ಐವರು ನಿರ್ದೇಶಕರಿಂದ 'ಆದ್ದರಿಂದ' ಸಿನಿಮಾ; 'ಆಪರೇಷನ್‌ ಅಲಮೇಲಮ್ಮ' ಖ್ಯಾತಿಯ ರಿಷಿ ನಟನೆ

ಸ್ಯಾಂಡಲ್‌ವುಡ್‌ನ ಐವರು ಘಟಾನುಘಟಿ ನಿರ್ದೇಶಕರು ಒಟ್ಟಾಗಿ ಮಾಡುತ್ತಿರುವ ಸಿನಿಮಾವೊಂದು ತನ್ನ ಟೈಟಲ್‌ನಿಂದಾಗಿ ಗಮನ ಸೆಳೆದಿದೆ. ಇದರ ಬಗ್ಗೆ ಆ ನಿರ್ದೇಶಕರು ಮಾತನಾಡಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

ಐವರು ನಿರ್ದೇಶಕರಿಂದ 'ಆದ್ದರಿಂದ' ಸಿನಿಮಾ; 'ಆಪರೇಷನ್‌ ಅಲಮೇಲಮ್ಮ' ಖ್ಯಾತಿಯ ರಿಷಿ ನಟನೆ
Linkup
(ಹರೀಶ್‌ ಬಸವರಾಜ್‌) ಸೃಜನಶೀಲತೆಯ ಮೂರ್ತರೂಪದಂತಿರುವ ನಿರ್ದೇಶಕರ ಕಲ್ಪನೆಯಲ್ಲಿಮೂಡುವ ಸಿನಿಮಾಗಳು ಅದ್ಭುತ ಕಾವ್ಯವೇ ಹೌದು. ಅಂಥದರಲ್ಲಿಐವರು ಪ್ರತಿಭಾವಂತ ನಿರ್ದೇಶಕರು ಒಟ್ಟಾಗಿ ಸಿನಿಮಾ ಮಾಡಿದರೆ ಹೇಗಿರಬಹುದು? ಎಂಬೊಂದು ಕುತೂಹಲವನ್ನು ಕೆರಳಿಸಿದ್ದಾರೆ ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕರಾದ ಯೋಗರಾಜ್‌ ಭಟ್‌, , ಶಶಾಂಕ್‌, ಕೆ. ಎಂ. ಚೈತನ್ಯ ಮತ್ತು ಪವನ್‌ ಕುಮಾರ್‌. ಈ ಐವರು ಘಟಾನುಘಟಿಗಳು ಈಗ ಜೊತೆಯಾಗಿ ಸಿನಿಮಾವೊಂದವನ್ನು ಮಾಡುತ್ತಿದ್ದು, ಅದಕ್ಕೆ 'ಆದ್ದರಿಂದ' ಎಂಬ ವಿಭಿನ್ನ ಟೈಟಲ್‌ ಇಡಲಾಗಿದೆ. ವಿಭಿನ್ನ ಕಥೆಗಳು ಈ ಸಿನಿಮಾದಲ್ಲಿ ಐದು ಬೇರೆ ಬೇರೆ ಕಥೆಗಳಿದ್ದು, ಅದನ್ನು ಈ ಪಂಚ ನಿರ್ದೇಶಕರು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಚೈತನ್ಯ, ಜಯತೀರ್ಥ, ಶಶಾಂಕ್‌ ತಮ್ಮ ಕಥೆಗಳನ್ನು ನಿರ್ದೇಶನ ಮಾಡಿ ಮುಗಿಸಿದ್ದು, ಸದ್ಯಕ್ಕೆ ಯೋಗರಾಜ್‌ ಭಟ್ಟರ ಕಥೆಯ ಚಿತ್ರೀಕರಣ ನಡೆಯುತ್ತಿದೆ. 