ಹರೀಶ್ ಬಸವರಾಜ್
ಕೊರೊನಾ ಕಾರಣಕ್ಕೆ ನಟನೆಯ 'ದೃಶ್ಯಂ-2' ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ಡಿಜಿಟಲ್ ವೇದಿಕೆಯಲ್ಲಿಯೇ ಈ ಸಿನಿಮಾವನ್ನು ಅತಿ ಹೆಚ್ಚು ಜನರು ನೋಡಿ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಯಶಸ್ಸಿನಿಂದಾಗಿ ಈ ಸಿನಿಮಾ ಟಾಲಿವುಡ್‌ನಲ್ಲೂ ರೀಮೇಕ್ ಆಗಿ ಅದರ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಈಗ ಇದರ ಯಶಸ್ಸು ಸ್ಯಾಂಡಲ್‌ವುಡ್‌ನಲ್ಲೂ ಮುಂದುವರಿಯಲಿದ್ದು, ಕನ್ನಡದಲ್ಲಿಈ ಸಿನಿಮಾ '' ಹೆಸರಿನಲ್ಲಿ ಸದ್ಯದಲ್ಲೇ ಸೆಟ್ಟೇರಲಿದೆ.
ಮಲಯಾಳಂನ 'ದೃಶ್ಯಂ' ಸಿನಿಮಾದ ಕನ್ನಡ ರಿಮೇಕ್ ಕೂಡ 2014ರಲ್ಲಿ ಬಿಡುಗಡೆಯಾಗಿ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ಅದರಲ್ಲಿ ರವಿಚಂದ್ರನ್ ಅಮೋಘವಾಗಿ ನಟಿಸಿದ್ದರು. ಇದೀಗ 'ದೃಶ್ಯ-2' ಸಿನಿಮಾದಲ್ಲೂಕ್ರೇಜಿಸ್ಟಾರ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. 'ದೃಶ್ಯ'ಕ್ಕೆ ನಿರ್ದೇಶನ ಮಾಡಿದ್ದ ಪಿ. ವಾಸು ಅವರೇ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಮೊದಲ ಚಿತ್ರ ನಿರ್ಮಾಣ ಮಾಡಿದ್ದ ನಿರ್ಮಾಣ ಸಂಸ್ಥೆಯೇ ಈ ಬಾರಿಯೂ ನಿರ್ಮಾಣ ಮಾಡುತ್ತಿದೆ.
ಈ ಬಗ್ಗೆ ನಿರ್ದೇಶಕ ಪಿ.ವಾಸು ಲವಲವಿಕೆ ಜತೆ ಮಾತನಾಡಿದ್ದು, 'ದೃಶ್ಯ-2 ಸಿನಿಮಾ ಮಾಡಲು ಎಲ್ಲ ರೀತಿಯ ತಯಾರಿ ಮಾಡಿಕೊಂಡಾಗಿದೆ. ಮೊದಲ ಭಾಗದಲ್ಲಿದ್ದ ರಾಜೇಂದ್ರ ಪೊನ್ನಪ್ಪ ಕುಟುಂಬ ಈ ಚಿತ್ರದಲ್ಲಿಯೂ ಮುಂದುವರೆಯುತ್ತದೆ. ಹೊಸದಾಗಿ ಒಂದಷ್ಟು ಕಲಾವಿದರು ಈ ಚಿತ್ರಕ್ಕೆ ಸೇರಿಕೊಳ್ಳುತ್ತಾರೆ. ಉಳಿದಂತೆ ಮೊದಲ ಭಾಗದಲ್ಲಿದ್ದ ಆಶಾ ಶರತ್, ಪ್ರಭು ಸೇರಿದಂತೆ ಒಂದಷ್ಟು ನಟರು ಇಲ್ಲಿಯೂ ಮುಂದುವರೆಯುತ್ತಾರೆ. ಜನರಿಗೆ ಇಷ್ಟವಾಗುವಂತಹ ಸಿನಿಮಾ ಇದಾಗಲಿದೆ' ಎಂದಿದ್ದಾರೆ.
ಮೇ ತಿಂಗಳಿನಿಂದ 'ದೃಶ್ಯ-2' ಚಿತ್ರೀಕರಣ ಆರಂಭಿಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ನಡೆಯಲಿದ್ದು, ಮೊದಲ ಭಾಗದಲ್ಲಿದ್ದ ಮನೆಯೇ ಇಲ್ಲಿಯೂ ಇರಲಿದೆ. ಮಾಲಿವುಡ್‌ನಲ್ಲಿಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದ್ದರೂ ಲವಲವಿಕೆಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಕನ್ನಡದಲ್ಲಿಈ ಸಿನಿಮಾ ಚಿತ್ರಮಂದಿರದಲ್ಲಿಯೇ ಬಿಡುಗಡೆಯಾಗಲಿದೆ.
