ನಟ ಸಾಯಿ ಧರಮ್ ತೇಜ್ ವಿರುದ್ಧ ಕೇಸ್; ಅಪಘಾತದ ಬಗ್ಗೆ ಅಚ್ಚರಿಯ ಮಾಹಿತಿ ಬಿಚ್ಚಿಟ್ಟ ಪೊಲೀಸರು!

ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಮೆಗಾ ಸ್ಟಾರ್ ಚಿರಂಜೀವಿ ಅವರ ಅಳಿಯ ಸಾಯಿ ಧರಮ್ ತೇಜ್ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಈ ಮಧ್ಯೆ ಅವರ ಬೈಕ್ ಅಪಘಾತಕ್ಕೆ ಕಾರಣ ಏನು ಎಂಬುದನ್ನು ಪೊಲೀಸರು ಬಿಚ್ಚಿಟ್ಟಿದ್ದಾರೆ.

ನಟ ಸಾಯಿ ಧರಮ್ ತೇಜ್ ವಿರುದ್ಧ ಕೇಸ್; ಅಪಘಾತದ ಬಗ್ಗೆ ಅಚ್ಚರಿಯ ಮಾಹಿತಿ ಬಿಚ್ಚಿಟ್ಟ ಪೊಲೀಸರು!
Linkup
ತೆಲುಗು ನಟ ಅವರು ಶುಕ್ರವಾರ (ಸೆ.10) ರಾತ್ರಿ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಈ ಮಧ್ಯೆ ಹೈದರಾಬಾದ್ನ ರಾಯದುರ್ಗ ಪೊಲೀಸ್ ಠಾಣೆಯಲ್ಲಿ ಸಾಯಿ ಧರಮ್‌ ತೇಜ್ ವಿರುದ್ಧ ದೂರು ದಾಖಲಾಗಿದೆ. ಜೊತೆಗೆ ಅಪಘಾತಕ್ಕೆ ಕಾರಣವೇನು ಎಂಬುದರ ಬಗ್ಗೆ ಪೊಲೀಸರು ಸಾಕ್ಷಿ ಕಲೆ ಹಾಕಿದ್ದಾರೆ. ಆಟೋ ರಿಕ್ಷಾವನ್ನು ರಾಂಗ್ ಸೈಡ್‌ನಿಂದ ಓವರ್ಟೇಕ್ ಮಾಡುವ ವೇಳೆ ಈ ದುರಂತ ಸಂಭವಿಸಿದೆ ಮತ್ತು ಸಿಕ್ಕಾಪಟ್ಟೆ ವೇಗದಲ್ಲಿ ಬೈಕ್ ಚಲಾಯಿಸಿದ್ದು ಕೂಡ ಘಟನೆ ಕಾರಣ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅತೀ ವೇಗದಲ್ಲಿ ಬೈಕ್ ರೈಡಿಂಗ್! ನಟ ಸಾಯಿ ಧರಮ್ ತೇಜ್‌ಗೆ ಮೊದಲಿನಿಂದಲೂ ಬೈಕ್ ರೈಡಿಂಗ್ ಬಗ್ಗೆ ವಿಪರೀತ ಕ್ರೇಜ್ ಇತ್ತು. ಬಿಡುವು ಇದ್ದಾಗೆಲ್ಲ ಸ್ನೇಹಿತರೊಂದಿಗೆ ಅವರು ಬೈಕ್‌ನಲ್ಲಿ ಲಾಂಗ್ ಡ್ರೈವ್ ಹೋಗುತ್ತಿದ್ದರು. ಅಂತೆಯೇ ಅವರು ಶುಕ್ರವಾರ (ಸೆ.10) ರಾತ್ರಿ ತಮ್ಮ ದುಬಾರಿ ಸ್ಪೋರ್ಟ್ಸ್‌ ಬೈಕ್‌ನಲ್ಲಿ ರೈಡ್ ಹೋಗಿದ್ದಾರೆ. ಹೈದರಾಬಾದ್‌ನ ಮಾಧಾಪುರ್‌ ರಸ್ತೆಯ ಬ್ರಿಡ್ಜ್ ಬಳಿ ಸಾಯಿ ಧರಮ್ ಬೈಕ್ ಚಲಾಯಿಸಿದ್ದು, ಅಲ್ಲಿ 40 ಕಿ.ಮೀ. ವೇಗ ಮಿತಿ ಇದೆ. ಆದರೆ 102 ಕಿ.ಮೀ. ವೇಗದಲ್ಲಿ ಸಾಯಿ ಧರಮ್ ತೇಜ್ ಬೈಕ್ ಓಡಿಸುತ್ತಿದ್ದರು. ಅಪಘಾತ ಆಗುವಾಗ 72 ಕಿ.ಮೀ. ವೇಗದಲ್ಲಿ ಅವರ ಬೈಕ್ ಚಲಿಸುತ್ತಿತ್ತು. ಇದು ಅವರ ಅಜಾಗರೂಕತೆಯಿಂದ ಬೈಕ್ ಓಡಿಸಿದ್ದಕ್ಕೆ ಸಾಕ್ಷಿ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೆ, ತಮ್ಮ ಮುಂದೆ ಚಲಿಸುತ್ತಿದ್ದ ಆಟೋ ರಿಕ್ಷಾವನ್ನು ರಾಂಗ್ ಸೈಡ್ನಿಂದ ಓವರ್ ಟೇಕ್ ಮಾಡಲು ಸಾಯಿ ಧರಮ್ ತೇಜ್ ಪ್ರಯತ್ನಿಸಿದ ವೇಳೆ ಈ ಅಪಘಾತ ನಡೆದಿದೆ. ಅದು ಕೂಡ ಸಂಚಾರಿ ನಿಯಮದ ಉಲ್ಲಂಘನೆ ಆಗಿದೆ. ಸಿಸಿ ಟಿವಿ ದೃಶ್ಯಾವಳಿಗಳಲ್ಲೂ ಇದು ಕಾಣಿಸಿದೆ. ಈ ವೇಳೆ ಅವರು ಸರಿಯಾಗಿ ಹೆಲ್ಮೆಟ್ ಧರಿಸಿರಲಿಲ್ಲ ಎಂಬ ಮಾಹಿತಿಯೂ ಸಿಕ್ಕಿದೆ. ಇನ್ನು, ಸಾಯಿ ಧರಮ್ ತೇಜ್ ರೈಡ್ ಮಾಡುತ್ತಿದ್ದ ಬೈಕ್ ಸೆಕೆಂಡ್ ಹ್ಯಾಂಡ್ ಆಗಿತ್ತು. ಅದನ್ನು ಬುರ್ರಾ ಅನಿಲ್ ಕುಮಾರ್ ಎಂಬ ವ್ಯಕ್ತಿಯಿಂದ ಖರೀದಿ ಮಾಡಿದ್ದರು ಸಾಯಿ. ಆದರೆ, ಅದನ್ನು ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿರಲಿಲ್ಲ ಎಂಬ ಮಾಹಿತಿ ಪೊಲೀಸರ ಕಡೆಯಿಂದ ಸಿಕ್ಕಿದೆ. ಇದೆಲ್ಲದರ ಜೊತೆಗೆ ಸಾಯಿ ಧರಮ್ ತೇಜ್, ಕೇವಲ ಲೈಟ್ ಮೋಟರ್ ವೆಹಿಕಲ್ ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದರು. ದ್ವಿಚಕ್ರ ವಾಹನದ ಲೈಸೆನ್ಸ್ ಹೊಂದಿರಲಿಲ್ಲ ಎಂಬ ಮಾತು ಕೂಡ ಕೇಳಿಬಂದಿದೆ. ಸದ್ಯ ಅಜಾಗರೂಕ ಚಾಲನೆ ಮಾಡಿದ್ದಕ್ಕಾಗಿ ಸಾಯಿ ಧರಮ್ ವಿರುದ್ಧ ಹೈದರಾಬಾದ್ನ ರಾಯದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 336, 184 ಮೋಟರ್ ವೆಹಿಕಲ್‌ ಕಾಯ್ದೆಯಡಿ ಪೊಲೀಸರು ಅತಿವೇಗ ಮತ್ತು ನಿರ್ಲಕ್ಷ್ಯ ಆರೋಪದಡಿ ಪ್ರಕರಣವನ್ನು ದಾಖಲಿಸಿದ್ದಾರೆ.