'ಕೋಟಿಗೊಬ್ಬ 3' ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ದೂರು ದಾಖಲಿಸಿದ ಸಿನಿಮಾ ವಿತರಕ ಖಾಜಾಪೀರ್

ನಟ ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ 3' ಸಿನಿಮಾ ಅಂದುಕೊಂಡ ದಿನ ರಿಲೀಸ್ ಆಗಲಿಲ್ಲ. ಈ ಸಿನಿಮಾ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ವಿತರಕ ಖಾಜಾಪೀರ್ ಅವರು ಸೂರಪ್ಪ ಬಾಬು ವಿರುದ್ಧ ದೂರು ದಾಖಲಿಸಿದ್ದಾರೆ.

'ಕೋಟಿಗೊಬ್ಬ 3' ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ದೂರು ದಾಖಲಿಸಿದ ಸಿನಿಮಾ ವಿತರಕ ಖಾಜಾಪೀರ್
Linkup
'' ಸಿನಿಮಾ ವಿವಾದ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ವಿವಾದವು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಚಿತ್ರದುರ್ಗ ಸಿನಿಮಾ ವಿತರಕ ಖಾಜಾಪೀರ್‌ಗೆ ನಿರ್ಮಾಪಕ ಫೋನ್ ಮೂಲಕ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವಿತ್ತು, ಅದರ ಆಡಿಯೋ ಕ್ಲಿಪ್ ಕೂಡ ಸಿಕ್ಕಿದೆ. ಈಗ ಚಿತ್ರದುರ್ಗದ ನಗರ ಪೊಲೀಸ್ ಠಾಣೆಯಲ್ಲಿ ಖಾಜಾಪೀರ್ ಅವರು ಸೂರಪ್ಪ ಬಾಬು (ಎಂ ಬಿ ಬಾಬು) ವಿರುದ್ಧ ದೂರು ದಾಖಲಿಸಿದ್ದಾರೆ. ಐಪಿಸಿ ಕಲಂ 504, 506 ಅಡಿಯಲ್ಲಿ ಪೊಲೀಸರು ಸೂರಪ್ಪ ಬಾಬು ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ. ಸ್ಟಾರ್ ಸಿನಿಮಾ ಅಂದುಕೊಂಡ ದಿನದಂದೇ ರಿಲೀಸ್ ಆಗಲಿಲ್ಲ ಅಕ್ಟೋಬರ್ 14ರಂದು ಅಭಿನಯದ 'ಕೋಟಿಗೊಬ್ಬ 3' ಸಿನಿಮಾ ರಿಲೀಸ್ ಆಗಬೇಕಿತ್ತು. ಬೆಳಗ್ಗೆ ಬೇಗ ಎದ್ದು 6 ಗಂಟೆಗೆ ಮಾರ್ನಿಂಗ್ ಶೋ ನೋಡಿ ಸಂಭ್ರಮಿಸಬೇಕು ಎಂದು ಕಿಚ್ಚ ಸುದೀಪ್ ಅಭಿಮಾನಿಗಳು ಖುಷಿಯಿಂದ ಇದ್ದರು. ಆದರೆ 6 ಗಂಟೆ ಶೋ ಅಲ್ಲ, 10 ಶೋ ಕೂಡ ಎಲ್ಲಿಯೂ ಪ್ರಸಾರ ಆಗಲಿಲ್ಲ. ಮೊದಲಿಗೆ ಸ್ಟಾರ್ ನಟನ ಸಿನಿಮಾವೊಂದು ರಿಲೀಸ್ ಡೇಟ್ ಘೋಷಣೆ ಆಗಿ ಬೆಳಗ್ಗೆಯಾದರೂ ಕೂಡ ತೆರೆ ಕಾಣದಿರೋದು ಎಲ್ಲರಿಗೂ ಶಾಕ್ ನೀಡಿತ್ತು. ಕಿಚ್ಚ ಸುದೀಪ್ ಕೇವಲ ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯಲ್ಲಿಯೂ ನಟನಾಗಿ ಗುರುತಿಸಿಕೊಂಡಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಕಿಚ್ಚ ಸುದೀಪ್‌ಗೆ ಐಡೆಂಟಿಟಿ ಇದೆ. ವಿತರಕರು ಮಾಡಿದ ಕೆಲಸದಿಂದ 7-8 ಕೋಟಿ ರೂ. ನಷ್ಟ ಆಗಿದೆ ಎಂದ ಸೂರಪ್ಪ ಬಾಬು ಯಾಕೆ 'ಕೋಟಿಗೊಬ್ಬ 3' ಸಿನಿಮಾ ರಿಲೀಸ್ ಆಗಲಿಲ್ಲ ಎಂಬ ಪ್ರಶ್ನೆ ಬಂದಾಗ ಆ ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಅವರು "ಸಿನಿಮಾ ರಿಲೀಸ್ ಮಾಡದಿರಲು ಕೆಲವರು ಷಡ್ಯಂತ್ರ ಮಾಡಿದ್ದಾರೆ, ಅದರ ಹಿಂದೆ ಹಲವಾರು ಕಾರಣಗಳಿವೆ, ಅದು ಕಿಚ್ಚ ಸುದೀಪ್‌ಗೂ ಗೊತ್ತು. ವಿತರಕರು ಮೋಸ ಮಾಡಿದ್ದಾರೆ" ಎಂದು ಸ್ಪಷ್ಟನೆ ನೀಡಿದ್ದರು. "ವಿತರಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ. ಮಾನನಷ್ಟ ಮೊಕದ್ದಮೆ ದಾಖಲು ಮಾಡುತ್ತೇನೆ. ವಿತರಕರಿಂದ ನನಗೆ 7-10 ಕೋಟಿ ನಷ್ಟ ಉಂಟಾಗಿದೆ" ಎಂದು ಕೂಡ ಸೂರಪ್ಪ ಬಾಬು ಹೇಳಿದ್ದರು. ವಿತರಕ ಖಾಜಾಪೀರ್ ಹೇಳಿದ್ದೇನು? "ಸೂರಪ್ಪ ಬಾಬು ನಮಗೆ ಬೆದರಿಕೆ, ಧಮ್ಕಿ ಹಾಕಿದ್ದಾರೆ. ಅವರು ತುಂಬಾ ಕೆಟ್ಟ ಭಾಷೆಯಲ್ಲಿ ಮಾತನಾಡಿದ್ದಾರೆ. ನನಗೆ, ನನ್ನ ಕುಟುಂಬಕ್ಕೆ ಏನಾದರೂ ತೊಂದರೆ ಆದರೆ ಅದಕ್ಕೆ ‘ಕೋಟಿಗೊಬ್ಬ 3’ ಸಿನಿಮಾ ನಿರ್ಮಾಪಕ ಸೂರಪ್ಪ ಬಾಬು ಅವರೇ ಕಾರಣ" ಎಂದು ವಿತರಕ ಖಾಜಾಪೀರ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಈಗ ಅಂತೂ ಈ ಮಾತಿನ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕಿಚ್ಚ ಸುದೀಪ್ ಹೇಳಿದ್ದೇನು? ಕಿಚ್ಚ ಸುದೀಪ್ ಕೂಡ ಈ ವಿವಾದದ ಬಗ್ಗೆ ಆರಂಭದಲ್ಲಿ ಟ್ವೀಟ್ ಮಾಡಿ ಮಾತನಾಡಿದ್ದರು. ಮಾಧ್ಯಮಗಳಿಗೆ ಸಂದರ್ಶನ ನೀಡುವಾಗ ಕಿಚ್ಚ ಸುದೀಪ್, "ಸೂರಪ್ಪ ಬಾಬು ಅದ್ಭುತವಾದ ಸಿನಿಮಾ ಮಾಡಿದ್ದಾರೆ. ಬಾಬು ಅವರು ಸಹಾಯ ಮಾಡುವ ಕೈಗಳನ್ನು ಅವರು ಅಕ್ಕ-ಪಕ್ಕ ಬೆಳೆಸಿಕೊಳ್ಳಬೇಕು. ಕೋಟಿಗೊಬ್ಬ 3 ಸಿನಿಮಾಗೆ ಸಂಬಂಧ ಪಡದಿರೋರೆಲ್ಲ ಇಲ್ಲಿ ಮಧ್ಯೆ ಬಂದಿದ್ದಾರೆ. ಹಿರಿಯ ವಿತರಕರೊಬ್ಬರು ಭೂಮಿಕಾ ಥಿಯೇಟರ್ ಕೊಡಬೇಡಿ ಅಂತಲೂ ಫೋನ್ ಮಾಡಿದ್ದಾರೆ. ಆಡಿಯೋ ಕ್ಲಿಪ್ಪಿಂಗ್ಸ್ ಎಲ್ಲ ಇದೆ. ಅದರ ಪ್ರಕಾರ ಮುಂದುವರೆಯುತ್ತೇವೆ" ಎಂದಿದ್ದಾರೆ.