Mafia: ಪ್ರಜ್ವಲ್‌ ದೇವರಾಜ್‌ 'ಮಾಫಿಯಾ'ಗೆ ಸಾಥ್ ನೀಡಿದ 'ದುನಿಯಾ' ವಿಜಯ್!

'ಮಮ್ಮಿ', 'ದೇವಕಿ' ಸಿನಿಮಾಗಳ ಖ್ಯಾತಿಯ ಲೋಹಿತ್ ಈಗ 'ಮಾಫಿಯಾ' ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಪ್ರಜ್ವಲ್ ದೇವರಾಜ್ ನಾಯಕರಾಗಿರುವ ಈ ಸಿನಿಮಾದ ಮುಹೂರ್ತ ಸಮಾರಂಭ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಬಡಾವಣೆಯ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಈಚೆಗೆ ನೆರವೇರಿತು. ಮೊದಲ ದೃಶ್ಯಕ್ಕೆ 'ದುನಿಯಾ' ವಿಜಯ್ ಆರಂಭ ಫಲಕ ತೋರಿದರು.

Mafia: ಪ್ರಜ್ವಲ್‌ ದೇವರಾಜ್‌ 'ಮಾಫಿಯಾ'ಗೆ ಸಾಥ್ ನೀಡಿದ 'ದುನಿಯಾ' ವಿಜಯ್!
Linkup
'ಡೈನಾಮಿಕ್ ಪ್ರಿನ್ಸ್' ಪ್ರಜ್ವಲ್ ದೇವರಾಜ್ ಮತ್ತು ನಟನೆಯ '' ಸಿನಿಮಾದ ಮುಹೂರ್ತ ಸಮಾರಂಭ ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಬಡಾವಣೆಯ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಈಚೆಗೆ ನೆರವೇರಿತು. ಮೊದಲ ದೃಶ್ಯಕ್ಕೆ 'ದುನಿಯಾ' ವಿಜಯ್ ಆರಂಭ ಫಲಕ ತೋರಿದರು. ಪ್ರಿಯಾಂಕ ಉಪೇಂದ್ರ ಕ್ಯಾಮೆರಾ ಚಾಲನೆ ಮಾಡಿದರು. ಟಗರು, ಸಲಗ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಚಿತ್ರತಂಡಕ್ಕೆ ಹಾರೈಸಿದರು. 'ಮಮ್ಮಿ', 'ದೇವಕಿ' ಸಿನಿಮಾಗಳ ಖ್ಯಾತಿಯ ಲೋಹಿತ್ 'ಮಾಫಿಯಾ' ಸಿನಿಮಾಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಪ್ರಜ್ವಲ್‌ರನ್ನು ಹೊಗಳಿದ ವಿಜಯ್‌ಪ್ರಜ್ವಲ್‌ ದೇವರಾಜ್‌ ಅವರನ್ನು ಹೊಗಳಿದ ನಟ 'ದುನಿಯಾ' ವಿಜಯ್‌, 'ಪ್ರಜ್ವಲ್ ಮತ್ತು ನಾನು ಜಿಮ್ ಸ್ನೇಹಿತರು. ಪ್ರಜ್ವಲ್‌ಗೆ ಅಹಂಕಾರ ಇಲ್ಲ. ಹಾಗೆಯೇ ಅದಿತಿ ಪ್ರಭುದೇವ ಅವರು ಚಿತ್ರರಂಗಕ್ಕೆ ಮಹಾಲಕ್ಷ್ಮೀ ಇದ್ದ ಹಾಗೆ. ಅವರ ಅನೇಕ ಚಿತ್ರಗಳು ಸಾಲಾಗಿ ಸೆಟ್ಟೇರುತ್ತಿವೆ. ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವ ಲೋಹಿತ್, ನಾನು ನಟಿಸಿದ್ದ 'ಜಯಮ್ಮನ ಮಗ' ಮತ್ತು 'ರಜನಿಕಾಂತ್' ಸಿನಿಮಾಗಳಿಗೆ ಕೆಲಸ ಮಾಡಿದ್ದರು. ಆಗ ಲೋಹಿತ್ ತುಂಬ ಚಿಕ್ಕ ಹುಡುಗ. ಈಗಲೂ ಆತ ಚಿಕ್ಕವನೇ. ಇಡೀ ತಂಡಕ್ಕೆ ಶುಭವಾಗಲಿ. ಈ ಚಿತ್ರ ಯಶಸ್ವಿಯಾಗಲಿ' ಎಂದು ಹಾರೈಸಿದರೆ, ನಂತರ ಮಾತನಾಡಿದ ಪ್ರಿಯಾಂಕಾ ಉಪೇಂದ್ರ, 'ನನಗೆ 'ಮಮ್ಮಿ' ಚಿತ್ರದ ಕಥೆ ಹೇಳಲು ಲೋಹಿತ್ ಬಂದಾಗ, ಅವರಿಗೆ 19 -20 ವಯಸ್ಸು ಇರಬೇಕು. ಈಗ 'ಮಾಫಿಯಾ'ದಂತಹ ಕಮರ್ಷಿಯಲ್ ಚಿತ್ರ ನಿರ್ದೇಶಿಸುತ್ತಿದ್ದಾರೆ . ಅವರಿಗೆ ಹಾಗೂ ಚಿತ್ರತಂಡಕ್ಕೆ ಶುಭಾಶಯಗಳು' ಎಂದರು. ಪೊಲೀಸ್ ಪಾತ್ರದಲ್ಲಿ ಪ್ರಜ್ವಲ್‌'ಮಾಫಿಯಾ' ಬಗ್ಗೆ ಮಾತನಾಡುವ , 'ಲೋಹಿತ್ ಹೇಳಿದ ಕಥೆ ಇಷ್ಟವಾಯಿತು. ಈ ಚಿತ್ರದಲ್ಲಿ ನಾನು ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಚಿಕ್ಕ ವಯಸ್ಸಿನಿಂದ ಯಾರು ಇಲ್ಲದ ಹುಡುಗನಿಗೆ ಗೆಳೆಯನ ಮೇಲೆ ಹೆಚ್ಚು ಪ್ರೀತಿ ಇರುತ್ತದೆ. ಅವನ ಗೆಳೆಯ ಕೂಡ ಇಮ್ಸ್‌ಪೆಕ್ಟರ್ ಆಗಿರುತ್ತಾನೆ. ಆತನನ್ನು ನೋಡಿ ಹೀರೋ, ತಾನು ಕೂಡ ಪೊಲೀಸ್ ಇನ್ಸ್‌ಪೆಕ್ಟರ್ ಆಗಬೇಕು ಎಂದುಕೊಳ್ಳುತ್ತಾನೆ. ಹೀಗೆ ಉತ್ತಮ ಕಥೆಯೊಂದಿಗೆ ಈ ಚಿತ್ರ ಸಾಗುತ್ತದೆ‌. ನನ್ನ ತಂದೆ ದೇವರಾಜ್ ಅವರು ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದಿತಿ ಪ್ರಭುದೇವ, ಒರಟ ಪ್ರಶಾಂತ್ ಮುಂತಾದವರ ಅಭಿನಯಿಸುತ್ತಿರುವುದು ಖುಷಿ ತಂದಿದೆ. ಈ ಚಿತ್ರಕ್ಕಾಗಿ ಎರಡು ವರ್ಷಗಳಿಂದ ಬೆಳೆಸಿದ ಕೂದಲನ್ನು ಕತ್ತರಿಸಿ, ಹೊಸ ಲುಕ್‌ನಲ್ಲಿ ಸಿದ್ದವಾಗಿದ್ದೇನೆ‌' ಎಂದರು. ಪತ್ರಕರ್ತೆಯಾದ ಅದಿತಿನಟಿ ಅದಿತಿ ಪ್ರಭುದೇವ ಈ ಸಿನಿಮಾದಲ್ಲಿ ಪತ್ರಕರ್ತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ನಾನು ಈ ಚಿತ್ರದಲ್ಲಿ ತನಿಖಾ ಪತ್ರಕರ್ತೆಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಅದಕ್ಕಾಗಿ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದೇನೆ. ನನಗೆ ಮಾಧ್ಯಮದಲ್ಲಿ ಕೆಲವು ಸಮಯ ಕೆಲಸ ಮಾಡಿದ ಅನುಭವವಿದೆ. ಹಾಗಾಗಿ, ಈ ಪಾತ್ರ ನಿರ್ವಹಿಸುವುದು ಸ್ವಲ್ಪ ಸುಲಭವಾಗಬಹುದು ಎಂದುಕೊಂಡಿದ್ದೇನೆ. ಪ್ರಜ್ವಲ್ ಅವರೊಟ್ಟಿಗೆ ಮೊದಲ ಬಾರಿ ನಟಿಸುತ್ತಿದ್ದೇನೆ' ಎನ್ನುತ್ತಾರೆ ಅದಿತಿ‌ ಪ್ರಭುದೇವ. ಚಿತ್ರದ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ಲೋಹಿತ್, 'ಇದೊಂದು ಕಂಟೆಂಟ್ ಓರಿಯಂಟೆಡ್ ಚಿತ್ರ. ಪ್ರಜ್ವಲ್ ಅವರು ನೀಡುತ್ತಿರುವ ಸಹಕಾರ ಅಪಾರ. ಅದಿತಿ ಪ್ರಭುದೇವ, ದೇವರಾಜ್, ಒರಟ ಪ್ರಶಾಂತ್, ಸಾಧು ಕೋಕಿಲ ಮುಂತಾದವರು ನಮ್ಮ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಡಿ.6ರಿಂದ ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಶುರುವಾಗಲಿದೆ. ‌ಆನಂತರ ಹೈದರಾಬಾದ್‌ನ ರಾಮೋಜಿ‌ ಫಿಲಂ ಸಿಟಿಯಲ್ಲಿ ಚಿತ್ರೀಕರಣ ಮಾಡಲಿದ್ದೇವೆ. ಐದು ಹಾಡುಗಳಿದ್ದು, ಅನೂಪ್ ಸೀಳಿನ್ ಸಂಗೀತ ನೀಡುತ್ತಿದ್ದಾರೆ. ಈಗಾಗಲೇ ‌ಎರಡು ಹಾಡುಗಳು ಸಿದ್ಧವಾಗಿದೆ. ತರುಣ್ ಈ ಚಿತ್ರದ ಛಾಯಾಗ್ರಹಕರು. ಬೆಂಗಳೂರು ಕುಮಾರ್ ಬಂಡವಾಳ ಹೂಡುತ್ತಿದ್ದಾರೆ' ಎಂದು ತಿಳಿಸಿದರು. ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆಯುತ್ತಿದ್ದು, 'ಒರಟ' ಪ್ರಶಾಂತ್ ಮುಖ್ಯ ಪಾತ್ರ ಮಾಡುತ್ತಿದ್ದಾರೆ. ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಅವರಿಗೆ ಇದು 666ನೇ ಸಿನಿಮಾ.