ಸ್ಯಾಂಡಲ್‌ವುಡ್‌ನ ಜನಪ್ರಿಯ ಡೈಲಾಗ್ ರೈಟರ್ ಗುರು ಕಶ್ಯಪ್ ಇನ್ನಿಲ್ಲ

ಕನ್ನಡ ಚಿತ್ರರಂಗದ ಜನಪ್ರಿಯ ಡೈಲಾಗ್ ರೈಟರ್ ಗುರು ಕಶ್ಯಪ್ ನಿಧನರಾಗಿದ್ದಾರೆ. ಸೋಮವಾರ ರಾತ್ರಿ ಗುರು ಕಶ್ಯಪ್ ಕೊನೆಯುಸಿರೆಳೆದಿದ್ದಾರೆ.

ಸ್ಯಾಂಡಲ್‌ವುಡ್‌ನ ಜನಪ್ರಿಯ ಡೈಲಾಗ್ ರೈಟರ್ ಗುರು ಕಶ್ಯಪ್ ಇನ್ನಿಲ್ಲ
Linkup
ಕನ್ನಡ ಚಿತ್ರರಂಗದ ಜನಪ್ರಿಯ ಡೈಲಾಗ್ ರೈಟರ್ ನಿಧನರಾಗಿದ್ದಾರೆ. ಸೋಮವಾರ (ಸೆಪ್ಟೆಂಬರ್ 13) ರಾತ್ರಿ ಗುರು ಕಶ್ಯಪ್ ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತದಿಂದ ಗುರು ಕಶ್ಯಪ್ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಆಸ್ಪತ್ರೆಗೆ ಹೋಗುವಾಗ ದಾರಿ ಮಧ್ಯದಲ್ಲೇ ಗುರು ಕಶ್ಯಪ್ ವಿಧಿವಶರಾದರು ಎಂಬ ಮಾಹಿತಿ ಲಭ್ಯವಾಗಿದೆ. ಅವರಿಗೆ 45 ವರ್ಷ ವಯಸ್ಸಾಗಿತ್ತು. 15ಕ್ಕೂ ಹೆಚ್ಚು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಯುವ ಬರಹಗಾರ ಡೈಲಾಗ್ ರೈಟರ್ ಗುರು ಕಶ್ಯಪ್ 15ಕ್ಕೂ ಹೆಚ್ಚು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದರು. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಸುಂದರಾಂಗ ಜಾಣ’, ರಮೇಶ್ ಅರವಿಂದ್ ನಟನೆಯ ‘ಪುಷ್ಪಕ ವಿಮಾನ’, ಪ್ರಿಯಾಂಕಾ ಉಪೇಂದ್ರ ನಟಿಸಿದ್ದ ‘ದೇವಕಿ’ ಮುಂತಾದ ಅನೇಕ ಸಿನಿಮಾಗಳಿಗೆ ಗುರು ಕಶ್ಯಪ್ ಸಂಭಾಷಣೆ ಬರೆದಿದ್ದರು. ಹಲವು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದ ಗುರು ಕಶ್ಯಪ್ ತಮ್ಮ ಪಂಚಿಂಗ್ ಡೈಲಾಗ್ಸ್‌ನಿಂದಲೇ ‌ನಲ್ಲಿ ಗುರುತಿಸಿಕೊಂಡಿದ್ದ ಗುರು ಕಶ್ಯಪ್‌ಗೆ ಭಾರಿ ಬೇಡಿಕೆ ಇತ್ತು. ಡಾಲಿ ಧನಂಜಯ್ ನಟನೆಯ ‘ಮಾನ್ಸೂನ್ ರಾಗ’, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ ‘ಬೈರಾಗಿ’, ‘ವೀಲ್ ಚೇರ್ ರೋಮಿಯೋ’ ಮುಂತಾದ ಅನೇಕ ಚಿತ್ರಗಳಿಗೆ ಗುರು ಕಶ್ಯಪ್ ಸಂಭಾಷಣೆ ಬರೆಯುತ್ತಿದ್ದರು. ಯಶಸ್ಸಿನ ಏಣಿಯನ್ನು