ಗಮನಿಸಿ: ಪ್ಲಾರ್ಟ್‌ಫಾರ್ಮ್‌ ಟಿಕೆಟ್‌ ಇದ್ದರೆ ಸಾಕು ರೈಲಿನಲ್ಲಿ ಪ್ರಯಾಣಿಸಬಹುದು, ಹೇಗೆ?

ರೈಲು ನಿಲ್ದಾಣದಲ್ಲಿ ನಿಗದಿತ ಸಮಯದವರೆಗೆ ಇರಲು ಮಾತ್ರ ಬಳಕೆಯಾಗುತ್ತಿದ್ದ ಪ್ಲಾರ್ಟ್‌ಫಾರ್ಮ್‌ ಟಿಕೆಟ್‌, ಇನ್ನು ಮುಂದೆ ತುರ್ತಿನ ರೈಲು ಪ್ರಯಾಣಕ್ಕೂ ಬಳಕೆಯಾಗಲಿದೆ. ಮುಂಗಡವಾಗಿಯೇ ಟಿಕೆಟ್‌ಬುಕ್‌ ಮಾಡದವರು, ಟಿಕೆಟ್‌ ಖರೀದಿಸದವರು ರೈಲು ಹತ್ತಿ ಟಿಟಿಯಿಂದ ಟಿಕೆಟ್‌ ಪಡೆಯುವ ಸೌಲಭ್ಯವನ್ನು ರೈಲ್ವೆ ಇಲಾಖೆ ನೀಡಿದೆ.

ಗಮನಿಸಿ: ಪ್ಲಾರ್ಟ್‌ಫಾರ್ಮ್‌ ಟಿಕೆಟ್‌ ಇದ್ದರೆ ಸಾಕು ರೈಲಿನಲ್ಲಿ ಪ್ರಯಾಣಿಸಬಹುದು, ಹೇಗೆ?
Linkup
ಹೊಸದಿಲ್ಲಿ: ಇದುವರೆಗೆ ನಿಲ್ದಾಣದಲ್ಲಿ ನಿಗದಿತ ಸಮಯದವರೆಗೆ ಇರಲು ಮಾತ್ರ ಬಳಕೆಯಾಗುತ್ತಿದ್ದ , ಇನ್ನು ಮುಂದೆ ತುರ್ತಿನ ರೈಲು ಪ್ರಯಾಣಕ್ಕೂ ಬಳಕೆಯಾಗಲಿದೆ. ಮುಂಗಡವಾಗಿಯೇ ಟಿಕೆಟ್‌ಬುಕ್‌ ಮಾಡದವರು, ಟಿಕೆಟ್‌ ಖರೀದಿಸದವರು ರೈಲು ಹತ್ತಿ ಟಿಟಿಯಿಂದ ಟಿಕೆಟ್‌ ಪಡೆಯುವ ಸೌಲಭ್ಯವನ್ನು ರೈಲ್ವೆ ಇಲಾಖೆ ನೀಡಿದೆ. ಮುಂಗಡವಾಗಿ ಟಿಕೆಟ್‌ ಖರೀದಿಸದೆ, ಅವಸರದಲ್ಲಿ ರೈಲು ನಿಲ್ದಾಣಕ್ಕೆ ಬಂದು, ಟಿಕೆಟ್‌ ಕೌಂಟರ್‌ನಲ್ಲಿ ಹೆಚ್ಚಿನ ಜನರುಳ್ಳ ಸಾಲಿನಲ್ಲಿ ನಿಂತು ಟಿಕೆಟ್‌ ಖರೀದಿಸಲು ಸಾಧ್ಯವಾಗದವರು ಈ ಸವಲತ್ತನ್ನು ಬಳಸಿಕೊಳ್ಳಬಹುದಾಗಿದೆ. ಕೊನೆ ಘಳಿಗೆ ನಿಲ್ದಾಣಕ್ಕೆ ಬಂದು ಟಿಕಿಟ್‌ ಖರೀದಿಸುವ ತರಾತುರಿಯಲ್ಲಿ ರೈಲು ತಪ್ಪಿಸಿಕೊಳ್ಳುವುದನ್ನು ತಡೆಯಲು ಹೊಸ ಸೌಲಭ್ಯ ಕಲ್ಪಿಸಲಾಗಿದೆ.