ಕಾಟನ್‌ ಪೇಟೆಗೆ ಬಂದ್ರು 'ಬಾಲಿವುಡ್‌ ಬೆಡಗಿ' ಸನ್ನಿ ಲಿಯೋನ್‌! ಕಾರಣ ಏನಿರಬಹುದು?

ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಈ ಹಿಂದೆ ಪ್ರೇಮ್ ಅವರ 'ಡಿಕೆ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಆನಂತರ ಅವರು ಪದೇಪದೇ ಸ್ಯಾಂಡಲ್‌ವುಡ್‌ಗೆ ಬರುತ್ತಿದ್ದಾರೆ. ಇದೀಗ ಅವರು 'ಕಾಟನ್‌ ಪೇಟೆ'ನಲ್ಲಿ ಕಾಣಿಸಿಕೊಂಡಿದ್ದಾರೆ! ಏನಿದು ಸ್ಟೋರಿ? ಇಲ್ಲಿದೆ ಓದಿ.

ಕಾಟನ್‌ ಪೇಟೆಗೆ ಬಂದ್ರು 'ಬಾಲಿವುಡ್‌ ಬೆಡಗಿ' ಸನ್ನಿ ಲಿಯೋನ್‌! ಕಾರಣ ಏನಿರಬಹುದು?
Linkup
ಹಿಂದಿ ಸೇರಿದಂತೆ ದಕ್ಷಿಣ ಭಾರತದ ಕೆಲವು ಸಿನಿಮಾಗಳಲ್ಲಿ ಮಿಂಚಿರುವ ನಟಿ ಈಗ ಮತ್ತೆ ಕನ್ನಡದ ಸಿನಿಮಾವೊಂದರ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ಮಾಪಕ ಕನಕಪುರ ಶ್ರೀನಿವಾಸ್‌ ಅವರು ಬಂಡವಾಳ ಹೂಡಿರುವ ಹೊಸ ಚಿತ್ರದಲ್ಲಿ ಸನ್ನಿ ಅವರ ಸ್ಪೆಷಲ್‌ ಸಾಂಗ್‌ ಇರಲಿದೆ. ಇದು ಬಹುಭಾಷೆಯಲ್ಲಿತೆರೆ ಕಾಣಲಿರುವ ಚಿತ್ರವಾಗಿದ್ದು, ಕನ್ನಡದಲ್ಲಿಇದಕ್ಕೆ '' ಎಂಬ ಟೈಟಲ್‌ ಇಡಲಾಗಿದೆ. ಟಾಲಿವುಡ್‌ ನಿರ್ದೇಶಕ ವೈ. ರಾಜ್‌ಕುಮಾರ್‌ ಅವರು ಈ ಚಿತ್ರ ನಿರ್ದೇಶನ ಮಾಡಿದ್ದು, ಈ ಹಾಡಿನಲ್ಲಿತಾವು ಕೂಡ ಸನ್ನಿ ಲಿಯೋನ್‌ ಜತೆಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ ಕನಕಪುರ ಶ್ರೀನಿವಾಸ್‌. ಇದೇ ತಿಂಗಳ 27ರಿಂದ ಮೂರು ದಿನಗಳ ಕಾಲ ಈ ಹಾಡಿನ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯಲಿದೆ. 'ಈ ಹಿಂದೆಯೇ ಸ್ಪೆಷಲ್‌ ಸಾಂಗ್‌ನ ಚಿತ್ರೀಕರಣ ಮಾಡಬೇಕಿತ್ತು. ಕೊರೊನಾದಿಂದಾಗಿ ಇದು ಸಾಧ್ಯವಾಗಲಿಲ್ಲ. ಸನ್ನಿ ಲಿಯೋನ್‌ ಕೆಲವು ಕಂಡೀಷನ್ಸ್‌ ಹಾಕಿದ್ದಾರೆ. ಅದಕ್ಕೆಲ್ಲ ಒಪ್ಪಿಕೊಂಡು ಈ ಚಿತ್ರೀಕರಣ ಮಾಡಲಿದ್ದೇವೆ' ಎಂದಿದ್ದಾರೆ ಅವರು. ಈ ಸಿನಿಮಾದಲ್ಲಿ ಸನ್ನಿ ಲಿಯೋನ್‌ ಅವರ ಸಂಭಾವನೆ 50 ಲಕ್ಷ ರೂ. ದಾಟಬಹುದು ಎಂದು ಹೇಳಿರುವ ಕನಕಪುರ ಶ್ರೀನಿವಾಸ್‌, 'ವೈ. ರಾಜ್‌ಕುಮಾರ್‌ ಅವರ ಸಿನಿಮಾಗಳನ್ನು ನೋಡಿದ್ದೇನೆ. ತುಂಬಾ ಒಳ್ಳೆಯ ಡೈರೆಕ್ಟರ್‌ ಅವರು. ಈ ಚಿತ್ರದ ಕಂಟೆಂಟ್‌ ಎಲ್ಲಾ ಭಾಷೆಗೂ ಹೊಂದುತ್ತದೆ. ಹಾಗಾಗಿ ಈ ಸಿನಿಮಾಗೆ ಬಂಡವಾಳ ಹಾಕಿದ್ದೇನೆ. ಚಿತ್ರದಲ್ಲಿ ನಟಿಸಿರುವ ಕಲಾವಿದರೆಲ್ಲರೂ ಹೊಸಬರು. ಹೈದರಾಬಾದ್‌ನ ಭೂತ ಬಂಗಲೆಯಲ್ಲಿ ಚಿತ್ರೀಕರಣ ಮಾಡಲಾಗಿದೆ' ಎಂದಿದ್ದಾರೆ. ತೆಲುಗಿನಲ್ಲಿ 'ಸೀತಣ್ಣಪೇಟ ಗೇಟ್‌' ಎಂದು ಟೈಟಲ್‌ ಇಡಲಾಗಿರುವ ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಬಹುತೇಕ ಮುಗಿದಿದ್ದು, ಸನ್ನಿ ಲಿಯೋನ್‌ ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದೆ. ತೆಲುಗಿನಲ್ಲಿ ಇದರ ಟ್ರೇಲರ್‌ ಕೂಡ ರಿಲೀಸ್‌ ಆಗಿದೆ. ಇದು ಕ್ರೈಂ ಥ್ರಿಲ್ಲರ್‌ ಸಿನಿಮಾ ಎನ್ನಲಾಗುತ್ತಿದೆ. ಇದರ ಜೊತೆಗೆ ಅದಿತಿ ಪ್ರಭುದೇವ ಮತ್ತು ಬೆಳಗಾವಿ ಮೂಲದ ಹೊಸ ನಟ ಸಚಿನ್‌ ಧನ್‌ಪಾಲ್‌ ಎಂಬುವವರು ನಟಿಸುತ್ತಿರುವ 'ಚಾಂಪಿಯನ್‌' ಎಂಬ ಚಿತ್ರದ ವಿಶೇಷ ಹಾಡಿಗೆ ಅವರು ನೃತ್ಯ ಮಾಡಿದ್ದಾರೆ.