Chiranjeevi Sarja: ಪತಿ ಚಿರಂಜೀವಿ ಸರ್ಜಾ ಹುಟ್ಟುಹಬ್ಬಕ್ಕೆ ನಟಿ ಮೇಘನಾ ರಾಜ್ ವಿಶೇ‍ಷ ಪೋಸ್ಟ್

ನಟ ಚಿರಂಜೀವಿ ಸರ್ಜಾ ಅವರ ಬರ್ತಡೇ ವಿಶೇಷವಾಗಿ ಸಾಕಷ್ಟು ಜನರು ಸೋಶಿಯಲ್ ಮೀಡಿಯಾದಲ್ಲಿ ಜನ್ಮದಿನದ ಶುಭಾಶಯ ತಿಳಿಸುತ್ತಿದ್ದಾರೆ. ಅಂತೆಯೇ ಮೇಘನಾ ರಾಜ್ ಕೂಡ ಪತಿ ಕುರಿತಂತೆ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.

Chiranjeevi Sarja: ಪತಿ ಚಿರಂಜೀವಿ ಸರ್ಜಾ ಹುಟ್ಟುಹಬ್ಬಕ್ಕೆ ನಟಿ ಮೇಘನಾ ರಾಜ್ ವಿಶೇ‍ಷ ಪೋಸ್ಟ್
Linkup
ನಟ ಅವರು ಇಂದು ಇದ್ದಿದ್ದರೆ ಕುಟುಂಬದವರು, ಸ್ನೇಹಿತರು, ಅಭಿಮಾನಿಗಳ ಜೊತೆ ಸೇರಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸುತ್ತಿದ್ದರು. ಚಿರಂಜೀವಿ ದೈಹಿಕವಾಗಿ ಇಲ್ಲದ ಅವರ ಎರಡನೇ ಬರ್ತಡೇಯಿದು. ಇಂದು ಚಿರು ಸರ್ಜಾ ಹುಟ್ಟಿದ ದಿನ. ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನರು ಅವರನ್ನು ಸ್ಮರಿಸಿ ಜನ್ಮದಿನದ ಶುಭಾಶಯ ತಿಳಿಸುತ್ತಿದ್ದಾರೆ. ಪತಿ ಚಿರಂಜೀವಿ ಜೊತೆಗಿನ ಫೋಟೋವೊಂದನ್ನು ಹಂಚಿಕೊಂಡು, "ದುಃಖದ ಕೊನೆಯಲ್ಲಿ ವಿಜಯ ಇರುತ್ತದೆ. ಕೆಲವೊಂದು ವಿಷಯ ಸಾಧಿಸಲು ನಾವು ಹೋಗುವ ಮಾರ್ಗವೆಲ್ಲ ಸುಲಭವಾಗಿರೋದಿಲ್ಲ. ಎಲ್ಲ ಭರವಸೆಗಳು ಮಸುಕಾದಾಗ, ಜೀವನ ಇನ್ನೂ ಇದ್ದಾಗ ಸುರಂಗದ ಕೊನೆಯಲ್ಲಿ ಯಾವಾಗಲೂ ಬೆಳಕು ಇರುತ್ತದೆ. ನನಗೆ ಆ ಬೆಳಕು ಚಿರು. ನನ್ನ ಪಯಣ ಆ ಬೆಳಕಿನೆಡೆಗೆ ಹೋಗಿ ಉಜ್ವಲವಾಗಲು ನೋಡುತ್ತದೆ. ಹ್ಯಾಪಿ ಬರ್ತಡೇ ಮೈ ಹಸ್ಬೆಂಡ್, ಮೈ ಲೈಫ್, ಮೈ ಲೈಟ್" ಎಂದು ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. "ಡಿಯರ್ ಚಿರು, ನಾವೆಲ್ಲ ಸೇರಿ ಕಂಡ ಸಿನಿಮಾ ನಿರ್ಮಾಣ ಮಾಡಬೇಕು ಎಂಬ ಕನಸನ್ನು ನಿನ್ನ ಬರ್ತಡೇ ದಿನ ಉಡುಗೊರೆಯಾಗಿ ನೀಡಲು ಬಯಸುತ್ತಿರುವೆ. ಮೇಘನಾ ಲೀಡ್ ಆಗಿ ಕಾಣಿಸಿಕೊಳ್ಳುತ್ತಿರುವುದರಿಂದ ಈ ಪಯಣ ಇನ್ನಷ್ಟು