''ಜೀವನದಲ್ಲಿ ಅಂತಹ ತಪ್ಪು ಮಾಡಲ್ಲ'': ಮದುವೆ ಬಗ್ಗೆ ನಟಿ ಚಾರ್ಮಿ ಹೀಗಾ ಹೇಳೋದು?

''ನನ್ನ ಜೀವನದಲ್ಲಿ ಮದುವೆ ಅಂತಹ ತಪ್ಪು ನಿರ್ಧಾರವನ್ನು ನಾನು ಕೈಗೊಳ್ಳುವುದಿಲ್ಲ'' ಎಂದು ನಟಿ ಚಾರ್ಮಿ ಕೌರ್ ಹೇಳಿದ್ದಾರೆ.

''ಜೀವನದಲ್ಲಿ ಅಂತಹ ತಪ್ಪು ಮಾಡಲ್ಲ'': ಮದುವೆ ಬಗ್ಗೆ ನಟಿ ಚಾರ್ಮಿ ಹೀಗಾ ಹೇಳೋದು?
Linkup
ಬಾಲಿವುಡ್, ಕಾಲಿವುಡ್, ಹಾಗೂ ಸ್ಯಾಂಡಲ್‌ವುಡ್‌ನಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಚಾರ್ಮಿ ಕೌರ್. 34 ವರ್ಷ ವಯಸ್ಸಿನ ಇಲ್ಲಿಯವರೆಗೂ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 'ಮಾಸ್', 'ಚಕ್ರಂ', 'ಸ್ಟೈಲ್', 'ಪೌರ್ಣಮಿ', 'ರಾಖಿ', 'ಮಂತ್ರ', 'ಮಂಗಳ', 'ದೇವ್.. ಸನ್ ಆಫ್ ಮುದ್ದೇಗೌಡ' ಮುಂತಾದ ಹಲವು ಚಿತ್ರಗಳಲ್ಲಿ ಚಾರ್ಮಿ ಕೌರ್ ಅಭಿನಯಿಸಿದ್ದಾರೆ. ಇಂತಿಪ್ಪ ಚಾರ್ಮಿ ಕೌರ್ ಬಗ್ಗೆ ಇತ್ತೀಚೆಗಷ್ಟೇ ಒಂದು ಗಾಸಿಪ್ ಹರಿದಾಡಿತ್ತು. ಅದೇನಪ್ಪಾ ಅಂದ್ರೆ, ಸದ್ಯದಲ್ಲೇ ನಟಿ ಚಾರ್ಮಿ ಕೌರ್ ವಿವಾಹ ಮಹೋತ್ಸವ ನಡೆಯಲಿದೆ. ಕುಟುಂಬ ಹುಡುಕಿರುವ ವರನ ಜೊತೆ ಚಾರ್ಮಿ ಕೌರ್ ನಡೆಯಲಿದೆ ಎಂಬ ಸುದ್ದಿ ತೆಲುಗು ಸಿನಿ ಅಂಗಳದ ತುಂಬೆಲ್ಲಾ ಗಿರಕಿ ಹೊಡೆದಿತ್ತು. ಈ ವಿಚಾರ ಚಾರ್ಮಿ ಕೌರ್ ಕಿವಿಗೂ ಬಿದ್ದಿದೆ. ಹೀಗಾಗಿ, ಮದುವೆ ಬಗ್ಗೆ ನಟಿ ಚಾರ್ಮಿ ಕೌರ್ ಸ್ಪಷ್ಟನೆ ನೀಡಿದ್ದಾರೆ. ನಟಿ ಚಾರ್ಮಿ ಕೌರ್ ಟ್ವೀಟ್ ''ನಾನೀಗ ನನ್ನ ವೃತ್ತಿ ಜೀವನದ ಅತ್ಯುತ್ತಮ ಹಂತದಲ್ಲಿದ್ದೇನೆ. ನನ್ನ ಜೀವನದ ಬಗ್ಗೆ ನನಗೆ ತುಂಬಾ ಖುಷಿ ಇದೆ. ನನ್ನ ಜೀವನದಲ್ಲಿ ಮದುವೆ ಅಂತಹ ತಪ್ಪು ನಿರ್ಧಾರವನ್ನು ನಾನು ಕೈಗೊಳ್ಳುವುದಿಲ್ಲ'' ಎಂದು ನಟಿ ಚಾರ್ಮಿ ಕೌರ್ ಕಡ್ಡಿ ತುಂಡು ಮಾಡಿದ ಹಾಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಜೊತೆಗೆ, ''ರೂಮರ್ಸ್ ಹಾಗೂ ಫೇಕ್ ರೈಟರ್ಸ್‌ಗೆ ಗುಡ್ ಬೈ. ಕಥೆ ಕಟ್ಟುವುದರಲ್ಲಿ ನೀವೆಲ್ಲ ಪರಿಣಿತರು'' ಎಂದು ಚಾರ್ಮಿ ಕೌರ್ ಟ್ವೀಟ್ ಮಾಡಿದ್ದಾರೆ. ಮದುವೆ ಆಗಲ್ಲ ಎಂದಿದ್ದ ಚಾರ್ಮಿ ಕೌರ್ ''ಚಿತ್ರರಂಗಕ್ಕೆ ಸಂಬಂಧಿಸಿದ ಒಬ್ಬರ ಜೊತೆ ನಾನು ರಿಲೇಶನ್‌ಶಿಪ್‌ನಲ್ಲಿದ್ದೆ. ಆದರೆ, ಅದು ನನಗೆ ಸರಿ ಹೋಗಲಿಲ್ಲ. ಒಂದು ವೇಳೆ ನಾನು ಮದುವೆಯಾದರೂ ಮುಂದೆ ವಿಚ್ಛೇದನ ಪಡೆದುಕೊಳ್ಳಬೇಕಾಗುತ್ತದೆ. ಹೀಗಾಗಿ, ಆ ರಗಳೆ ಯಾಕೆ? ಮದುವೆ ಆಗುವಂತೆ ನನ್ನ ತಾಯಿ ಕೂಡ ಬಲವಂತ ಮಾಡ್ತಾರೆ. ಆದರೆ, ರಿಲೇಶನ್‌ಶಿಪ್‌ನಲ್ಲೇ ನನಗೆ ಹೊಂದಾಣಿಕೆ ಆಗಲಿಲ್ಲ. ಇನ್ನೂ ಮದುವೆಯಲ್ಲಿ ಆಗುತ್ತಾ? ಹೀಗಾಗಿ ನಾನು ಮದುವೆ ಆಗಲ್ಲ'' ಎಂದು ಹಿಂದೊಮ್ಮೆ ನೀಡಿದ್ದ ಸಂದರ್ಶನದಲ್ಲಿ ಚಾರ್ಮಿ ಕೌರ್ ಹೇಳಿದ್ದರು. ಅಂದ್ಹಾಗೆ, ನಟನೆ ಜೊತೆಗೆ ಚಿತ್ರ ನಿರ್ಮಾಣದಲ್ಲೂ ಚಾರ್ಮಿ ಕೌರ್ ತೊಡಗಿದ್ದಾರೆ. ಸದ್ಯ ವಿಜಯ್ ದೇವರಕೊಂಡ ಅಭಿನಯಿಸುತ್ತಿರುವ 'ಲೈಗರ್' ಚಿತ್ರವನ್ನು ಪುರಿ ಜಗನ್ನಾಥ್ ಜೊತೆಗೆ ಚಾರ್ಮಿ ಕೌರ್ ನಿರ್ಮಾಣ ಮಾಡುತ್ತಿದ್ದಾರೆ.