ಕೊಟ್ಟ ಮಾತನ್ನು ಉಳಿಸಿಕೊಂಡ ವಿಜಯ್ ದೇವರಕೊಂಡ; 'ರೌಡಿ' ಹುಡುಗನ ಗುಣಕ್ಕೆ ಫ್ಯಾನ್ಸ್‌ ಬಹುಪರಾಕ್‌

ಅಭಿಮಾನಿಗಳ ಪಾಲಿನ ಪ್ರೀತಿಯ ರೌಡಿ ವಿಜಯ್ ದೇವರಕೊಂಡ ಈಗ ಒಂದು ಮಹತ್ವದ ಕೆಲಸ ಮಾಡಿ, ಇನ್ನಷ್ಟು ಪ್ರೀತಿ ಗಿಟ್ಟಿಸಿಕೊಂಡಿದ್ದಾರೆ. ಕೊಟ್ಟ ಮಾತೊಂದನ್ನು ವಿಜಯ್ ದೇವರಕೊಂಡ ನೆರವೇರಿಸಿದ್ದಾರೆ.

ಕೊಟ್ಟ ಮಾತನ್ನು ಉಳಿಸಿಕೊಂಡ ವಿಜಯ್ ದೇವರಕೊಂಡ; 'ರೌಡಿ' ಹುಡುಗನ ಗುಣಕ್ಕೆ ಫ್ಯಾನ್ಸ್‌ ಬಹುಪರಾಕ್‌
Linkup
ಟಾಲಿವುಡ್‌ನ ಸ್ಟಾರ್ ನಟರಲ್ಲಿ ಕೂಡ ಒಬ್ಬರು. 'ಅರ್ಜುನ್ ರೆಡ್ಡಿ', 'ಗೀತಾ ಗೋವಿಂದಂ'ನಂತಹ ಹಿಟ್ ಸಿನಿಮಾಗಳನ್ನು ನೀಡಿದ ಮೇಲೆ ವಿಜಯ್, ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅವರ ಮುಂದಿನ 'ಲೈಗರ್' ಸಿನಿಮಾವು ಐದಾರು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಗೆ ಬರಲಿದೆ. ಈ ಮಧ್ಯೆ ವಿಜಯ್‌ ಅವರ ಒಂದು ಗುಣ ಎಲ್ಲರಿಂದ ಮೆಚ್ಚುಗೆ ಸಿಗುವಂತೆ ಮಾಡಿದೆ. ಅದೇನೆಂದರೆ, ಈಚೆಗೆ 'ಇಂಡಿಯನ್ ಐಡಲ್ 12'ರಲ್ಲಿ ಭಾಗವಹಿಸಿದ್ದ ಸ್ಪರ್ಧಿ ಗೆ ವಿಜಯ್‌ ಒಂದು ಪ್ರಾಮೀಸ್ ಮಾಡಿದ್ದರು. ಅದನ್ನೀಗ ನೆರವೇರಿಸಿದ್ದಾರೆ. ಸಿನಿಮಾದಲ್ಲಿ ಹಾಡುವ ಚಾನ್ಸ್ ಕೊಟ್ಟಿದ್ದ 'ರೌಡಿ''ಇಂಡಿಯನ್ ಐಡಲ್ 12'ರಲ್ಲಿ ಸ್ಪರ್ಧಿಸಿದ್ದ ಷಣ್ಮುಖ ಪ್ರಿಯಾಗೆ ವಿಜಯ್ ಒಂದು ಮಾತು ಕೊಟ್ಟಿದ್ದರು. ಕಾರ್ಯಕ್ರಮ ನಡೆಯುವಾಗಲೇ ಒಂದು ವಿಡಿಯೋ ಪ್ರಸಾರವಾಗಿತ್ತು. ಅದರಲ್ಲಿ ವಿಜಯ್ ದೇವರಕೊಂಡ ಮಾತನಾಡಿದ್ದರು. 'ಷಣ್ಮುಖಪ್ರಿಯಾ, ಈ ರಿಯಾಲಿಟಿ ಶೋನಲ್ಲಿ ಗೆದ್ದರೂ ಅಥವಾ ಗೆಲ್ಲದಿದ್ದರೂ, ಈ ಕಾರ್ಯಕ್ರಮ ಮುಗಿದ ಮೇಲೆ ಹೈದರಾಬಾದ್‌ಗೆ ಬಂದು ನನ್ನನ್ನು ಭೇಟಿಯಾಗಿ. ನಮ್ಮ 'ಲೈಗರ್' ಸಿನಿಮಾದಲ್ಲಿ ನಿಮಗೊಂದು ಚಾನ್ಸ್ ಕೊಡುತ್ತೇನೆ' ಎಂದಿದ್ದರು. ಆ ಮಾತೀಗ ನೆರವೇರಿದೆ. 'ಲೈಗರ್‌' ಸಿನಿಮಾದಲ್ಲಿ ಹಾಡಿದ ಷಣ್ಮುಖ ಪ್ರಿಯಾ'ಇಂಡಿಯನ್ ಐಡಲ್ 12' ಶೋ ಮುಗಿದ ಮೇಲೆ ಹೈದರಾಬಾದ್‌ಗೆ ಮರಳಿದ ಷಣ್ಮುಖ ಪ್ರಿಯಾ, ವಿಜಯ್‌ ಅವರನ್ನು ಭೇಟಿಯಾಗಿದ್ದಾರೆ. ಜೊತೆಗೆ 'ಲೈಗರ್‌' ಸಿನಿಮಾದಲ್ಲಿ ಒಂದು ಹಾಡನ್ನು ಹಾಡಿದ್ದಾರೆ. ಅದರ ರೆಕಾರ್ಡಿಂಗ್ ಮತ್ತು ತಮ್ಮನ್ನು ಭೇಟಿಯಾದ ಕ್ಷಣಗಳನ್ನು ವಿಜಯ್ ಒಂದು ವಿಡಿಯೋ ಮಾಡಿ, ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇನ್ನು, ವಿಜಯ್‌ ಸಿನಿಮಾದಲ್ಲಿ ಹಾಡಿದ್ದಕ್ಕೆ ಖುಷಿಯಾಗಿದ್ದಾರೆ. 