ಡಿಜಿಟಲ್‌ ಪಾವತಿ ಸ್ಥಗಿತಗೊಳಿಸಿದ ಬಿಎಂಟಿಸಿ; ಟಿಕೆಟ್‌ಗಾಗಿ ನಗದು ಮಾತ್ರ ಸ್ವೀಕರಿಸುವ ಹಳೆ ಪದ್ಧತಿ ಮತ್ತೆ ಜಾರಿ

ಈ ಹಿಂದೆ ಪ್ರತಿ ನಿತ್ಯ ಸುಮಾರು 15 ಲಕ್ಷ ಪ್ರಯಾಣಿಕರು ಬಿಎಂಟಿಸಿ ಸೇವೆ ಬಳಸುತ್ತಿದ್ದರು. ಈ ಪೈಕಿ ಸುಮಾರು 6,000 ಮಂದಿ ಡಿಜಿಟಲ್‌ ಪಾವತಿ ಮಾಡುತ್ತಿದ್ದರು. ಆದರೆ ಸದ್ಯ ಬಿಎಂಟಿಸಿ ಬಸ್‌ಗಳಲ್ಲಿ ಪ್ರತಿ ದಿನ ಸುಮಾರು 20 ಲಕ್ಷ ಪ್ರಯಾಣಿಕರು ಸಂಚರಿಸುತ್ತಾರೆ. ಜತೆಗೆ ಕೊರೊನಾ ಸಂಪೂರ್ಣವಾಗಿ ತೊಲಗಿಲ್ಲ. ಆದರೂ ಬಿಎಂಟಿಸಿ ನಗದು ರಹಿತ ಟಿಕೆಟ್‌ ವ್ಯವಸ್ಥೆಯನ್ನು ಸ್ಥಗಿತಗೊಳಿಸಿದೆ. ಸಂಪರ್ಕ ರಹಿತ ಟಿಕೆಟ್‌ ಸೇವೆಯ ಮೂಲಕ ಕೊರೊನಾ ಸೋಂಕು ಹರಡುವುದನ್ನು ತಪ್ಪಿಸುವ ಜತೆಗೆ ಚಿಲ್ಲರೆಗಾಗಿ ತಡಕಾಟ ತಪ್ಪಲಿದೆ.

ಡಿಜಿಟಲ್‌ ಪಾವತಿ ಸ್ಥಗಿತಗೊಳಿಸಿದ ಬಿಎಂಟಿಸಿ; ಟಿಕೆಟ್‌ಗಾಗಿ ನಗದು ಮಾತ್ರ ಸ್ವೀಕರಿಸುವ ಹಳೆ ಪದ್ಧತಿ ಮತ್ತೆ ಜಾರಿ
Linkup
ಬೆಂಗಳೂರು: ಕ್ಯೂಆರ್‌ ಕೋಡ್‌ ಆಧಾರಿತ ಸಂಪರ್ಕರಹಿತ ಮತ್ತು ನಗದುರಹಿತ ಟಿಕೆಟ್‌ ಸೇವೆಯನ್ನು ಸ್ಥಗಿತಗೊಳಿಸಿದೆ. ಕೋವಿಡ್‌-19 ವಿರುದ್ಧ ಸುರಕ್ಷಿತ ಕ್ರಮಗಳ ಹಿನ್ನೆಲೆಯಲ್ಲಿ 2020ರ ಮೇನಲ್ಲಿ ಕ್ಯೂಆರ್‌ ಕೋಡ್‌ ಆಧಾರಿತ ಟಿಕೆಟ್‌ ಸೇವೆಯನ್ನು ಬಿಎಂಟಿಸಿ ಆರಂಭಿಸಿತ್ತು. ಕೊರೊನಾ ಒಕ್ಕರಿಸುವ ಮೊದಲೇ ಟಿಕೆಟ್‌ಗಾಗಿ ಡಿಜಿಟಲ್‌ ರೂಪದಲ್ಲಿ ಹಣ ಪಾವತಿಸುವ ವ್ಯವಸ್ಥೆಗೆ ಭಾರೀ ಬೇಡಿಕೆ ಇತ್ತು. ಆದರೆ ಬಿಎಂಟಿಸಿ ಈ ವ್ಯವಸ್ಥೆಯನ್ನು ಪರಿಚಯಿಸಲು ಮುಂದಾಗಿರಲಿಲ್ಲ. ಈ ಹಿಂದೆ ಪ್ರತಿ ನಿತ್ಯ ಸುಮಾರು 15 ಲಕ್ಷ ಪ್ರಯಾಣಿಕರು ಬಿಎಂಟಿಸಿ ಸೇವೆ ಬಳಸುತ್ತಿದ್ದರು. ಈ ಪೈಕಿ ಸುಮಾರು 6,000 ಮಂದಿ ಡಿಜಿಟಲ್‌ ಪಾವತಿ ಮಾಡುತ್ತಿದ್ದರು. ಆದರೆ ಸದ್ಯ ಬಿಎಂಟಿಸಿ ಬಸ್‌ಗಳಲ್ಲಿ ಪ್ರತಿ ದಿನ ಸುಮಾರು 20 ಲಕ್ಷ ಪ್ರಯಾಣಿಕರು ಸಂಚರಿಸುತ್ತಾರೆ. ಜತೆಗೆ ಕೊರೊನಾ ಸಂಪೂರ್ಣವಾಗಿ ತೊಲಗಿಲ್ಲ. ಆದರೂ ಬಿಎಂಟಿಸಿ ನಗದು ರಹಿತ ಟಿಕೆಟ್‌ ವ್ಯವಸ್ಥೆಯನ್ನು ಸ್ಥಗಿತಗೊಳಿಸಿದೆ. ಸಂಪರ್ಕ ರಹಿತ ಟಿಕೆಟ್‌ ಸೇವೆಯ ಮೂಲಕ ಕೊರೊನಾ ಸೋಂಕು ಹರಡುವುದನ್ನು ತಪ್ಪಿಸುವ ಜತೆಗೆ ಚಿಲ್ಲರೆಗಾಗಿ ತಡಕಾಟ ತಪ್ಪಲಿದೆ. ಚಿಲ್ಲರೆಗಾಗಿ ಪ್ರತಿ ನಿತ್ಯ ಪ್ರಯಾಣಿಕರು ಮತ್ತು ನಿರ್ವಾಹಕರ ನಡುವೆ ಜಗಳ ಸರ್ವೆ ಸಾಮಾನ್ಯವಾಗಿದೆ. ಜತೆಗೆ ಕೆಲವು ನಿರ್ವಾಹಕರು ಚಿಲ್ಲರೆ ವಾಪಸು ಮಾಡದೇ ತಮ್ಮ ಜೇಬಿಗಿಳಿಸಿಕೊಳ್ಳುತ್ತಾರೆ. ನಗದುರಹಿತ ಟಿಕೆಟ್‌ ವ್ಯವಸ್ಥೆಯಿಂದ ಚಿಲ್ಲರೆ ಸಮಸ್ಯೆಯನ್ನು ನೀಗಿಸಬಹುದಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಜಾರಿಗೆ ಹಲವು ಅಡ್ಡಿ: ‘ಕ್ಯೂಆರ್‌ ಕೋಡ್‌ ಆಧಾರಿತ ಟಿಕೆಟ್‌ ವ್ಯವಸ್ಥೆಗಾಗಿ ಆ್ಯಕ್ಸಿಸ್‌ ಬ್ಯಾಂಕ್‌ ಮತ್ತು ಕೆನರಾ ಬ್ಯಾಂಕ್‌ ಸಂಪರ್ಕಿಸಿದ್ದೇವೆ. ಇನ್ನೊಂದೆಡೆ ಟಿಕೆಟ್‌ ನೀಡಿದ ನಂತರವೂ ಬಿಎಂಟಿಸಿ ಖಾತೆಗೆ ಹಣ ಜಮೆಯಾಗದಿರುವ ಅನೇಕ ಉದಾಹರಣೆಗಳಿವೆ. ಈ ರೀತಿಯ ಪ್ರಕರಣಗಳಲ್ಲಿ, ಟಿಕೆಟ್‌ ದರವನ್ನು ನಿರ್ವಾಹಕರ ಸಂಬಳದಿಂದ ಕಡಿತಗೊಳಿಸಲಾಗುತ್ತದೆ. ಈ ಕಾರಣಕ್ಕಾಗಿ ಅನೇಕ ನಿರ್ವಾಹಕರು ಡಿಜಿಟಲ್‌ ಪಾವತಿಯನ್ನು ಪ್ರೋತ್ಸಾಹಿಸುತ್ತಿಲ್ಲ. ರಸ್ತೆ ಬದಿ ವ್ಯಾಪಾರಿಗಳು ಸ್ಪೀಕರ್‌ಗಳನ್ನು ಅಳವಡಿಸುವುದು ಸುಲಭ. ಅವರ ಖಾತೆಗೆ ಹಣ ಸಂದಾಯವಾಗುತ್ತಿದ್ದಂತೆ ಅವರಿಗೆ ಡಿಜಿಟಲ್‌ ಪಾವತಿ ಯಶಸ್ವಿಯಾಗಿರುವುದು ತಿಳಿಯುತ್ತದೆ. ಆದರೆ ಕಿಕ್ಕಿರುವುದು ಜನರಿಂದ ತುಂಬಿರುವ ಬಸ್‌ಗಳಲ್ಲಿ ಇದು ಕಷ್ಟ. ಪ್ರತಿ ನಿರ್ವಾಹಕರ ಮೊಬೈಲ್‌ ಸಂಖ್ಯೆಯನ್ನು ಕ್ಯೂಆರ್‌ ಕೋಡ್‌ನೊಂದಿಗೆ ಲಿಂಕ್‌ ಮಾಡಬೇಕು, ಆಗ ಹಣ ಸಂದಾಯ ಆಗಿರುವ ಬಗ್ಗೆ ಅವರಿಗೆ ಸಂದೇಶ ಬರುತ್ತದೆ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಯೊಬ್ಬರು ಹೇಳಿದರು. ಸಂಪರ್ಕ ರಹಿತ ಟಿಕೆಟ್‌ ವ್ಯವಸ್ಥೆ ಕಾರ್ಯ ನಿರ್ವಹಣೆ ಹೇಗೆ ?ಕಳೆದ ವರ್ಷ ಪರಿಚಯಿಸಲಾದ ಸಂಪರ್ಕ ರಹಿತ ಟಿಕೆಟ್‌ ವ್ಯವಸ್ಥೆಯಲ್ಲಿ, ಪ್ರಯಾಣಿಕರು ಟಿಕೆಟ್‌ ದರವನ್ನು ಯುಪಿಐ ಆ್ಯಪ್‌ಗಳಾದ ಗೂಗಲ್‌ ಪೇ, ಫೋನ್‌ ಪೇ, ಮತ್ತು ಪೇಟಿಎಂ ಮೂಲಕ ಪಾವತಿಸಬಹುದು. ಪ್ರತಿ ಬಸ್ಸಿನಲ್ಲಿ ಬೇರೆ ಬೇರೆ ಕ್ಯೂಆರ್‌ ಕೋಡ್‌ ಇರುತ್ತದೆ. ಪ್ರಯಾಣಿಕರು ಕೋಡ್‌ ಅನ್ನು ಸ್ಕ್ಯಾ‌ನ್‌ ಮಾಡಿ, ಮೊತ್ತ ಮತ್ತು ಪಿನ್‌ ನಮೂದಿಸಿದ ನಂತರ, ಅವರ ಬ್ಯಾಂಕ್‌ ಖಾತೆಯಿಂದ ಹಣ ಕಡಿತಗೊಳಿಸಲಾಗುತ್ತದೆ. ಪಾವತಿ ಮಾಡಿದ ನಂತರ, ಕಂಡಕ್ಟರ್‌ ಟಿಕೆಟ್‌ ನೀಡುತ್ತಾರೆ. ಪ್ರಯಾಣಿಕರ ಸಂಖ್ಯೆ ತಗ್ಗಲು ಕಾರಣಸ್ಥಳೀಯ ತರಕಾರಿ ವ್ಯಾಪಾರಿಗಳು, ರಸ್ತೆ ಬದಿಯ ಸಣ್ಣ-ಪುಟ್ಟ ಅಂಗಡಿಗಳವರೇ ಡಿಜಿಟಲ್‌ ಪಾವತಿ ಸ್ವೀಕರಿಸುತ್ತಿದ್ದಾರೆ. ಆದರೆ ಬಿಎಂಟಿಸಿ ಡಿಜಿಟಲ್‌ ಹಾದಿಯಲ್ಲಿ ಹಿಂದೆ ಸರಿಯುತ್ತಿದೆ. ನೋಟು ಅಮಾನ್ಯೀಕರಣದ ನಂತರ ದೇಶದಲ್ಲಿ ನಗದು ರಹಿತ ಪಾವತಿಗಳು ಹೆಚ್ಚಿವೆ. ಆದರೆ ಕೊರೊನಾ ನಡುವೆಯೂ ಡಿಜಿಟಲ್‌ ಪಾವತಿ ಮಾಡಿಕೊಳ್ಳಲು ಬಿಎಂಟಿಸಿ ಹಿಂದೇಟು ಹಾಕುತ್ತಿದೆ. ಇದು ಕೂಡ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ತಗ್ಗಲು ಕಾರಣವಾಗಿದೆ ಎಂದು ಬಿಎಂಟಿಸಿ ಬಸ್‌ಗಳಲ್ಲಿ ಪ್ರತಿದಿನ ಪ್ರಯಾಣಿಸುವ ಅನುಷಾ ಎಸ್‌. ಅಭಿಪ್ರಾಯಪಟ್ಟಿದ್ದಾರೆ. ಎನ್‌ಸಿಎಂಸಿ ಬಳಕೆ ಸೌಲಭ್ಯವೂ ವಿಳಂಬದೇಶಾದ್ಯಂತ ಸಾರಿಗೆ ವ್ಯವಸ್ಥೆಯಲ್ಲಿ ಏಕ ಕಾರ್ಡ್‌ ಬಳಕೆಗೆ ಅನುಕೂಲವಾಗುವಂತೆ ರೂಪಿಸಿರುವ ಎನ್‌ಸಿಎಂಸಿ (ನ್ಯಾಶನಲ್‌ ಕಾಮನ್‌ ಮೊಬಿಲಿಟಿ ಕಾರ್ಡ್‌) ಬಳಕೆ ಸೌಲಭ್ಯ ಕಲ್ಪಿಸುವುದರಲ್ಲೂ ಬಿಎಂಟಿಸಿ ಹಿಂದೆ ಬಿದ್ದಿದೆ. ನಮ್ಮ ಮೆಟ್ರೊದಲ್ಲಿ ನವೆಂಬರ್‌ನಿಂದಲೇ ಎನ್‌ಸಿಎಂಸಿ ಕಾರ್ಡ್‌ ಬಳಕೆ ಸೌಲಭ್ಯ ಒದಗಿಸಲು ಸಿದ್ಧತೆ ನಡೆಸಲಾಗಿದೆ. 2016ರಲ್ಲಿ ಆಕ್ಸಿಸ್ ಬ್ಯಾಂಕ್‌ ಸಹಯೋಗದಲ್ಲಿ ಬಿಎಂಟಿಸಿ ಓಪನ್‌ ಲೂಪ್‌ ಸ್ಮಾರ್ಟ್‌ ಕಾರ್ಡ್‌ ಪರಿಚಯಿಸಿತ್ತು. ಆದರೆ ತಾಂತ್ರಿಕ ಕಾರಣದಿಂದ ಅದು ಸ್ಥಗಿತಗೊಂಡಿದೆ.