'ಕೋಟಿಗೊಬ್ಬ 3' ರೀತಿ ಗೊಂದಲ ಆದ್ರೆ ಕಲಾವಿದರ ಹೆಸರು ಕೆಡತ್ತೆ, ಕನ್ನಡ ಚಿತ್ರರಂಗಕ್ಕೆ ಕಪ್ಪುಚುಕ್ಕೆ: ನಿಖಿಲ್ ಕುಮಾರಸ್ವಾಮಿ

ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ 3' ಸಿನಿಮಾ ವಿವಾದವಾಗಿದೆ. ನಿರ್ಮಾಪಕ ಸೂರಪ್ಪ ಬಾಬು ಹಾಗೂ ಸಿನಿಮಾ ವಿತರಕ ಖಾಜಾಪೀರ್ ಮಧ್ಯೆ ವಾದ ನಡೆಯುತ್ತಿದೆ. ಈ ಬಗ್ಗೆ ನಟ ನಿಖಿಲ್ ಕುಮಾರಸ್ವಾಮಿ ಏನು ಹೇಳಿದ್ರು?

'ಕೋಟಿಗೊಬ್ಬ 3' ರೀತಿ ಗೊಂದಲ ಆದ್ರೆ ಕಲಾವಿದರ ಹೆಸರು ಕೆಡತ್ತೆ, ಕನ್ನಡ ಚಿತ್ರರಂಗಕ್ಕೆ ಕಪ್ಪುಚುಕ್ಕೆ: ನಿಖಿಲ್ ಕುಮಾರಸ್ವಾಮಿ
Linkup
ನಟ, ರಾಜಕಾರಣಿ ಅವರು 'ರೈಡರ್' ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಭಾಗಿಯಾದಾಗ '' ಸಿನಿಮಾ ವಿವಾದದ ಬಗ್ಗೆ ಮಾತನಾಡಿದ್ದಾರೆ. ಅಕ್ಟೋಬರ್ 14ರಂದು ರಿಲೀಸ್ ಆಗಬೇಕಿದ್ದ 'ಕೋಟಿಗೊಬ್ಬ 3' ಅಕ್ಟೋಬರ್ 15ರಂದು ರಿಲೀಸ್ ಆಯ್ತು. ಸಿನಿಮಾ ಟಿಕೆಟ್ ಬುಕ್ ಮಾಡಿಕೊಂಡು ಥಿಯೇಟರ್‌ಗೆ ಬಂದ ಪ್ರೇಕ್ಷಕರಿಗೆ ನಿರಾಸೆ ಆಗಿತ್ತು, ಚಿತ್ರಮಂದಿರ ಮುಂದೆ ಅಭಿಮಾನಿಗಳು ಕೂಗಾಟ ಕಿರುಚಾಟ ಮಾಡಿದ್ರು, ವಿತರಕ-ನಿರ್ಮಾಪಕರ ಮಧ್ಯೆ ವಾದ-ವಿವಾದವೂ ಆಯ್ತು. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದ ನಿಖಿಲ್ ಕುಮಾರಸ್ವಾಮಿ ಅವರು 'ಕೋಟಿಗೊಬ್ಬ 3' ವಿವಾದದ ಬಗ್ಗೆ ಮಾತನಾಡಿದ್ದಾರೆ. 'ಕೋಟಿಗೊಬ್ಬ 3' ವಿವಾದದಿಂದ ಕಲಾವಿದರ ಹೆಸರು ಕೆಡತ್ತೆ "ಬೇಜಾರಾಗಿದ್ದು ಒಂದೇ ವಿಷಯ. ಇವತ್ತು ಸರ್ ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತ ಅಲ್ಲ, ಬೇರೆ ಚಿತ್ರರಂಗದಲ್ಲಿಯೂ ಛಾಪು ಮೂಡಿಸಿದ ನಟ ಅವರು. ಕೋಟಿಗೊಬ್ಬ 3 ಈ ರೀತಿ ಗೊಂದಲ ಆದಾಗ ಇಂತಹ ಹಿರಿಯ ಕಲಾವಿದರ ಹೆಸರು ಕೆಡತ್ತೆ. ಇದು ಕನ್ನಡ ಚಿತ್ರರಂಗಕ್ಕೆ ಕಪ್ಪು ಚುಕ್ಕೆ. ನನಗೆ ನಿಜಕ್ಕೂ ಆಂತರಿಕವಾಗಿ ಏನು ಸಮಸ್ಯೆ ಆಗಿದೆ ಅಂತ ಗೊತ್ತಿಲ್ಲ. ಅಷ್ಟು ಮಾತನಾಡುವ ದೊಡ್ಡ ವ್ಯಕ್ತಿ ನಾನಲ್ಲ. ಈ ರೀತಿ ಗೊಂದಲ ಆಗಬಾರದು" ಎಂದು ನಿಖಿಲ್ ಹೇಳಿದ್ದಾರೆ. ನಾನು ಹಾಗೂ ಸುದೀಪ್ ಅವರು ನೇರವಾಗಿ ಮಾತನಾಡುತ್ತೇವೆ ನಾನು ಸುದೀಪ್ ಸರ್ ಮೇಲೆ ಗೌರವ ಇಟ್ಟುಕೊಂಡಿದ್ದೇನೆ, ನನ್ನ ಬಗ್ಗೆ ಅವರಿಗೂ ಪ್ರೀತಿಯಿದೆ, ಸಿನಿಮಾ ರಿಲೀಸ್ ಆಗಲೀ, ಬರ್ತಡೇ ಇರಲೀ ಸುದೀಪ್ ಅವರು ನನಗೆ ಶುಭಾಶಯ ತಿಳಿಸುತ್ತಾರೆ. ನಾನು ವೈಯಕ್ತಿಕವಾಗಿ ಸಾಕಷ್ಟು ಬಾರಿ ಸುದೀಪ್ ಸರ್ ಭೇಟಿ ಮಾಡಿದ್ದೇನೆ. ನಾನು ಹಾಗೂ ಅವರು ನೇರವಾಗಿ ಮಾತನಾಡುವ ವ್ಯಕ್ತಿಗಳಾದ್ದರಿಂದ ಇಬ್ಬರೂ ಕನೆಕ್ಟ್ ಆಗ್ತೀವಿ" ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ನೀವು ಮನೆಯಲ್ಲಿ ಕೂತು ಸಿನಿಮಾ ನೋಡಿದ್ರೆ ನಿಮ್ಮ ಚಪ್ಪಾಳೆ ನಮಗೆ ಕೇಳಲ್ಲ " 'ಕೋಟಿಗೊಬ್ಬ 3', 'ಸಲಗ' ಸಿನಿಮಾ ರಿಲೀಸ್ ಆಗಿದೆ. ಚಿತ್ರರಂಗವು ಥಿಯೇಟರ್‌ಗೆ ಜನರು ಬರುತ್ತಾರಾ ಎಂಬ ಚಿಂತೆಯಲ್ಲಿತ್ತು. ಓಟಿಟಿಗೆ ಜನರು ಅಡಿಕ್ಟ್ ಆಗಿದ್ದಾರೆ, ಕೊರೊನಾ ವೈರಸ್ ಮೆಟ್ಟಿನಿಂತು ಥಿಯೇಟರ್‌ಗೆ ಪ್ರೇಕ್ಷಕರು ಬರುತ್ತಾರಾ ಎಂಬ ಪ್ರಶ್ನೆ ಇತ್ತು. ನಾನು ನಿನ್ನೆ ಮಾಗಡಿ ರೋಡ್‌ನಲ್ಲಿ ಹೋಗುವಾಗ 'ಸಲಗ' ಸಿನಿಮಾ ನೋಡಲು ಬಂದ ಜನರನ್ನು ನೋಡಿ ಆಶ್ಚರ್ಯಪಟ್ಟೆ. ಮನೆಯಲ್ಲಿ ನೀವು ಓಟಿಟಿಯಲ್ಲಿ ಸಿನಿಮಾ ನೋಡಿ ಚಪ್ಪಾಳೆ, ಶಿಳ್ಳೆ ಹೊಡೆದರೆ ನಮಗೆ ಕೇಳಿಸಲ್ಲ, ಸಿನಿಮಾ ಥಿಯೇಟರ್‌ಗೆ ಬಂದಾಗಲೇ ಗೊತ್ತಾಗೋದು. ನಿರ್ಮಾಪಕರು ಧೈರ್ಯ ಮಾಡಿ ಸಿನಿಮಾ ರಿಲೀಸ್ ಮಾಡುತ್ತಿರುವುದು ಖುಷಿ ನೀಡಿದೆ" ಎಂದು ನಿಖಿಲ್ ಹೇಳಿದ್ದಾರೆ. ಏನಿದು ವಿವಾದ? 'ಕೋಟಿಗೊಬ್ಬ 3' ಸಿನಿಮಾ ವಿವಾದ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ನಿರ್ಮಾಪಕ ಅವರು 'ಕೋಟಿಗೊಬ್ಬ 3' ರಿಲೀಸ್ ಒಂದು ದಿನ ತಡವಾಗಿರೋದಕ್ಕೆ ವಿತರಕರು ಮಾಡಿದ ಮೋಸವೇ ಕಾರಣ ಎಂದು ಹೇಳಿದ್ದರು. ಚಿತ್ರದುರ್ಗದ ವಿತರಕ ಖಾಜಾಪೀರ್ ಅವರು "ಸೂರಪ್ಪ ಬಾಬು ನನಗೆ ಬೆದರಿಕೆ, ಧಮ್ಕಿ ಹಾಕಿದ್ದಾರೆ. ನನಗೆ ಏನಾದರೂ ತೊಂದರೆ ಸೂರಪ್ಪ ಬಾಬು ಕಾರಣ" ಎಂದು ಹೇಳಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.