'ನಾವೆಲ್ಲರೂ ಒಟ್ಟಿಗೆ ಚರ್ಚೆ ಮಾಡಿದ ಬಳಿಕ ನಾಲ್ಕು ಕಥೆಗಳಿಗೂ ಈ ಟೈಟಲ್‌ ತುಂಬಾ ಸೂಕ್ತವೆಂದು ಅನಿಸಿತು. ಎಲ್ಲ ಕಥೆಗಳಲ್ಲಿಯೂ ವಿಶಿಷ್ಟವಾದ ನಿರೂಪಣೆ ಶೈಲಿಯಿದೆ. ಎಲ್ಲರಿಗೂ ಈ ಟೈಟಲ್‌ ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್‌ ಆಗಿದೆ ಎನ್ನುವ ಭಾವನೆ ಬಂತು. ಹಾಗಾಗಿ ಇದನ್ನು ಫೈನಲ್‌ ಮಾಡಿದ್ದೇವೆ. ನನ್ನ ಕತೆಯಲ್ಲಿಪುನೀತ್‌ ಬಿ. ಎ, ಧನ್‌ರಾಜ್‌, ಶ್ರೇಯಾ ಕೃಷ್ಣನ್‌ ಎಂಬ ಹೊಸಬರ ಜತೆಗೆ 'ಆಪರೇಷನ್‌ ಅಲಮೇಲಮ್ಮ' ಖ್ಯಾತಿಯ ರಿಷಿ, ವಂಶೀಧರ್‌ ಭೋಗರಾಜ್‌, ಸನಿಹಾ ಯಾದವ್‌ ನಟಿಸುತ್ತಿದ್ದಾರೆ' ಎಂದು ನಿರ್ದೇಶಕ ಕೆ ಎಂ ಚೈತನ್ಯ ಹೇಳಿದ್ದಾರೆ. ಆದ್ದರಿಂದ ಹೀಗಾಯಿತು ಯೋಗರಾಜ್‌ ಭಟ್ಟರು ಇತ್ತೀಚೆಗಷ್ಟೇ ಬೆಂಗಳೂರು, ರಾಮನಗರದ ಬೆಟ್ಟ ಗುಡ್ಡಗಳಲ್ಲಿ ನಾಲ್ಕು ದಿನಗಳ ಚಿತ್ರೀಕರಣ ಕಂಪ್ಲೀಟ್‌ ಮಾಡಿದ್ದಾರೆ. 'ಸಾಕಷ್ಟು ವಿಷಯಗಳನ್ನು ಮಾತನಾಡುವಾಗ ಬಿಕಾಸ್‌ ಆಫ್‌ ಎಂದು ಬಳಸುತ್ತೇವೆ. ಈ ಸಿನಿಮಾ ನೋಡಿದಾಗ, 'ಹೋ, ಆದ್ದರಿಂದ ಹೀಗಾಯಿತು' ಎನ್ನುವ ಭಾವನೆ ನೋಡುಗರಿಗೆ ಬರುತ್ತದೆ. ಆ ದೃಷ್ಟಿಯಲ್ಲಿ ಯೋಚನೆ ಮಾಡಿ ಈ ಟೈಟಲ್‌ ಫೈನಲ್‌ ಮಾಡಿದ್ದೇವೆ. ನನ್ನ ಸಿನಿಮಾದಲ್ಲಿ ಕಾಮಿಡಿ ಕಿಲಾಡಿಗಳು ಗೋವಿಂದೇಗೌಡ, ದಿವ್ಯಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಹಳ ಚೆನ್ನಾಗಿ ಈ ಸಿನಿಮಾ ಮೂಡಿ ಬಂದಿದೆ' ಎಂದಿದ್ದಾರೆ ಅವರು. ಕ್ಯಾಚಿ ಪದ ಈ ಪ್ರಾಜೆಕ್ಟ್ ಬಗ್ಗೆ ಹೇಳಿರುವ ನಿರ್ದೇಶಕ ಶಶಾಂಕ್‌, 'ಈಗ ಚಿತ್ರೀಕರಣ ಮುಗಿದಿರುವ ನಾಲ್ಕು ಕಥೆಗಳು ವಿಶಿಷ್ಟ ಶೈಲಿಯಲ್ಲಿವೆ. ಹಾಗಾಗಿ 