ನಟ ಸಾಯಿ ಧರಮ್ ತೇಜ್‌ ಬೈಕ್ ಅಕ್ಸಿಡೆಂಟ್: ಚಿರಂಜೀವಿ ಅಳಿಯನ ಆರೋಗ್ಯ ಸ್ಥಿತಿ ಈಗ ಹೇಗಿದೆ?

ಮೆಗಾ ಸ್ಟಾರ್ ಚಿರಂಜೀವಿ ಅವರ ಅಳಿಯ ಸಾಯಿ ಧರಮ್ ತೇಜ್ ಅವರು ಶುಕ್ರವಾರ ರಾತ್ರಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ಸದ್ಯ ಅವರಿಗೆ ಚಿಕಿತ್ಸೆ ಮುಂದುವರಿದಿದ್ದು, ಅವರ ಆರೋಗ್ಯದ ಬಗ್ಗೆ ವೈದ್ಯರು ಅಪ್‌ಡೇಟ್ ನೀಡಿದ್ದಾರೆ.

ನಟ ಸಾಯಿ ಧರಮ್ ತೇಜ್‌ ಬೈಕ್ ಅಕ್ಸಿಡೆಂಟ್: ಚಿರಂಜೀವಿ ಅಳಿಯನ ಆರೋಗ್ಯ ಸ್ಥಿತಿ ಈಗ ಹೇಗಿದೆ?
Linkup
'ಮೆಗಾ ಸ್ಟಾರ್' () ಸಹೋದರಿಯ ಪುತ್ರ, ಉದಯೋನ್ಮುಖ ತೆಲುಗು ನಟ ಸಾಯಿ ಧರಮ್‌ ತೇಜ್‌ ಶುಕ್ರವಾರ (ಸೆ.10) ರಾತ್ರಿ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಆರಂಭಿಸಲಾಗಿತ್ತು. ಅವರ ಕಾಲರ್‌ ಬೋನ್‌ ಮುರಿದಿತ್ತು. ಜೊತೆಗೆ ಅವರ ಬಲಗಣ್ಣಿನ ಬಳಿ ಪೆಟ್ಟಾಗಿತ್ತು. ಇದೀಗ ಅವರಿಗೆ ನುರಿತ ವೈದ್ಯರಿಂದ ಚಿಕಿತ್ಸೆ ಮುಂದುವರಿದಿದೆ. ಸದ್ಯ ಸಾಯಿ ಧರಮ್‌ ತೇಜ್‌ () ಆರೋಗ್ಯ ಹೇಗಿದೆ? ವೈದ್ಯರು ಏನಂತಾರೆ? ಇಲ್ಲಿದೆ ಮಾಹಿತಿ. ಹೆಲ್ತ್ ಅಪ್‌ಡೇಟ್‌ನಟ ಸಾಯಿ ಧರಮ್ ತೇಜ್ ಅವರ ಆರೋಗ್ಯ ಈಗ ಹೇಗಿದೆ ಎಂಬುದರ ಬಗ್ಗೆ ಅಪೊಲೋ ಆಸ್ಪತ್ರೆಯ ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ. 'ನಟ ಸಾಯಿ ಧರಮ್ ತೇಜ್ ಅವರ ಆರೋಗ್ಯ ಸ್ಥಿರವಾಗಿದೆ ಮತ್ತು ಚೇತರಿಕೆ ಆಗುತ್ತಿದೆ. ನಮ್ಮ ನುರಿತ ವೈದ್ಯರ ತಂಡ ಅವರಿಗೆ ಕಾಲರ್ ಬೋನ್ ಸರ್ಜರಿಯನ್ನು ಯಶಸ್ವಿಯಾಗಿ ಮಾಡಿದೆ. ಸದ್ಯ ಅವರು ವೈದ್ಯರ ನಿಗಾದಲ್ಲಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ. ಇನ್ನು, ಆಸ್ಪತ್ರೆಗೆ ಚಿತ್ರರಂಗದ ಗಣ್ಯರು, ಚಿರು