ಕೋವಿಡ್‌ ಮೂರನೇ ಅಲೆಯಲ್ಲಿ ಡೆಲ್ಟಾ ವೈರಸ್‌ ಆಕ್ರಮಣ: ಲಸಿಕೆಗೂ ಜಗ್ಗಲ್ಲ ಈ ವೈರಸ್‌!

ಶಕ್ತಿಶಾಲಿ ಹಾಗೂ ಅತೀ ಹೆಚ್ಚು ರೋಗ ಪ್ರವರ್ಧಕ ಶಕ್ತಿ ಹೊಂದಿರುವ ಡೆಲ್ಟಾ ಕೊರೊನಾ ವೈರಸ್‌ ಮೂರನೇ ಅಲೆಯಲ್ಲಿ ಹೆಚ್ಚು ಪ್ರಾಣಹಾನಿ ತರುವ ಸಂಭವವಿದೆ. ಕೊರನಾ ವೈರಸ್‌ ಸ್ಪೈಕ್‌ ಪ್ರೋಟಿನ್‌ ನಲ್ಲಿ 12 ಬಾರಿ ರೂಪಾಂತರ ಆಗಿದ್ದು, ಲಸಿಕೆಗೂ ಜಗ್ಗದಾಗಿದೆ.

ಕೋವಿಡ್‌ ಮೂರನೇ ಅಲೆಯಲ್ಲಿ ಡೆಲ್ಟಾ ವೈರಸ್‌ ಆಕ್ರಮಣ: ಲಸಿಕೆಗೂ ಜಗ್ಗಲ್ಲ ಈ ವೈರಸ್‌!
Linkup
ಶಿವಾನಂದ ಹಿರೇಮಠ ಬೆಂಗಳೂರು ಶಕ್ತಿಶಾಲಿ ಹಾಗೂ ಅತೀ ಹೆಚ್ಚು ರೋಗ ಪ್ರವರ್ಧಕ ಶಕ್ತಿ ಹೊಂದಿರುವ ಡೆಲ್ಟಾ ಕೊರೊನಾ ವೈರಸ್‌ ಮೂರನೇ ಅಲೆಯಲ್ಲಿ ಹೆಚ್ಚು ಪ್ರಾಣಹಾನಿ ತರುವ ಸಂಭವವಿದೆ. ಕೊರನಾ ವೈರಸ್‌ ಸ್ಪೈಕ್‌ ಪ್ರೋಟಿನ್‌ ನಲ್ಲಿ 12 ಬಾರಿ ರೂಪಾಂತರ ಆಗಿರುವುದರಿಂದ ಹೆಚ್ಚು ಪ್ರತಿರೊಧಕ ಶಕ್ತಿ ಸಹಜವಾಗಿ ಅಭಿವೃದ್ಧಿಗೊಂಡು ಯುವಕರನ್ನು, ಮಕ್ಕಳನ್ನು ಅತೀ ಹೆಚ್ಚು ಬಾಧಿಸಲಿದೆ ಎಂದು ವೈರಾಣು ತಜ್ಞರು ಎಚ್ಚರಿಸಿದ್ದಾರೆ. ಎರಡನೇ ಅಲೆಯಲ್ಲಿ ಹೆಚ್ಚಾಗಿ ಯುವಕರನ್ನು ಬಾಧಿಸಲು, ಸಾವಿನ ಪ್ರಮಾಣ ಹೆಚ್ಚಾಗಲು ಇದೇ ವೈರಸ್‌ ಇರಬಹುದು ಎಂದು ಶಂಕಿಸಲಾಗಿದೆ. ಡೆಲ್ಟಾ ಹಬ್ಬುವಿಕೆ ನಿಯಂತ್ರಣ, ವೈರಸ್‌ ತಗುಲಿದ ಸೋಂಕಿತರ ಚಿಕಿತ್ಸಾ ಕ್ರಮಗಳ ಕುರಿತು ಏಮ್ಸ್‌, ಐಸಿಎಂಆರ್‌ ಸೇರಿದಂತೆ ದೇಶದ ಇತರೆ ಕೇಂದ್ರಗಳಲ್ಲಿ ಸಂಶೋಧನೆಗಳು ನಡೆಸುತ್ತಿವೆ. ಕೊರೊನಾ ವೈರಸ್‌ ರೂಪಾಂತರ, ಮ್ಯೂಟೆಂಟ್‌ಗಳ ಅಸಹಜ ಕಣ ವಿಭಜನೆಯಿಂದ ವಿಶ್ವದಲ್ಲಿ ಈವರೆಗೂ 10 ಬಗೆಯ ಕೊರೊನಾ ವೈರಸ್‌ ವಿಧಗಳು ವೃದ್ಧಿಗೊಂಡಿದ್ದು, ಈ ಹತ್ತರಲ್ಲೂ'ಡೆಲ್ಟಾ' ಅತ್ಯಂತ ಆಕ್ರಮಣಕಾರಿ. ಪರೀಕ್ಷೆ: ಡೆಲ್ಟಾ ನಿಯಂತ್ರಿಸಲು ವೈರಾಣು ತಜ್ಞರು ಹಲವು ಸಂಶೋಧನೆ ಕೈಗೊಂಡಿದ್ದಾರೆ. ಸೋಂಕಿತನಿಗೆ ತಗುಲಿದ ವೈರಸ್‌ ತಿಳಿದು ಚಿಕಿತ್ಸೆ ನೀಡಲು ಸ್ವ್ಯಾಬ್‌ ಮಾದರಿಯನ್ನು ಡಬ್ಲ್ಯುಜಿಎಸ್‌ (ವ್ಹೋಲ್‌ ಜಿನೋಮೋ ಸಿಕ್ವೆನ್ಸಸ್‌) ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಬ್ಲ್ಯಾಕ್‌ ಫಂಗಸ್‌ಗೂ ಇದೇ ವೈರಸ್‌ ಕಾರಣ ಇರಬಹುದು ಎಂದು ಶಂಕೆ ಇದೆ. 3ನೇ ಅಲೆಯಲ್ಲಿ ಡೆಲ್ಟಾ ಸೋಂಕಿತನಿಗೆ ಬ್ಲ್ಯಾಕ್‌ ಫಂಗಸ್‌ ಬಗ್ಗೆ ಮುಂಜಾಗ್ರತೆ, ಜಿಂಕ್‌ ಮತ್ತು ಸ್ಟಿರಾಯ್ಡ್‌ ಅಧಿಕ ಪ್ರಮಾಣದಲ್ಲಿ ಬಳಸದಂತೆ ಎಚ್ಚರಿಕೆ, ಅಧಿಕ ಪ್ರಮಾಣದ ಆಕ್ಸಿಜನ್‌ ಬಳಕೆಗೆ ಸಲಹೆ ನೀಡಬೇಕು ಎಂದು ವೈರಾಣು ತಜ್ಞರು ತಿಳಿಸಿದ್ದಾರೆ. ಡಬ್ಲ್ಯುಜಿಎಸ್‌ ವೈರಸ್‌ ವಿಧವನ್ನು ತಿಳಿದುಕೊಳ್ಳಲು ಬಳಸುವ ವೈದ್ಯಕೀಯ ಉಪಕರಣವೇ ಡಬ್ಲ್ಯುಜಿಎಸ್‌. ಡಬ್ಲ್ಯುಜಿಎಸ್‌ ಸ್ವ್ಯಾಬ್‌ ಟೆಸ್ಟಿಂಗ್‌ ನಲ್ಲಿ ಯಾವ ವಿಧದ ವೈರಸ್‌ ತಗುಲಿದೆ ಎಂಬುದು ಸ್ಪಷ್ಟವಾಗಿ ತಿಳಿದುಕೊಳ್ಳಬಹುದು. ರಾಜ್ಯದಲ್ಲಿ ಬೆಂಗಳೂರಿನ ನಿಮ್ಹಾನ್ಸ್‌ ಮತ್ತು ನ್ಯಾಷನಲ್‌ ಸೆಂಟರ್‌ ಫಾರ್‌ ಬಯೋಲಾಜಿಕಲ್‌ ಸೈನ್ಸ್‌ ಕೇಂದ್ರಗಳಲ್ಲಿ ಮಾತ್ರ ಡಬ್ಲ್ಯುಜಿಎಸ್‌ ಉಪಕರಣ ಲಭ್ಯವಿದೆ. ಹೀಗಾಗಿ ದಿಲ್ಲಿಯ ಏಮ್ಸ್‌ಗೂ ಸ್ವ್ಯಾಬ್‌ ಸ್ಯಾಂಪಲ್‌ ಕಳುಹಿಸಲಾಗುತ್ತಿದೆ. ತೀವ್ರಗೊಂಡ ಸಂಶೋಧನೆ: ಮೊದಲ ಅಲೆಗೆ ಹೋಲಿಸಿದರೆ ಎರಡನೇ ಅಲೆಯಲ್ಲಿ ಅತೀ ಹೆಚ್ಚು ಯುವಕರ ಶ್ವಾಸಕೋಶಕ್ಕೆ ಡೆಲ್ಟಾ ಹಾನಿ ಉಂಟು ಮಾಡಿದೆ ಎಂದು ವರದಿಯಾಗಿದೆ. ಮೂರನೇ ಅಲೆಯಲ್ಲಿ ಮತ್ತಷ್ಟು ರೂಪಾಂತರಗೊಂಡು ಮಕ್ಕಳಲ್ಲಿ ಹರಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂಬುದಾಗಿ ತಜ್ಞರು ತಿಳಿಸಿದ್ದಾರೆ. ವಿಶ್ವದ 60 ರಾಷ್ಟ್ರಗಳಲ್ಲಿ ಈ ವೈರಸ್‌ ಕಂಡು ಬಂದಿದೆ. ಎರಡು ವಿಧ ಪತ್ತೆ: ಕೋವಿಡ್‌ ಮೊದಲನೇ ಮತ್ತು ಎರಡನೇ ಅಲೆ ಒಳಗೊಂಡಂತೆ ಭಾರತದಲ್ಲಿ ಡೆಲ್ಟಾ(ಬಿ.1617.2) ಹಾಗೂ ಕಪ್ಪಾ(ಬಿ.1.617.1) ಎರಡು ವಿಧದ ಕೊರೊನಾ ವೈರಸ್‌ ಪತ್ತೆಯಾಗಿವೆ. ನಿರಂತರ ಹರಡುವಿಕೆ ಜತೆಗೆ ಲಸಿಕೆ ವಿರುದ್ಧ ಗಮನಾರ್ಹ ಪ್ರತಿರೋಧಕ ಶಕ್ತಿ ಹೊಂದಿವೆ ಎನ್ನಲಾಗಿದೆ. ಡೆಲ್ಟಾ ವಿಧದಲ್ಲಿ ರೂಪಾಂತರಗೊಂಡಿರುವ ಮತ್ತೊಂದು ವೈರಸ್‌ ಅನ್ನು 'ಟಿ478ಕೆ' ಎಂದು ಹೆಸರಿಸಲಾಗಿದೆ.
ಕೊರೊನಾ ವಿಧ ವೈಜ್ಞಾನಿಕ ಕೋಡ್‌ ಪತ್ತೆಯಾದ ದೇಶ ಗುಣ
ಅಲ್ಫಾ ಬಿ.1.1.7 ಯುಕೆ ಮೂಲ ವೈರಸ್‌ಗಿಂತ ವೇಗ ಹಬ್ಬುವಿಕೆ.
ಬೆಟಾ ಬಿ.1.351 ಯುಎಸ್‌ಎ ಹೆಚ್ಚು ಪ್ರತಿರೋಧ ತೋರುತ್ತದೆ
ಗಾಮಾ ಪಿ.1 ಬ್ರೆಜಿಲ್‌ ಪ್ರತಿರೋಧ ಮತ್ತು ವರ್ಧಿತ ಸಾಂಕ್ರಾಮಿಕತೆ
ಡೆಲ್ಟಾ ಬಿ.1617.2 ಭಾರತ ಹೆಚ್ಚು ಮತ್ತು ನಿರಂತರ ಹರಡುವಿಕೆ, ಗಮನಾರ್ಹ ಪ್ರತಿರೋಧ
ಎಪ್ಸಿಲೋನ್‌ ಬಿ.1.427/ಬಿ.1.429 ಯುಎಸ್‌ ಹೆಚ್ಚು ಹರಡುವ ಶಂಕೆ
ಜೆಟಾ ಪಿ.2 ಬ್ರೆಜಿಲ್‌ ಪ್ರತಿರೋಧ ಗುಣ ಹೊಂದಿರುವ ಶಂಕೆ
ಇಟಾ ಬಿ.1.525 ವಿವಿಧ ದೇಶ ಲಸಿಕೆಗೆ ಪ್ರತಿರೋಧ ಶಕ್ತಿ
ಥೇಟಾ ಪಿ.3 ಫಿಲಿಪೈನ್ಸ್‌ ರೂಪಾಂತರ
ಇಓಟಾ ಬಿ.1.526 ಯುಎಸ್‌ ಹೆಚ್ಚು ಪ್ರತಿರೋಧ ತೋರುತ್ತದೆ
ಕಪ್ಪಾ ಬಿ.1.617.1 ಭಾರತ ಅತೀ ಹೆಚ್ಚು ಪ್ರತಿರೋಧಕ ಮತ್ತು ಕೂಡಲೇ ಹರಡುತ್ತದೆ.
ಡೆಲ್ಟಾ ರೂಪಾಂತರ, ಮೂರನೇ ಅಲೆಯ ದುಷ್ಪರಿಣಾಮಗಳ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಈ ವೈರಸ್‌ ನಿಯಂತ್ರಣಕ್ಕೆ ವಿಶ್ವ ಆರೋಗ್ಯ ಸಂಸ್ಥೆಯೂ ಗಂಭೀರ ಪ್ರಯತ್ನ ನಡೆಸುತ್ತಿದೆ. ಇದನ್ನು ನಿಯಂತ್ರಿಸಬಹುದೇ ವಿನಹ ಶಾಶ್ವತವಾಗಿ ನಿರ್ನಾಮ ಮಾಡಲು ಸಾಧ್ಯವಿಲ್ಲ. ಮಕ್ಕಳಲ್ಲಿಡೆಲ್ಟಾ ಕಾಣಿಸಿಕೊಂಡರೆ ಹೆಚ್ಚು ಅಪಾಯಕಾರಿ. - ಡಾ.ಅಂಬಿಕಾ, ಮುಖ್ಯಸ್ಥರು. ಸೂಕ್ಷ್ಮ ಜೀವಶಾಸ್ತ್ರ ವಿಭಾಗ, ಬೆಂಗಳೂರು ಮೆಡಿಕಲ್‌ ಕಾಲೇಜು. ಸಾಮಾನ್ಯ ಕೊರೊನಾ ವೈರಸ್‌ಗಿಂತ ಶೇ.60% ರಷ್ಟು ಹೆಚ್ಚು ಡೆಲ್ಟಾ ಹರಡುವ ಸಾಧ್ಯತೆ ಇದೆ. ಪ್ರತಿರೋಧಕ ಶಕ್ತಿ ಹೊಂದಿದೆ. ಇದರ ಅಡ್ಡಪರಿಣಾಮಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಲಸಿಕೆ ಪಡೆದರೂ ಸೋಂಕು ತಗುಲಬಹುದು. ಆದರೆ ಸೋಂಕು ಶ್ವಾಸಕೋಶಕ್ಕೆ ತಗುಲದಂತೆ ಲಸಿಕೆ ಕಾರ್ಯ ನಿರ್ವಹಿಸುತ್ತದೆ. - ಡಾ. ರವಿ. ವೈರಾಣು ತಜ್ಞರು, ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸದಸ್ಯರು