'ಮಾಫಿಯಾ' ಚಿತ್ರಕ್ಕಾಗಿ ಪ್ರಜ್ವಲ್ ಹೊಸ ಹೇರ್‌ಸ್ಟೈಲ್‌; ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿದ 'ಡೈನಾಮಿಕ್ ಪ್ರಿನ್ಸ್‌'

'ಡೈನಾಮಿಕ್ ಪ್ರಿನ್ಸ್‌' ಪ್ರಜ್ವಲ್ ದೇವರಾಜ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಈ ಮಧ್ಯೆ 'ವೀರಂ' ಶೂಟಿಂಗ್ ಮುಗಿಸಿರುವ ಅವರು, ಹೊಸದೊಂದು ಸಿನಿಮಾಕ್ಕಾಗಿ ಲುಕ್ ಬದಲಾಯಿಸಿಕೊಂಡಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ.

'ಮಾಫಿಯಾ' ಚಿತ್ರಕ್ಕಾಗಿ ಪ್ರಜ್ವಲ್ ಹೊಸ ಹೇರ್‌ಸ್ಟೈಲ್‌; ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿದ 'ಡೈನಾಮಿಕ್ ಪ್ರಿನ್ಸ್‌'
Linkup
'ಡೈನಾಮಿಕ್ ಪ್ರಿನ್ಸ್‌' ಪ್ರಜ್ವಲ್ ದೇವರಾಜ್ ಅವರು 'ವೀರಂ' ಚಿತ್ರಕ್ಕಾಗಿ ಉದ್ದ ಕೂದಲು ಬಿಟ್ಟಿದ್ದರು. ಅಲ್ಲದೇ, ಎರಡು ವರ್ಷಗಳಿಂದ ಅವರು ಕೂದಲಿಗೆ ಕತ್ತರಿ ಹಾಕಿರಲಿಲ್ಲ. ಆದರೆ ಇದೀಗ ಪ್ರಜ್ವಲ್ ಹೊಸದೊಂದು ಸಿನಿಮಾವನ್ನು ಒಪ್ಪಿಕೊಂಡಿದ್ದು, ಅದರ ಶೂಟಿಂಗ್ ಡಿ.2ರಿಂದ ಶುರುವಾಗಲಿದೆ. ವಿಶೇಷವೆಂದರೆ, ಆ ಸಿನಿಮಾಕ್ಕೆ '' ಎಂದು ಹೆಸರು ಇಡಲಾಗಿದ್ದು, ಅದರಲ್ಲಿ ಪ್ರಜ್ವಲ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆದ್ದರಿಂದ ಉದ್ದ ಇದ್ದ ತಮ್ಮ ಕೂದಲಿಗೆ ಕತ್ತರಿ ಹಾಕಿ, ಶಾರ್ಟ್‌ ಹೇರ್‌ಕಟ್‌ನಲ್ಲಿ ಪ್ರಜ್ವಲ್‌ ಮಿಂಚುತ್ತಿದ್ದಾರೆ. ಕೂದಲು ದಾನ ಮಾಡಿದ ಡೈನಾಮಿಕ್ ಪ್ರಿನ್ಸ್ತಮ್ಮ ಉದ್ದದ ಕೂದಲನ್ನು ಪ್ರಜ್ವಲ್ ದಾನ ಮಾಡಿದ್ದಾರೆ. ಕ್ಯಾನ್ಸರ್ ಕಾಯಿಲೆಯಿಂದ ಕೂದಲು ಕಳೆದುಕೊಂಡವರಿಗೆ ತಮ್ಮ ಕೂದಲನ್ನು ಅವರು ದಾನ ಮಾಡಿದ್ದಾರೆ. ಪ್ರಜ್ವಲ್‌ರ ಈ ನಡೆಯನ್ನು ಅನೇಕರು ಹೊಗಳಿದ್ದಾರೆ. ಅಂದಹಾಗೆ, 'ಮಾಫಿಯಾ' ಚಿತ್ರವು ಮಾನವ ಕಳ್ಳಸಾಗಾಣಿಕೆ ಕುರಿತ ಥ್ರಿಲ್ಲರ್ ಕಥೆಯನ್ನು ಹೊಂದಿದೆ. 'ಮಮ್ಮಿ', 'ದೇವಕಿ'ಯಂತಹ ವಿಭಿನ್ನ ಸಿನಿಮಾಗಳನ್ನು ಮಾಡಿ, ಗಮನಸೆಳೆದಿರುವ ಇದರ ನಿರ್ದೇಶನ ಮಾಡುತ್ತಿದ್ದಾರೆ. ಡಿ.2ರಂದು ಬೆಂಗಳೂರಿನಲ್ಲಿ ಸಿನಿಮಾಕ್ಕೆ ಮುಹೂರ್ತ ನೆರವೇರಲಿದೆ. ಚಿತ್ರದ ಬಗ್ಗೆ ನಿರ್ದೇಶಕರು ಹೇಳಿದ್ದೇನು?ಈ ಸಿನಿಮಾವನ್ನು 'ಅಂಬಿ ನಿಂಗ್ ವಯಸ್ಸಾಯ್ತೋ' ಖ್ಯಾತಿಯ ಗುರುದತ್ ಗಾಣಿಗ ನಿರ್ದೇಶನ ಮಾಡಬೇಕಿತ್ತು. ನಂತರ ನಿರ್ದೇಶಕರು ಬದಲಾಗಿದ್ದಾರೆ. 'ಮಾಫಿಯಾ' ಬಗ್ಗೆ ಮಾತನಾಡುವ ನಿರ್ದೇಶಕ ಲೋಹಿತ್‌, 'ಚಿತ್ರದ ಒನ್‌ಲೈನ್ ಕಥೆಯನ್ನು ಉಳಿಸಿಕೊಂಡು, ಚಿತ್ರಕಥೆಯನ್ನು ಬದಲಾವಣೆ ಮಾಡಿಕೊಳ್ಳುವೆ. ನನ್ನ ಶೈಲಿಯಲ್ಲಿ ಸಿನಿಮಾದ ಮೇಕಿಂಗ್ ಇರಲಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಹೊಂದಿದೆ. ಅದನ್ನು ಬಹಳ ರೋಚಕವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಲಿದ್ದೇನೆ. ಬೆಂಗಳೂರು, ಮೈಸೂರು ಮತ್ತು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ನಡೆಯಲಿದೆ' ಎಂದು ಮಾಹಿತಿ ನೀಡುತ್ತಾರೆ. ಪ್ರಜ್ವಲ್‌ಗೆ ನಾಯಕಿ 'ಮಾಫಿಯಾ'ಗೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿದ್ದು, 'ಟಗರು', 'ಸಲಗ' ಖ್ಯಾತಿಯ ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ. ತರುಣ್ ಈ ಚಿತ್ರದ ಛಾಯಾಗ್ರಾಹಕರು. ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಪ್ರಜ್ವಲ್‌ ದೇವರಾಜ್‌ಗೆ ನಾಯಕಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಳ್ಳಲಿದ್ದಾರೆ. ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್. ಬಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದ ಪೋಸ್ಟರ್ ಅನ್ನು ಕೆಲ ತಿಂಗಳ ಹಿಂದೆ ಶಿವರಾಜ್‌ಕುಮಾರ್, ವಿಜಯ್ ಸೇತುಪತಿ ಲಾಂಚ್ ಮಾಡಿ, ಪ್ರಜ್ವಲ್‌ಗೆ ಶುಭ ಹಾರೈಸಿದ್ದರು.