ಸೀನಿಯರ್ NTR ಪಾತ್ರ ಮಾಡುವುದಕ್ಕೆ ಜೂ. ಎನ್‌ಟಿಆರ್ ಹಿಂದೇಟು ಹಾಕುವುದೇಕೆ?

ಇಂದು (ಮೇ 28) ತೆಲುಗು ಚಿತ್ರರಂಗ ಕಂಡ ಅಪ್ರತಿಮ ನಟ, ಜನಪ್ರಿಯ ಮುಖ್ಯಮಂತ್ರಿ ನಂದಮೂರಿ ತಾರಕ ರಾಮಾರಾವ್ ಅವರ 98ನೇ ಜನ್ಮದಿನ. ಅವರ ಹುಟ್ಟುಹಬ್ಬದ ಈ ಸವಿನೆನಪಿನಲ್ಲಿ ಸೀನಿಯರ್ ಎನ್‌ಟಿಆರ್ ಪಾತ್ರ ಮಾಡುವುದಕ್ಕೆ ಜೂ. ಎನ್‌ಟಿಆರ್ ಹಿಂದೇಟು ಹಾಕುವುದೇಕೆ ಎಂಬುದರ ಕುರಿತ ಮಾಹಿತಿ ಇಲ್ಲಿದೆ.

ಸೀನಿಯರ್ NTR ಪಾತ್ರ ಮಾಡುವುದಕ್ಕೆ ಜೂ. ಎನ್‌ಟಿಆರ್ ಹಿಂದೇಟು ಹಾಕುವುದೇಕೆ?
Linkup
ತೆಲುಗು ಚಿತ್ರರಂಗದ ಜನಪ್ರಿಯ ನಟ, ಆಂಧ್ರ ಪ್ರದೇಶದ ಜನಪ್ರಿಯ ಮುಖ್ಯಮಂತ್ರಿ ಆಗಿದ್ದವರು ಎನ್‌ಟಿಆರ್ (). ಇಂದು ಅವರ 98ನೇ ಜನ್ಮದಿನೋತ್ಸವ. ಈ ಸಂದರ್ಭದಲ್ಲಿ ಅವರನ್ನು ಇಡೀ ಟಾಲಿವುಡ್ ಮಾತ್ರವಲ್ಲದೇ, ದೇಶಾದ್ಯಂತ ಅನೇಕರು ನೆನಪಿಸಿಕೊಳ್ಳುತ್ತಿದ್ದಾರೆ. ನಂತರ ಅವರ ಕುಟುಂಬದ ಆ ಲೆಗಸಿಯನ್ನು ಹಾಗೇ ಮುಂದುವರಿಸಿಕೊಂಡು ಬರಲಾಗುತ್ತಿದೆ. ಪ್ರಸ್ತುತ ಆ ಕುಟುಂಬದ ಜೂ.ಎನ್‌ಟಿಆರ್‌ ಟಾಲಿವುಡ್‌ನ ಬಹುದೊಡ್ಡ ಸ್ಟಾರ್ ಆಗಿ ಬೆಳೆದಿದ್ದಾರೆ. ಅಂದಹಾಗೆ, ತಮ್ಮ ತಾತನ (ಎನ್‌ಟಿಆರ್‌) ಪಾತ್ರ ಮಾಡುವುದಕ್ಕೆ ಜೂನಿಯರ್ ಎಂದಿಗೂ ಒಪ್ಪುವುದಿಲ್ಲವಂತೆ! ಅದಕ್ಕೆ ಕಾರಣವೇನು? ಮುಂದೆ ಓದಿ! ತಾತನ ಪಾತ್ರ ಮಾಡುವುದಿಲ್ಲ ಎಂದಿದ್ದ ಎನ್‌ಟಿಆರ್‌ ಕೆಲ ವರ್ಷಗಳ ಹಿಂದೆ 'ಮಹಾನಟಿ' ಸಾವಿತ್ರಿ ಅವರ ಕುರಿತು ಸಿನಿಮಾ ಮಾಡಲಾಗಿತ್ತು. ಅದರಲ್ಲಿ ಅಕ್ಕಿನೇನಿ ನಾಗೇಶ್ವರರಾವ್ ಅವರಿಂದಿಡಿದು ಆಗಿನ ತೆಲುಗು ಚಿತ್ರೋದ್ಯಮದ ಅನೇಕರ ಪಾತ್ರಗಳಿದ್ದವು. ಸಾವಿತ್ರಿ ಅವರ ಜೊತೆಗೆ ಎನ್‌ಟಿಆರ್ ಕೂಡ ಅನೇಕ ಸಿನಿಮಾ ಮಾಡಿದ್ದರು. ಹಾಗಾಗಿ, ಎನ್‌ಟಿಆರ್ ಪಾತ್ರ ಮಾಡುವಂತೆ ಜೂನಿಯರ್ ಬಳಿ 'ಮಹಾನಟಿ' ತಂಡ ಕೇಳಿಕೊಂಡಿತ್ತು. ನಿರ್ಮಾಪಕಿ ಸ್ವಪ್ನಾ ದತ್ ಅವರೇ ಸ್ವತಃ ಜೂನಿಯರ್‌ ಬಳಿ ಈ ಬಗ್ಗೆ ಕೇಳಿದ್ದರು. ಆದರೆ, ತಾರಕ್ ಮಾತ್ರ ನೋ ಎಂದೇ ಹೇಳಿದ್ದರು. ಮಹಾನಟಿ ಆಡಿಯೋ ಲಾಂಚ್‌ನಲ್ಲಿ ತಾರಕ್ ಮಾತು 'ಮಹಾನಟಿ' ಚಿತ್ರದ ಆಡಿಯೋ ಲಾಂಚ್‌ ಕಾರ್ಯಕ್ರಮಕ್ಕೆ ತಾರಕ್ ಆಗಮಿಸಿದ್ದರು. ಆ ವೇಳೆ ಅವರು ಮಾತನಾಡಿದ್ದಿಷ್ಟು. 'ನಿರ್ಮಾಪಕಿ ಸ್ವಪ್ನಾ ನನಗೆ ತುಂಬ ಆತ್ಮೀಯರು. ನಾವೆಲ್ಲ ಒಟ್ಟಿಗೆ ಬೆಳೆದವರು. ಸ್ವಪ್ನಾ ತಂದೆ ಅಶ್ವಿನಿ ದತ್ ಪ್ರಾರಂಭಿಸಿದ್ದ ಸಿನಿಮಾ ಬ್ಯಾನರ್‌ಗೆ ವೈಜಯಂತಿ ಮೂವೀಸ್ ಎಂದು ಹೆಸರಿಟ್ಟಿದ್ದೆ ನಮ್ಮ ತಾತ. ಸ್ವಪ್ನಾ ನಿರ್ಮಾಪಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದು ನನ್ನ ಸಿನಿಮಾದಿಂದ. ಸ್ವಪ್ನಾ ಬಂದು, ನಮ್ಮ ತಾತನ ಪಾತ್ರ ಮಾಡಬೇಕು ಎಂದು ಕೇಳಿದಾಗ, ನಾನು ಆಗೋದಿಲ್ಲ ಎಂದೇ ಹೇಳಿದೆ. ಅದು ಮಹಾನಟಿ ಚಿತ್ರಕ್ಕಾಗಿ ಮಾತ್ರವಲ್ಲ, ಮುಂದೆ ಯಾವ ಚಿತ್ರದಲ್ಲೂ ನಾನು ಅವರ ಪಾತ್ರವನ್ನು ಮಾಡುವುದಿಲ್ಲ. ಅಲ್ಲದೆ, ಅವರು ನಿರ್ವಹಿಸಿದ್ದ ಯಾವ ಪಾತ್ರಗಳನ್ನು ನಾನು ಮತ್ತೊಮ್ಮೆ ಮಾಡುವುದಿಲ್ಲ. ಯಾಕೆಂದರೆ, ಆ ಪಾತ್ರಕ್ಕೆ ನ್ಯಾಯ ಸಲ್ಲಿಸುವಷ್ಟು ಪ್ರತಿಭೆ ನನ್ನಲ್ಲಿದೆ ಎಂದು ನನಗೆ ಅನ್ನಿಸುವುದಿಲ್ಲ' ಎಂದಿದ್ದರು ಎನ್‌ಟಿಆರ್‌. ಅಂದಹಾಗೆ, ಈಚೆಗಷ್ಟೇ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರು ಬಯೋಪಿಕ್ ಕೂಡ ಮಾಡಲಾಗಿದೆ. ಅವರು ಸಿಎಂ ಆಗುವುದಕ್ಕೂ ಮುನ್ನ ನಟಿಯಾಗಿದ್ದವರು. ಸೀನಿಯರ್ ಎನ್‌ಟಿಆರ್ ಜೊತೆಗೆ ಅವರು ಕೂಡ ಸಾಕಷ್ಟು ಸಿನಿಮಾ ಮಾಡಿದ್ದವರೇ. ಹಾಗಾಗಿ, ಜಯಲಲಿತಾ ಬಯೋಪಿಕ್‌ನಲ್ಲಿ ಎನ್‌ಟಿಆರ್ ಅವರ ಒಂದು ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚುವಂತೆ ಜೂನಿಯರ್‌ಗೆ ಕೇಳಲಾಗಿತ್ತು. ಆದರೆ, ಅವರು ಅದಕ್ಕೂ ಗ್ರೀನ್ ಸಿಗ್ನಲ್ ನೀಡಲಿಲ್ಲ ಎನ್ನಲಾಗಿದೆ.