'ಆದ್ದರಿಂದ' ಟೈಟಲ್‌ ಫೈನಲ್‌ ಮಾಡಿದ್ದೇವೆ. ಇದು ಎಲ್ಲಾ ಕಥೆಗಳಿಗೂ ಸೂಟ್‌ ಆಗುತ್ತದೆ. ಈ ಪದ ಕ್ಯಾಚಿಯಾಗಿದೆ ಎಂದು ಅನಿಸಿತು. ನನ್ನ ಸಿನಿಮಾದಲ್ಲಿ ಸಂಜನಾ ಆನಂದ್‌ ನಾಯಕಿ ಮತ್ತು ಪ್ರಖ್ಯಾತ್‌ ಪರಮೇಶ್‌ ನಾಯಕರಾಗಿದ್ದಾರೆ. ಶಶಾಂಕ್‌ ಪುರುಷೋತ್ತಮ್‌ ಸಹ ನಟಿಸಿದ್ದಾರೆ. ಈ ಮೂವರ ಸುತ್ತಮುತ್ತ ಸಿನಿಮಾದ ಕಥೆ ನಡೆಯುತ್ತದೆ' ಎಂದಿದ್ದಾರೆ. ಈ ಸಿನಿಮಾದ ಎಲ್ಲಾ ಕಥೆಗಳಿಗೆ ಚೇತನ್‌ ಸೋಸ್ಕಾ ಮತ್ತು ಸುರೇಶ್‌ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ನಾಲ್ಕು ಕಥೆಗಳನ್ನು ನೋಡಿದ ನಂತರ ನಿರ್ದೇಶಕ ಪವನ್‌ ಕುಮಾರ್‌ ಅವರು ಅದಕ್ಕೆ ಇಂಟರ್‌ಲಿಂಕ್‌ ಆಗುವಂಥ ಕಥೆ ಬರೆದು, ಅವರ ಸಿನಿಮಾ ಮಾಡಲಿದ್ದಾರೆ. 'ಆದ್ದರಿಂದ' ಎನ್ನುವ ಸೌಂಡಿಂಗ್‌ ಚೆನ್ನಾಗಿದೆ. ಎಲ್ಲದಕ್ಕೂ ಒಂದು ಕಾರಣವಿರುತ್ತದೆ. ನಾವೆಲ್ಲರೂ ಒಟ್ಟಿಗೆ ಸೇರಿದ ಕಾರಣ ಎಫ್‌ಯುಸಿ ಆದ್ದರಿಂದ ಈ ಸಿನಿಮಾ ಆಗುತ್ತಿದೆ. ಹಾಗಾಗಿ ಈ ಟೈಟಲ್‌ ಫೈನಲ್‌ ಮಾಡಿದೆವು. ಕಥೆಗಳಲ್ಲಿಯೂ ಎಲ್ಲದಕ್ಕೂ ಒಂದು ಕಾರಣವಿದೆ ಎಂದು ನಿರ್ದೇಶಕ ಜಯತೀರ್ಥ ತಿಳಿಸಿದ್ದಾರೆ. ನನ್ನ ಸಿನಿಮಾದಲ್ಲಿ ಗಂಡ ಹೆಂಡತಿಯ ನೀತಿ, ಅನೀತಿಯ ಬಗ್ಗೆ ಚರ್ಚೆ ಮಾಡುತ್ತೇವೆ. ಹಾಗಾಗಿ ನನಗೂ 'ಆದ್ದರಿಂದ' ಎನ್ನುವ ಟೈಟಲ್‌ ಸೂಕ್ತ ಎನಿಸಿ ಒಪ್ಪಿಕೊಂಡೆ ಎಂದು ನಿರ್ದೇಶಕ ಯೋಗರಾಜ್‌ ಭಟ್‌ ಹೇಳಿದ್ದಾರೆ. ನಮ್ಮ ಕಥೆಯಲ್ಲಿರುವ ಕಂಟೆಂಟ್‌ ಮತ್ತು ಅದರ ನಿರೂಪಣಾ ಶೈಲಿಗೆ 'ಆದ್ದರಿಂದ' ಪದ ಬಹಳ ಹೊಂದಿಕೆಯಾಗುವುದರಿಂದ ಆ ಟೈಟಲ್‌ ಇಟ್ಟಿದ್ದೇವೆ ಎಂದು ನಿರ್ದೇಶಕ ಶಶಾಂಕ್‌ ಹೇಳಿದ್ದಾರೆ.