ಅರ್ಥದಾಯಕವಾಗಿರುತ್ತದೆ. ಪ್ರತಿಯೊಬ್ಬರೂ ಕೂಡ ಬೆಂಬಲ ನೀಡುತ್ತಿದ್ದಾರೆ. ಇದಕ್ಕೆ ನೀನೆ ಕಾರಣ. ಸಂಭ್ರಮಿಸಲು ನೀನೆ ಕಾರಣ ಆಗಿರುತ್ತೀಯಾ" ಎಂದು ನಿರ್ದೇಶಕ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ. ಮೇಘನಾ ರಾಜ್ ಅವರು ವಿಶೇಷ ಫೋಟೋಶೂಟ್ ಮಾಡಿಸಿದ್ದಾರೆ. ಆ ಫೋಟೋವನ್ನು ಚಿರಂಜೀವಿ ಬರ್ತಡೇ ಪ್ರಯುಕ್ತ ಹಂಚಿಕೊಂಡಿದ್ದಾರೆ. ಚಿರಂಜೀವಿ ಸರ್ಜಾ ಫೋಟೋ ಬಿಡಿಸುತ್ತಿರುವಂತೆ ಮೇಘನಾ ಕ್ಯಾಮರಾಕ್ಕೆ ಪೋಸ್ ನೀಡಿದ್ದಾರೆ. ಆ ಫೋಟೋ ಎಲ್ಲರ ಮೆಚ್ಚುಗೆ ಗಳಿಸಿದೆ. ನಟ ಧ್ರುವ ಸರ್ಜಾ, ಪ್ರಜ್ವಲ್ ದೇವರಾಜ್ ಸೇರಿದಂತೆ ಅನೇಕರು ಧ್ರುವ ಸರ್ಜಾ ಬರ್ತಡೇಯ ಕಾಮನ್ ಡಿಪಿ ಹಂಚಿಕೊಂಡಿದ್ದಾರೆ. ಎರಡು ವರ್ಷಗಳ ನಂತರದಲ್ಲಿ ಮೇಘನಾ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಚಿರಂಜೀವಿ ಸರ್ಜಾ ಬರ್ತಡೇ ದಿನವೇ ಮುಹೂರ್ತ ಕಾರ್ಯಕ್ರಮ ಕೂಡ ನಡೆಯುತ್ತಿದೆ. ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಫೈನಲ್ ಆಗಿಲ್ಲ. "ಚಿರಂಜೀವಿ ಸರ್ಜಾ ಎಂದಿಗೂ ಬೇಸರ ಆಗಿರಲಿಲ್ಲ. ನಾವು ಅದೇ ಭಾವನೆಯನ್ನು ಮುಂದುವರೆಸಿಕೊಂಡು ಹೋಗಲು ಬಯಸುತ್ತೇವೆ. ಪನ್ನಗ ಚಿರು, ಪ್ರಜ್ವಲ್ ದೇವರಾಜ್ ಒಟ್ಟಾಗಿ ಕೆಲಸ ಮಾಡಬೇಕು ಎಂದುಕೊಂಡಿದ್ರು, ಆಗಲಿಲ್ಲ. ಈಗ ಸರಿಯಾದ ಸಮಯ ಎಂದು ಒಟ್ಟಾಗಿ ಸಿನಿಮಾ ಮಾಡುತ್ತಿದ್ದೇವೆ" ಎಂದು ಮೇಘನಾ ಹೇಳಿದ್ದಾರೆ. "ಥ್ರಿಲ್ಲರ್ ಸಿನಿಮಾವಿದು. ವಿಶಾಲ್ ಎಂಬುವವರು ನಿರ್ದೇಶನ ಮಾಡಿತ್ತಿದ್ದಾರೆ. ಇದ್ದಕ್ಕಿದ್ದಂತೆ ಈ ಸಿನಿಮಾ ಆಯ್ತು. ನಾನು ಸ್ಕ್ರಿಪ್ಟ್ ಕೇಳಬೇಕು ಅಂತ ಪನ್ನಗ ಹೇಳಿದ್ರು. ಈ ಕಥೆ ತುಂಬ ಚೆನ್ನಾಗಿದೆ. ಕೆಲ ದಿನಗಳ ನಂತರದಲ್ಲಿ ಪನ್ನಗ ಈ ಚಿತ್ರದಲ್ಲಿ ನಟಿಸು ಎಂದರು. ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಲು ಒಳ್ಳೆಯ ಸಮಯ ಎಂದು ಭಾವಿಸಿದೆ" ಎಂದು ಮೇಘನಾ ಹೇಳಿದ್ದಾರೆ.