ಬೆಂಗಳೂರು: ಸ್ಮಗ್ಲರ್‌ನ ಹೊಟ್ಟೆಯಲ್ಲಿ ಪತ್ತೆಯಾಯ್ತು 11 ಕೋಟಿ ಮೌಲ್ಯದ ಡ್ರಗ್ಸ್‌, ಸಿಕ್ಕಿ ಬಿದ್ದಿದ್ದು ಹೇಗೆ ಗೊತ್ತಾ?

ವಿಮಾನ ಪ್ರಯಾಣದ ಅವಧಿಯಲ್ಲಿ ಈ ವ್ಯಕ್ತಿಗೆ ಅಲ್ಲಿರುವ ಸಿಬ್ಬಂದಿ ಉಚಿತ ಆಹಾರ, ನೀರು, ತಂಪು ಪಾನೀಯ ಕೊಟ್ಟರು. ಆದರೆ ಈ ವ್ಯಕ್ತಿ ಮಾತ್ರ ಉಚಿತವಾಗಿ ಆಹಾರ ನೀಡುತ್ತಿದ್ದರು, ಸ್ವೀಕರಿಸುತ್ತಿರಲಿಲ್ಲ. ಇದರಿಂದ ಅನುಮಾನಗೊಂಡ ಡಿಆರ್‌ಐ ಅಧಿಕಾರಿಗಳು ಆತನನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆತನ ಹೊಟ್ಟೆಯಲ್ಲಿ ಸಿಕ್ಕ ವಸ್ತು ನೋಡಿ ದಂಗಾಗಿದ್ದಾರೆ.

ಬೆಂಗಳೂರು: ಸ್ಮಗ್ಲರ್‌ನ ಹೊಟ್ಟೆಯಲ್ಲಿ ಪತ್ತೆಯಾಯ್ತು 11 ಕೋಟಿ ಮೌಲ್ಯದ ಡ್ರಗ್ಸ್‌, ಸಿಕ್ಕಿ ಬಿದ್ದಿದ್ದು ಹೇಗೆ ಗೊತ್ತಾ?
Linkup
ಬೆಂಗಳೂರು: ಮಾದಕ ದ್ರವ್ಯದ ಗುಳಿಗೆಗಳನ್ನು ನುಂಗಿಕೊಂಡು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ (ಕೆಐಎ) ಬಂದಿಳಿದ ನೈಜೀರಿಯಾ ಪ್ರಜೆಯನ್ನು ಆರ್ಥಿಕ ಗುಪ್ತಚರ ಇಲಾಖೆ (ಡಿಆರ್‌ಐ) ಅಧಿಕಾರಿಗಳು ಬಂಧಿಸಿದ್ದಾರೆ. ನೈಜೀರಿಯಾ ಮೂಲದ ಆರೋಪಿ ಆ. 19ರಂದು ದಕ್ಷಿಣ ಆಫ್ರಿಕದ ಜೋಹಾನ್ಸ್‌ಬರ್ಗ್‌ ವಿಮಾನ ನಿಲ್ದಾಣದಿಂದ ದುಬೈಗೆ ಮಾರ್ಗವಾಗಿ ಕೆಐಎಗೆ ಬಂದಿಳಿದಿದ್ದ. ವಿಮಾನ ಪ್ರಯಾಣದ ಅವಧಿಯಲ್ಲಿ ಉಚಿತ ಆಹಾರ, ನೀರು, ತಂಪು ಪಾನೀಯ ಸೇವೆ ಇದ್ದರೂ ಯಾವುದನ್ನು ಸ್ವೀಕರಿಸಿರಲಿಲ್ಲ. ಇದರಿಂದ ಅನುಮಾನಗೊಂಡ ಡಿಆರ್‌ಐ ಅಧಿಕಾರಿಗಳು ಆತನನ್ನು ತಪಾಸಣೆಗೆ ಒಳಪಡಿಸಿದ್ದು, ಸ್ಕ್ಯಾ‌ನಿಂಗ್‌ ಮಾಡಿದಾಗ ಹೊಟ್ಟೆಯಲ್ಲಿ ಅನುಮಾನಾಸ್ಪದ ಗುಳಿಗೆ ಇರುವುದು ಗೊತ್ತಾಗಿದೆ. ದಕ್ಷಿಣ ಆಫ್ರಿಕದಲ್ಲಿಅಪರಿಚಿತ ವ್ಯಕ್ತಿ, ಗುಳಿಗೆ ನುಂಗಿಸಿ ಕಳುಹಿಸಿದ್ದ. ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ನಲ್ಲಿ ರೂಮ್‌ ಬುಕ್‌ ಮಾಡಿದ್ದು, ಅಲ್ಲಿ ಉಳಿದುಕೊಳ್ಳಬೇಕು. ಆ ರೂಮ್‌ಗೆ ಅಪರಿಚಿತ ವ್ಯಕ್ತಿ ಬಂದು ಮೊಬೈಲ್‌ ಫೋನ್‌ ಕೊಡುತ್ತಾನೆ. ಅದಕ್ಕೊಂದು ಕರೆ ಬರಲಿದ್ದು, ಅದರಲ್ಲಿ ಬರುವ ಸೂಚನೆ ಪಾಲನೆ ಮಾಡಿದರೆ ನಿನ್ನ ಹೊಟ್ಟೆಯಲ್ಲಿ ಇರುವ ಡ್ರಗ್ಸ್‌ ಗುಳಿಗೆ ತೆಗೆದುಕೊಳ್ಳುತ್ತಾರೆ. ಆನಂತರ ಹಣ ನಿನಗೆ ಕೊಡಲಾಗುತ್ತದೆ ಎಂದು ಹೇಳಿದ್ದ ಎಂದು ಆರೋಪಿ ಬಾಯಿ ಬಿಟ್ಟಿದ್ದಾನೆ. ಆರೋಪಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದು ವೈದ್ಯರ ಸಹಾಯದಿಂದ ಹೊಟ್ಟೆಯಲ್ಲಿದ್ದ ಡ್ರಗ್ಸ್‌ ಗುಳಿಗೆ ತೆಗೆದಾಗ 11 ಕೋಟಿ ರೂ. ಮೌಲ್ಯದ 1.25 ಕೆಜಿ ಕೊಕೇನ್‌ ಪತ್ತೆಯಾಗಿದೆ ಎಂದು ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ.