ಅಮೇರಿಕಾದಿಂದ ಚೆನ್ನೈಗೆ ಮರಳಿದ ಸೂಪರ್ ಸ್ಟಾರ್ ರಜಿನಿಕಾಂತ್

ತಲೈವಾ ರಜಿನಿಕಾಂತ್ ಚೆನ್ನೈಗೆ ಮರಳಿದ್ದಾರೆ. ಆರೋಗ್ಯ ತಪಾಸಣೆಗೆಂದು ಯುಎಸ್‌ಗೆ ತೆರಳಿದ್ದ ರಜಿನಿಕಾಂತ್ ಇಂದು ಚೆನ್ನೈಗೆ ವಾಪಸ್ ಆಗಿದ್ದಾರೆ.

ಅಮೇರಿಕಾದಿಂದ ಚೆನ್ನೈಗೆ ಮರಳಿದ ಸೂಪರ್ ಸ್ಟಾರ್ ರಜಿನಿಕಾಂತ್
Linkup
ದಕ್ಷಿಣ ಭಾರತದ ಸ್ಟಂಟ್ ಗಾಡ್, ಕಾಲಿವುಡ್ ಸೂಪರ್ ಸ್ಟಾರ್, ತಲೈವಾ ಚೆನ್ನೈಗೆ ಮರಳಿದ್ದಾರೆ. ಆರೋಗ್ಯ ತಪಾಸಣೆಗೆಂದು ಯುಎಸ್‌ಗೆ ತೆರಳಿದ್ದ ರಜಿನಿಕಾಂತ್ ಇಂದು ಚೆನ್ನೈಗೆ ವಾಪಸ್ ಆಗಿದ್ದಾರೆ. ಆರೋಗ್ಯ ತಪಾಸಣೆಗಾಗಿ ಕಳೆದ ತಿಂಗಳು ನಟ ರಜಿನಿಕಾಂತ್ ಯುಎಸ್‌ಗೆ ಫ್ಲೈಟ್ ಹತ್ತಿದ್ದರು. ಪತ್ನಿ ಲತಾ, ಪುತ್ರಿ ಐಶ್ವರ್ಯ ಜೊತೆಗೆ ಯುಎಸ್‌ಗೆ ರಜಿನಿಕಾಂತ್ ತೆರಳಿದ್ದರು. ಅಲ್ಲಿನ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ರಜಿನಿಕಾಂತ್ ಒಳಗಾದರು. ಮೂರು ವಾರಗಳ ಕಾಲ ಯುಎಸ್‌ನಲ್ಲಿದ್ದ ರಜಿನಿಕಾಂತ್ ಇಂದು ಬೆಳಗ್ಗೆ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಇಂದು ಚೆನ್ನೈಗೆ ರಜಿನಿಕಾಂತ್ ಬಂದಿಳಿಯಲಿದ್ದಾರೆ ಎಂಬ ಸುದ್ದಿ ಬಹಿರಂಗವಾದ ನಂತರ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳ ದಂಡು ನೆರೆದಿತ್ತು. ರಜಿನಿಕಾಂತ್‌ರನ್ನ ನೋಡಲು ಅಭಿಮಾನಿಗಳ ಸಾಗರವೇ ಏರ್‌ಪೋರ್ಟ್‌ನತ್ತ ಹರಿದುಬಂದಿತ್ತು. ಅಭಿಮಾನಿಗಳಿಗೆ ನಮಸ್ಕಾರ ಮಾಡಿದ ರಜಿನಿಕಾಂತ್ ತಮ್ಮ ನಿವಾಸದತ್ತ ಹೊರಟರು. ಆರೋಗ್ಯವಾಗಿ ವಾಪಸ್ ಬಂದ ರಜಿನಿಕಾಂತ್‌ರನ್ನ ನೋಡಿದ ಅಭಿಮಾನಿಗಳು ಸಂತಸಗೊಂಡರು. ಆರೋಗ್ಯ ತಪಾಸಣೆಗಾಗಿ ರಜಿನಿಕಾಂತ್ ಅಮೇರಿಕಾಕ್ಕೆ ತೆರಳಿದ್ದಾರೆ ಎಂಬ ಸುದ್ದಿ ಜಗಜ್ಜಾಹೀರಾದಾಗ ಅಭಿಮಾನಿಗಳು ಆತಂಕಗೊಂಡಿದ್ದರು. ರಜಿನಿಕಾಂತ್ ಆರೋಗ್ಯದ ಬಗ್ಗೆ ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದರು. ಆದ್ರೀಗ, ರಜಿನಿಕಾಂತ್ ಫುಲ್ ಫಿಟ್ ಅಂಡ್ ಫೈನ್ ಆಗಿ ವಾಪಸ್ ಬಂದಿದ್ದಾರೆ. ಇದು ಅಭಿಮಾನಿಗಳಿಗೆ ಖುಷಿ ನೀಡಿದೆ. ಸದ್ಯ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯುವ ರಜಿನಿಕಾಂತ್ ನಂತರ 'ಅಣ್ಣಾತ್ತೆ' ಡಬ್ಬಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಎಲ್ಲವೂ ಪ್ಲಾನ್ ಪ್ರಕಾರ ನಡೆದರೆ ರಜಿನಿಕಾಂತ್ ಅವರ 'ಅಣ್ಣಾತ್ತೆ' ಸಿನಿಮಾ ನವೆಂಬರ್ ತಿಂಗಳಿನಲ್ಲಿ ತೆರೆಗೆ ಬರಲಿದೆ.