ಪ್ರಮೋದ್ ಶೆಟ್ಟಿ ಹೊಸ ಎಂಟ್ರಿಮಲಯಾಳಂನ 'ದೃಶ್ಯಂ-2' ಚಿತ್ರದಲ್ಲಿ ನಟ ಮುರಳಿ ಗೋಪಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಆ ಪಾತ್ರವನ್ನು ಕನ್ನಡದಲ್ಲಿ ನಟ ಪ್ರಮೋದ್ ಶೆಟ್ಟಿ ನಿರ್ವಹಿಸಲಿದ್ದಾರೆ ಎಂದು ಪಿ.ವಾಸು ತಿಳಿಸಿದ್ದಾರೆ. 'ಮುರಳಿ ಗೋಪಿ ಪಾತ್ರಕ್ಕೆ ನಿರ್ಮಾಪಕರು ಪ್ರಮೋದ್ ಶೆಟ್ಟಿಯವರನ್ನು ಸಂಪರ್ಕಿಸಿದ್ದಾರೆ. ಅವರು ಸಹ ನಟಿಸಲು ಓಕೆ ಹೇಳಿದ್ದಾರೆ. ಸದ್ಯಕ್ಕೆ ಅವರು ಮಾತ್ರ ಹೊಸದಾಗಿ ಈ ಸಿನಿಮಾ ತಂಡಕ್ಕೆ ಸೇರಿಕೊಳ್ಳುತ್ತಾರೆ. ಇನ್ನುಳಿದ ಕಲಾವಿದರನ್ನು ಮುಂದಿನ ದಿನಗಳಲ್ಲಿ ಹೇಳುತ್ತೇವೆ' ಎಂದು ಅವರು ವಿವರಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಪ್ರಮೋದ್ ಶೆಟ್ಟಿ, 'ಇದೊಂದು ಒಳ್ಳೆಯ ಅವಕಾಶ. ನಿರ್ಮಾಪಕರು ನಾನು ನಟಿಸಿದ್ದ 'ಉಳಿದವರು ಕಂಡಂತೆ' ಸಿನಿಮಾವನ್ನು ಇಷ್ಟಪಟ್ಟಿದ್ದರಂತೆ. ಇತ್ತೀಚೆಗೆ ಬೆಂಗಳೂರಿಗೆ ಬಂದಾಗ ನನ್ನನ್ನು ಕರೆದು 'ದೃಶ್ಯ-2'ನಲ್ಲಿ ನೀವು ನಟಿಸಬೇಕು ಎಂದು ಆಫರ್ ನೀಡಿದರು. ಆಗ ಆ ಪ್ರಾಜೆಕ್ಟ್‌ನಲ್ಲಿರುವ ಥ್ರಿಲ್ಲಿಂಗ್ ಅಂಶ ಕಣ್ಣೆದುರಿಗೆ ಬಂತು. ಹಾಗಾಗಿ ಒಪ್ಪಿಕೊಂಡೆ' ಎಂದಿದ್ದಾರೆ.
ಕೋಟ್ಸ್
ರವಿಚಂದ್ರನ್ ಅವರ ಜತೆಗೆ ನನಗೆ ಇದು ಮೊದಲ ಸಿನಿಮಾ. ಇದು ಖುಷಿಗೆ ಮೊದಲ ಕಾರಣವಾಗಿದೆ. ಜತೆಗೆ ಇಡೀ ಸಿನಿಮಾದಲ್ಲಿ ನನ್ನ ಪಾತ್ರ ಇರುತ್ತದೆ. ಅನೇಕ ಸಿನಿಮಾಗಳಲ್ಲಿ ನನ್ನ ನಟನೆ ನೋಡಿದ ನಿರ್ಮಾಪಕರೇ ಈ ಚಿತ್ರದ ಆಫರ್ ನನಗೆ ಕೊಟ್ಟಿದ್ದಾರೆ.
-ಪ್ರಮೋದ್ ಶೆಟ್ಟಿ, ನಟ
ರವಿಚಂದ್ರನ್, ನವ್ಯಾ ನಾಯರ್ ಸೇರಿದಂತೆ ಮೊದಲ ಭಾಗದಲ್ಲಿದ್ದ ಬಹಳಷ್ಟು ಕಲಾವಿದರು ಈ ಚಿತ್ರದಲ್ಲಿಯೂ ಇರಲಿದ್ದಾರೆ. ಈ ಮೂಲಕ ಕನ್ನಡಿಗರು ರಾಜೇಂದ್ರ ಪೊನ್ನಪ್ಪನ ರೋಚಕ ಕಥೆಯನ್ನು ಮತ್ತೆ ತೆರೆ ಮೇಲೆ ನೋಡಬಹುದು.
-ಪಿ. ವಾಸು, ನಿರ್ದೇಶಕ