ಹತ್ತುತ್ತಿರುವಾಗಲೇ ಗುರು ಕಶ್ಯಪ್ ಬಾರದ ಲೋಕಕ್ಕೆ ತೆರಳಿದ್ದಾರೆ. ಕಂಬನಿ ಮಿಡಿದ ಸ್ಯಾಂಡಲ್‌ವುಡ್ ಪತ್ನಿ ಹಾಗೂ ಪುತ್ರಿಯನ್ನು ಗುರು ಕಶ್ಯಪ್ ಅಗಲಿದ್ದಾರೆ. ಗುರು ಕಶ್ಯಪ್ ಅಕಾಲಿಕ ನಿಧನಕ್ಕೆ ಸ್ಯಾಂಡಲ್‌ವುಡ್ ಮಂದಿ ಆಘಾತಗೊಂಡಿದ್ದಾರೆ. ಗುರು ಕಶ್ಯಪ್ ನಿಧನಕ್ಕೆ ಕನ್ನಡ ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ. ‘’ನಂಬೋದಕ್ಕೆ ಸಾಧ್ಯವಾಗುತ್ತಿಲ್ಲ. ಗುರು ಕಶ್ಯಪ್ ಅತ್ಯಂತ ಪ್ರತಿಭಾವಂತ ಬರಹಗಾರ. ನಾನೂ ಅವರೊಂದಿಗೆ ಕೆಲ ಕಾಲ ಕೆಲಸ ಮಾಡಿದ್ದೆ. ಓರ್ವ ಪ್ರತಿಭಾವಂತನನ್ನು ನಾವು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ’’ ಎಂದು 'ಶಿವಾಜಿ ಸುರತ್ಕಲ್' ನಿರ್ದೇಶಕ ಆಕಾಶ್ ಶ್ರೀವತ್ಸ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ‘’ಇದು ಅತ್ಯಂತ ಆಘಾತಕಾರಿ ಸುದ್ದಿ. ಗುರು ಕಶ್ಯಪ್ ಅವರ ನಿಧನವಾರ್ತೆಯನ್ನು ನಂಬೋದಕ್ಕೆ ಆಗುತ್ತಿಲ್ಲ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ’’ ಎಂದು ನಟಿ ಆರೋಹಿ ನಾರಾಯಣ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ‘’ಗುರು ಕಶ್ಯಪ್ ದೇವರಂಥಾ ಮನುಷ್ಯ. ಒಬ್ಬ ಪ್ರತಿಭಾವಂತ ಸಂಭಾಷಣೆಕಾರನನ್ನು ಕನ್ನಡ ಚಿತ್ರರಂಗ ಕಳೆದುಕೊಂಡಿದೆ’’ ಎಂದು 'ಪುಷ್ಪಕ ವಿಮಾನ' ನಿರ್ದೇಶಕ ರವೀಂದ್ರನಾಥ್ ಫೇಸ್‌ಬುಕ್‌ನಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ. ನಟ ರಮೇಶ್ ಅರವಿಂದ್ ಟ್ವೀಟ್ ‘’ನಾನು ಕಂಡಂತ ಅತಿ ಪ್ರತಿಭಾವಂತರಲ್ಲಿ ಗುರು ಕಶ್ಯಪ್ ಕೂಡ ಒಬ್ಬರು. ‘ಪುಷ್ಷಕ ವಿಮಾನ’, ‘ಸುಂದರಾಂಗ ಜಾಣ’, 100 ಚಿತ್ರಗಳ ಡೈಲಾಗ್ ರೈಟರ್. ಸಂಜೆ ನಗುತ್ತಾ ನಾರ್ಮಲ್ ಆಗಿ ಇದ್ದವರು ರಾತ್ರಿ ಜೇವ ತೊರೆದಿದ್ದಾರೆ. ಒಬ್ಬ ಒಳ್ಳೆಯ ವ್ಯಕ್ತಿ, ಶ್ರೇಷ್ಠ ಬರಹಗಾರನನ್ನು ಕಳೆದುಕೊಂಡಿದ್ದೇವೆ. ಓಂ ಶಾಂತಿ’’ ಎಂದು ನಟ ರಮೇಶ್ ಅರವಿಂದ್ ಟ್ವೀಟ್ ಮಾಡಿದ್ದಾರೆ.