ಅದೊಂದು ಕೆಲಸ ಮಾಡಿದಿದ್ರೆ ಸಂಚಾರಿ ವಿಜಯ್ ಜೀವ ಉಳಿಯುತ್ತಿತ್ತು!

ಬೈಕ್‌ನಲ್ಲಿ ಹಿಂಬದಿ ಕುಳಿತಿದ್ದ ನಟ ಸಂಚಾರಿ ವಿಜಯ್ ಹೆಲ್ಮೆಟ್ ಹಾಕಿರಲಿಲ್ಲ. ರಸ್ತೆ ಅಪಘಾತ ಸಂಭವಿಸಿದಾಗ ಸಂಚಾರಿ ವಿಜಯ್ ಹೆಲ್ಮೆಟ್ ಧರಿಸಿದಿದ್ದರೆ, ತಲೆಗೆ ತೀವ್ರ ಪೆಟ್ಟು ಬೀಳುತ್ತಿರಲಿಲ್ಲ. ಹಾಗಂತ ಸಂಚಾರಿ ವಿಜಯ್‌ಗೆ ಚಿಕಿತ್ಸೆ ನೀಡಿದ್ದ ವೈದ್ಯ ಡಾ.ಅರುಣ್ ನಾಯಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅದೊಂದು ಕೆಲಸ ಮಾಡಿದಿದ್ರೆ ಸಂಚಾರಿ ವಿಜಯ್ ಜೀವ ಉಳಿಯುತ್ತಿತ್ತು!
Linkup
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ವಿಧಿವಶರಾಗಿದ್ದಾರೆ. ರಸ್ತೆ ಅಪಘಾತದಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ ನಟ ಸಂಚಾರಿ ವಿಜಯ್ ಇಂದು ಮುಂಜಾನೆ 3.34ರ ಸುಮಾರಿಗೆ ಕೊನೆಯುಸಿರೆಳೆದರು. ನಟ ಸಂಚಾರಿ ವಿಜಯ್ ಅವರ ದೇಹದಿಂದ ಅಂಗಾಂಗಗಳನ್ನು ದಾನ ಮಾಡಲಾಗಿದೆ. ರಸ್ತೆ ಅಪಘಾತ ಜೂನ್ 12ರ (ಶನಿವಾರ) ರಾತ್ರಿ ಸ್ನೇಹಿತ ನವೀನ್ ಮನೆಗೆ ನಟ ಸಂಚಾರಿ ವಿಜಯ್ ತೆರಳಿದ್ದರು. ಅಲ್ಲಿಂದ ವಾಪಸ್ ಬರುವಾಗ ಜೆಪಿ ನಗರದ ಏಳನೇ ಹಂತದಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ನಟ ಸಂಚಾರಿ ವಿಜಯ್ ತಲೆ ಮತ್ತು ತೊಡೆ ಭಾಗಕ್ಕೆ ತೀವ್ರ ಪೆಟ್ಟಾಗಿತ್ತು. ತಲೆ ಬುರುಡೆ ಫ್ರ್ಯಾಕ್ಚರ್ ಆಗಿತ್ತು. ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿತ್ತು. ಕೂಡಲೆ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಶಸ್ತ್ರಚಿಕಿತ್ಸೆ ನೆರವೇರಿಸಿದರೂ, ಫಲಕಾರಿಯಾಗಲಿಲ್ಲ. ಬ್ರೇನ್ ಫೇಲ್ಯೂರ್ ಮತ್ತು ಬ್ರೇನ್ ಡೆಡ್ ಆದ ಪರಿಣಾಮ ಸಂಚಾರಿ ವಿಜಯ್ ನಿಧನ ಹೊಂದಿದರು. ಹೆಲ್ಮೆಟ್ ಹಾಕಿದಿದ್ರೆ.? ಬೈಕ್‌ನಲ್ಲಿ ಹಿಂಬದಿ ಕುಳಿತಿದ್ದ ನಟ ಸಂಚಾರಿ ವಿಜಯ್ ಹೆಲ್ಮೆಟ್ ಹಾಕಿರಲಿಲ್ಲ. ರಸ್ತೆ ಅಪಘಾತ ಸಂಭವಿಸಿದಾಗ ಸಂಚಾರಿ ವಿಜಯ್ ಹೆಲ್ಮೆಟ್ ಧರಿಸಿದಿದ್ದರೆ, ತಲೆಗೆ ತೀವ್ರ ಪೆಟ್ಟು ಬೀಳುತ್ತಿರಲಿಲ್ಲ. ಹಾಗಂತ ಸಂಚಾರಿ ವಿಜಯ್‌ಗೆ ಚಿಕಿತ್ಸೆ ನೀಡಿದ್ದ ವೈದ್ಯ ಡಾ.ಅರುಣ್ ನಾಯಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ''ಹೆಲ್ಮೆಟ್ ಹಾಕಿದ್ರೆ ನಟ ಸಂಚಾರಿ ವಿಜಯ್ ಪ್ರಾಣಕ್ಕೆ ಕಂಟಕವಾಗುತ್ತಿರಲಿಲ್ಲ. ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಬೈಕ್ ಸವಾರಿ ಮಾಡುವಾಗ ಹೆಲ್ಮೆಟ್ ಹಾಕಿದ್ರೆ ಬ್ರೇನ್ ಫೇಲ್ಯೂರ್ ಆಗ್ತಿರ್ಲಿಲ್ಲ'' ಎಂದು ಡಾ.ಅರುಣ್ ನಾಯಕ್ ಹೇಳಿದ್ದಾರೆ. ಅಪಘಾತ ನಡೆದ 20 ನಿಮಿಷಗಳಲ್ಲಿ ಸಂಚಾರಿ ವಿಜಯ್ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಗೆ ಬಂದಾಗಲೇ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಉಸಿರಾಡುತ್ತಿದ್ದ ಕಾರಣ ಕೂಡಲೆ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು. ಆದರೆ, ತಲೆಯಲ್ಲಿನ ಊತ ಕಡಿಮೆ ಆಗಲಿಲ್ಲ. ಕೋಮಾಕ್ಕೆ ಜಾರಿದ ನಟ ಸಂಚಾರಿ ವಿಜಯ್ ಬ್ರೇನ್ ಫೇಲ್ಯೂರ್ ಮತ್ತು ಬ್ರೇನ್ ಡೆಡ್ ಆಯ್ತು. ಪರಿಣಾಮ ಸಂಚಾರಿ ವಿಜಯ್ ಬಾರದ ಲೋಕಕ್ಕೆ ಸಂಚರಿಸಿದರು. ಬಹುಶಃ ಹೆಲ್ಮೆಟ್ ಧರಿಸಿದ್ರೆ ಸಂಚಾರಿ ವಿಜಯ್ ಉಳಿಯುತ್ತಿದ್ದರೇನೋ.. ಆದರೆ, ವಿಧಿಲಿಖಿತವೇ ಬೇರೆ ಆಗಿತ್ತು. ವಿಧಿಯಾಟವನ್ನು ಬಲ್ಲವರಾರು?