ನಟಿ ಅನು ಪ್ರಭಾಕರ್‌ಗೆ ಮಾತ್ರ ಕೊರೊನಾ ಪಾಸಿಟಿವ್; ಮನೆಯವರಿಗೆ ಯಾಕಿಲ್ಲ? ಅಸಲಿ ವಿಚಾರ ಬಿಚ್ಚಿಟ್ಟ ನಟಿ!

ಸ್ಯಾಂಡಲ್‌ವುಡ್ ನಟಿ ಅನು ಪ್ರಭಾಕರ್ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಆದರೆ ಅವರ ಮನೆಯವರಿಗೆ ಕೊರೊನಾ ನೆಗೆಟಿವ್ ಬಂದಿದೆ. ಅದಕ್ಕೆ ಕಾರಣ ಏನು? ಈ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ

ನಟಿ ಅನು ಪ್ರಭಾಕರ್‌ಗೆ ಮಾತ್ರ ಕೊರೊನಾ ಪಾಸಿಟಿವ್; ಮನೆಯವರಿಗೆ ಯಾಕಿಲ್ಲ? ಅಸಲಿ ವಿಚಾರ ಬಿಚ್ಚಿಟ್ಟ ನಟಿ!
Linkup
ಸ್ಯಾಂಡಲ್‌ವುಡ್ ನಟಿ ಅವರಿಗೆ ಬಂದಿದೆ. ಆದರೆ ಅವರ ಮನೆಯಲ್ಲಿ ಉಳಿದವರಿಗೆ ಕೊರೊನಾ ಇಲ್ಲ. ಸಾಕಷ್ಟು ಮುಂಜಾಗ್ರತೆ ವಹಿಸಿದರೂ ಕೂಡ ಅನು ಪ್ರಭಾಕರ್‌ಗೆ ಯಾಕೆ ಕೊರೊನಾ ಬಂತು? ಅದರಲ್ಲೂ ಅವರಿಗೆ ಮಾತ್ರ ಯಾಕೆ ಬಂತು? ಮುಂತಾದ ಪ್ರಶ್ನೆಗಳಿಗೆ ಅನು ಪ್ರಭಾಕರ್ ಉತ್ತರ ನೀಡಿದ್ದಾರೆ. ಕೊರೊನಾ ಸೋಂಕು ತಡೆಗಟ್ಟಲು ಯಾವ ರೀತಿಯಲ್ಲಿ ಮುಂಜಾಗ್ರತೆ ವಹಿಸಬೇಕು? ಕೊರೊನಾ ಬಂದರೆ ಏನು ಮಾಡಬೇಕು? ಎಂಬ ವಿಷಯಗಳ ಬಗ್ಗೆ ಅನು ಪ್ರಭಾಕರ್ ಮಾತನಾಡಿದ್ದಾರೆ. ಅವರ ಮಾತಿನಿಂದ 10 ಜನರಿಗೆ ಉಪಯೋಗಕ್ಕೆ ಬಂದರೆ ಒಳ್ಳೆಯದು" ಎಂದು ಅನು ಪ್ರಭಾಕರ್ ಹೇಳಿದ್ದಾರೆ. ಅನು ಮನೆಯಲ್ಲಿ ಅವರ ಗಂಡ, ಮಗಳು, ಅತ್ತೆ ಕೂಡ ಇದ್ದಾರೆ. ಫ್ಯಾಮಿಲಿಯಲ್ಲಿ ಎಲ್ಲರಿಗೂ ನೆಗೆಟಿವ್! "ನನಗೆ ನೆಗಡಿ, ಕೆಮ್ಮು, ಜ್ವರ ಬಂದಿರಲಿಲ್ಲ. ಆದರೆ ಯಾವುದೇ ಟೇಸ್ಟ್ ಗೊತ್ತಾಗುತ್ತಿರಲಿಲ್ಲ. ನನ್ನ ಅಕ್ಕ ವೈದ್ಯೆ. ಅವಳಿಗೆ ಈ ವಿಷಯ ಹೇಳಿದೆ. ಹುಬ್ಬಳ್ಳಿಯಲ್ಲಿ ಕೆಲಸ ಮಾಡುತ್ತಿರುವ ಅಕ್ಕ ನನಗೆ ಪರೀಕ್ಷೆ ಮಾಡಿಸಿಕೋ, ಫಲಿತಾಂಶಕ್ಕಾಗಿ ಕಾಯಬೇಡ. ನೀನು ಐಸೋಲೇಶನ್ ಮಾಡಿಸಿಕೋ ಅಂತ ಹೇಳಿದರು. ಫ್ಯಾಮಿಲಿ ಜೊತೆ ಸೇರದೆ, ಅವರಿಂದ ನಾನು ದೂರ ಉಳಿದೆ. ನಾನು ಮನೆಯಲ್ಲಿ ಕ್ವಾರಂಟೈನ್ ಆದೆ. ಹೀಗಾಗಿ ಮನೆಯವರಿಗೆ ನೆಗೆಟಿವ್ ಬಂತು ಎಂದು ಭಾವಿಸುತ್ತೇನೆ. ಆದ್ದರಿಂದ ಏನಾದರೂ ಲಕ್ಷಣ ಕಾಣಿಸಿಕೊಂಡರೆ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ, ಕ್ವಾರಂಟೈನ್ ಆಗಿ, ಬೇರೆಯವರಿಂದ ದೂರ ಆಗಿ" ಎಂದು ಅನು ಪ್ರಭಾಕರ್ ಹೇಳಿದ್ದಾರೆ. ಅನು ಪ್ರಭಾಕರ್ ನೀಡಿದ ಸಲಹೆ ಏನು? "ಏನಾದರೂ ಲಕ್ಷಣ ಇದ್ದರೆ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ, ಫಲಿತಾಂಶ ಬರುವವರೆಗೆ ಕಾಯಬೇಡಿ, ವೈದ್ಯರನ್ನು ಸಂಪರ್ಕಿಸಿ. ಮನೆಯಲ್ಲಿ ಐಸೋಲೇಟ್ ಆಗಿ, ಒಂದು ವೇಳೆ ಆಗಿಲ್ಲ ಅಂದರೆ ಸರ್ಕಾರದಿಂದ ಕೋವಿಡ್ ಸೆಂಟರ್ ಇದೆ, ಅಲ್ಲಿ ಹೋಗಿ ಐಸೋಲೇಟ್ ಆಗಿ. ಫಲಿತಾಂಶ ಬರುವವರೆಗೆ ಚಿಕಿತ್ಸೆ ಪಡೆಯದೆ ಹಾಗೆ ಇರಬೇಡಿ. ಮೊದಲು 4 ದಿನ ತುಂಬ ಮುಖ್ಯ. ಸರ್ಕಾರ ಕೂಡ ತುಂಬ ಕಷ್ಟಪಟ್ಟು ಕೆಲಸ ಮಾಡುತ್ತಿದೆ. ಈ ಟೈಮ್‌ನಲ್ಲಿ ಬೆಡ್ ಬೇಕು, ಆಕ್ಸಿಜನ್ ಬೇಕು ಅಂದರೆ ತುಂಬ ಕಷ್ಟ ಆಗತ್ತೆ" ಎಂದು ಅನು ಪ್ರಭಾಕರ್ ಹೇಳಿದ್ದಾರೆ.