ಕುಟುಂಬದ ಆಪ್ತರು ಭೇಟಿ ನೀಡುತ್ತಿದ್ದಾರೆ. ಆದಷ್ಟು ಬೇಗ ಸಾಯಿ ಧರಮ್ ತೇಜ್ ಗುಣವಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಚಾಲನೆ ವೇಳೆ ನಿರ್ಲಕ್ಷ್ಯಇನ್ನು, ಬೈಕ್ ಅಪಘಾತಕ್ಕೆ ಅತೀ ವೇಗದ ಚಾಲನೆಯೇ ಕಾರಣ ಎಂದು ಹೇಳಲಾಗಿದೆ. 40 ಕಿ.ಮೀ ವೇಗ ಮಿತಿ ಇದ್ದ ರಸ್ತೆಯಲ್ಲಿ 70-80 ಕಿ.ಮೀ. ವೇಗದಲ್ಲಿ ಸಾಯಿ ಧರಮ್ ಬೈಕ್ ಚಾಲನೆ ಮಾಡುತ್ತಿದ್ದರು ಮತ್ತು ಎಡಬದಿಯಿಂದ ರಿಕ್ಷಾವೊಂದನ್ನು ಓವರ್ ಟೇಕ್ ಮಾಡಲು ಅವರು ಪ್ರಯತ್ನಿಸಿದ್ದರು. ಆ ವೇಳೆ ಅವರು ಸ್ಕಿಡ್ ಆಗಿ ಬಿದ್ದರು ಎಂದು ಪೊಲೀಸರಿಂದ ಮಾಹಿತಿ ಸಿಕ್ಕಿದೆ. ಅಲ್ಲದೆ, ಅವರು ರಾಂಗ್ ಸೈಡ್‌ನಿಂದ ಓವರ್ ಟೇಕ್ ಮಾಡುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ರೆಕಾರ್ಡ್‌ ಆಗಿವೆ. ತಮ್ಮ ದುಬಾರಿ ಸ್ಪೋರ್ಟ್ಸ್‌ ಬೈಕ್‌ನಲ್ಲಿ ಅವರು ಅಜಾಗರೂಕತೆಯಿಂದ ರೈಡ್ ಮಾಡುತ್ತಿದ್ದರು ಮತ್ತು ಹೆಲ್ಮೆಟ್ ಕೂಡ ಸರಿಯಾಗಿ ಧರಿಸಿರಲಿಲ್ಲ ಎಂದು ಹೇಳಲಾಗಿದೆ. ಸಾಯಿ ಧರಮ್‌ ವಿರುದ್ಧ ದೂರು ದಾಖಲುಇನ್ನು, ನಿರ್ಲಕ್ಷ್ಯದಿಂದ ಬೈಕ್ ಚಲಾಯಿಸಿದ್ದಕ್ಕೆ ಸಾಯಿ ಧರಮ್ ತೇಜ್‌ ವಿರುದ್ಧ ಹೈದರಾಬಾದ್ನ ರಾಯದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 336, 184 ಎಂವಿ ಕಾಯ್ದೆಯಡಿ ಅತಿವೇಗ ಮತ್ತು ನಿರ್ಲಕ್ಷ್ಯ ಆರೋಪದಡಿ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ. ಅಲ್ಲದೆ, ಸಾಯಿ ಧರಮ್ ತೇಜ್ ಬಳಿ ಕೇವಲ ಲೈಟ್ ಮೋಟರ್ ವೆಹಿಕಲ್ ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದರು. ದ್ವಿಚಕ್ರ ವಾಹನದ ಲೈಸೆನ್ಸ್ ಹೊಂದಿರಲಿಲ್ಲ ಎಂಬ ಮಾತು ಕೂಡ ಕೇಳಿಬಂದಿದೆ.