಡದಲ್ಲಿದ್ದಾರೆ. ಇವರ ಮೇಲೆಯೇ ಬಂಗಾಳದ ಜಾಧವ್‌ಪುರದಲ್ಲಿ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ಈಗಾಗಲೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಹಿಂಸಾಚಾರ ತಾಂಡವವಾಡುತ್ತಿದೆ ಎಂದು ಮಮತಾ ಬ್ಯಾನರ್ಜಿ ಸರಕಾರದ ವಿರುದ್ಧ ಟೀಕೆಗಳು ಕೇಳಿಬಂದಿವೆ. ಎನ್‌ಎಚ್‌ಆರ್‌ಸಿ ತಂಡದ ಮೇಲೆ ಹಲ್ಲೆನಡೆದಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಡೊಂಪಾರದಲ್ಲಿ ಮದ್ಯಪಾನದ ಮತ್ತಿನಲ್ಲಿ ಕೆಲವರು ಎನ್‌ಎಚ್‌ಆರ್‌ಸಿ ವಿರುದ್ಧ ಘೋಷಣೆ ಕೂಗಿ, ಹಲ್ಲೆಗೆ ಯತ್ನಿಸಿದ್ದರು. ಆದರೆ, ಇದುವರೆಗೂ ಪ್ರಕರಣ ದಾಖಲಿಸಿಲ್ಲ. ಪೊಲೀಸರು ಎನ್‌ಎಚ್‌ಆರ್‌ಸಿ ತಂಡಕ್ಕೆ ಸೂಕ್ತ ಭದ್ರತೆ ಒದಗಿಸಿದ್ದಾರೆ ಎಂದು ದಕ್ಷಿಣ ಉಪನಗರ ವಿಭಾಗದ ಉಪ ಆಯುಕ್ತ ರಶೀದ್‌ ಮುನೀರ್‌ ಖಾನ್‌ ಹೇಳಿದ್ದಾರೆ.