'ವಿಜಯ್‌ ದೇವರಕೊಂಡ ಅವರಿಗೆ ಧನ್ಯವಾದಗಳು. ಅಂದು ಅವರ ವಿಡಿಯೋ ನೋಡಿದಾಗ ಅಚ್ಚರಿಯಾಗಿತ್ತು. ಇಂದು ಅವರ ಸಿನಿಮಾಗೆ ಹಾಡಿದ್ದೇನೆ. ತುಂಬ ಖುಷಿಯಾಗುತ್ತಿದೆ' ಎಂದು ಹೇಳಿಕೊಂಡಿದ್ದಾರೆ. ಇನ್ನು, ಈ ಹಿಂದೆ ವಿಜಯ್ ನಟನೆಯ 'ಡಿಯರ್ ಕಾಮ್ರೇಡ್‌' ಸಿನಿಮಾ ಹಲವು ಭಾಷೆಗಳಲ್ಲಿ ತೆರೆಗೆ ಬಂದಿತ್ತು. ಆದರೆ, 'ಲೈಗರ್‌' ಅದಕ್ಕಿಂತಲೂ ದೊಡ್ಡಮಟ್ಟದಲ್ಲಿ ಹವಾ ಸೃಷ್ಟಿಸುವುದಕ್ಕೆ ಪ್ಲ್ಯಾನ್ ಮಾಡಿಕೊಂಡಿದೆ. ಆರಂಭದಿಂದಲೂ ಇದಕ್ಕೆ ಬಾಲಿವುಡ್‌ನ ಟಚ್ ಇದೆ. ನಾಯಕಿಯಾಗಿ ಹಿಂದಿಯ ಅನನ್ಯಾ ಪಾಂಡೆ ಇದ್ದಾರೆ. ನಿರ್ಮಾಪಕ/ನಿರ್ದೇಶಕ ಕರಣ್ ಜೋಹರ್‌ ದೊಡ್ಡಮಟ್ಟದಲ್ಲಿ ಸಾಥ್ ನೀಡಿದ್ದಾರೆ. 'ಲೈಗರ್' ಮೂಲಕ ಅಧಿಕೃತವಾಗಿ ಬಾಲಿವುಡ್‌ಗೂ ವಿಜಯ್ ದೇವರಕೊಂಡ ಎಂಟ್ರಿ ಕೊಟ್ಟಿದ್ದಾರೆ. ನಟಿ ರಮ್ಯಾ ಕೃಷ್ಣ ಒಂದು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ರೋನಿತ್ ರಾಯ್, ವಿಶು ರೆಡ್ಡಿ, ಆಲಿ, ಮಕರಂದ್ ದೇಶಪಾಂಡೆ, ಗೆಟಪ್ ಶ್ರೀನು ಮುಂತಾದವರು ನಟಿಸುತ್ತಿದ್ದಾರೆ. ಈ ಸಿನಿಮಾಗೆ ವಿಷ್ಣು ಶರ್ಮಾ ಛಾಯಾಗ್ರಹಣ ಮಾಡಿದ್ದಾರೆ. ಜಾನಿ ಶೇಖ್ ಬಾಷಾ ಕಲಾ ನಿರ್ದೇಶನ ಇರುವ ಈ ಚಿತ್ರಕ್ಕೆ ಜುನೈದ್ ಸಿದ್ಧಿಕಿ ಸಂಕಲನ ಮಾಡುತ್ತಿದ್ದಾರೆ. ಈ ಮಧ್ಯೆ 200 ಕೋಟಿ ರೂ. ನೀಡಿ ಓಟಿಟಿ ಸಂಸ್ಥೆಯೊಂದು 'ಲೈಗರ್‌ ಚಿತ್ರದ ಎಲ್ಲ ಭಾಷೆಗಳ ಪ್ರಸಾರದ ಹಕ್ಕನ್ನು ಪಡೆದುಕೊಂಡಿದೆ, ಚಿತ್ರವು ನೇರವಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲೇ ರಿಲೀಸ್ ಆಗಲಿದೆ. ನಿರ್ಮಾಪಕರು ಕೂಡ ಈ ಆಫರ್‌ ಅನ್ನು ಒಪ್ಪಿಕೊಂಡಿದ್ದಾರೆ ಅನ್ನೋ ವದಂತಿ ಕೇಳಿಬಂದಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ವಿಜಯ್, 'ಇದು ತುಂಬ ಕಮ್ಮಿ ಆಯ್ತು... ನಾನು ಚಿತ್ರಮಂದಿರದಲ್ಲೇ ಇದಕ್ಕಿಂತಲೂ ಜಾಸ್ತಿ ಗಳಿಸುತ್ತೇನೆ' ಎಂದಿದ್ದರು.